Saturday, February 7, 2026
Homebig breakingಮನೆಗೆ ನುಗ್ಗಿ ೨೦ ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ ಕಾಮುಕ - ಹಾಸನ ಮೂಲದ ಆರೋಪಿ...

ಮನೆಗೆ ನುಗ್ಗಿ ೨೦ ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ ಕಾಮುಕ – ಹಾಸನ ಮೂಲದ ಆರೋಪಿ ಬಂಧನ..

ರಾಮನಗರ : ಮನೆಗೆ ನುಗ್ಗಿ ಯುವತಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ರಾಮನಗರದ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಒಡಿಸ್ಸಾ ಮೂಲದ ಕುಟುಂಬ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡಿಕೊಂಡು ವಾಸವಿತ್ತು. ಕಾರ್ಮಿಕ ಕುಟುಂಬದ 20 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಲಾಗಿದೆ. ಹಾಸನ ಮೂಲದ ಮಂಜು ಆಲಂ(32) ಕೃತ್ಯವೆಸಗಿದ ವ್ಯಕ್ತಿ ಎಂಬ ಆರೋಪ ಕೇಳಿಬಂದಿದ್ದು, ಆತನನ್ನು ಬಿಡದಿ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿರುವ ಕುಟುಂಬ ಸದಸ್ಯರು ನಿನ್ನೆ ಮನೆಗೆ ಬರೋದು ತಡವಾಗಿದೆ. ಮನೆಯವರ ಬರುವಿಕೆಗಾಗಿ ಕಾಯುತ್ತಾ ಕುಳಿತಿದ್ದಾಳೆ. ಮನೆಯಲ್ಲಿ ಒಬ್ಬಂಟಿಯಾಗಿರುವುದನ್ನು ಗಮನಿಸಿದ ಕಾಮುಕ, ಮನೆಗೆ ನುಗ್ಗಿದ್ದಾನೆ. ಯುವತಿಯ ಪ್ರತಿರೋಧವನ್ನೂ ಲೆಕ್ಕಿಸದೆ ದೌರ್ಜನ್ಯವೆಸಗಿ ಎಸ್ಕೇಪ್‌ ಆಗಿದ್ದಾನೆ.
ಯುವತಿ ಮನೆ ಸದಸ್ಯರು ಆಗಮಿಸಿದ ವೇಳೆ ಕೃತ್ಯ ನಡೆದಿರೋದು ಗೊತ್ತಾಗಿದೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಆಸ್ಪತ್ರೆಗೆ ಆಗಮಿಸಿ ದೂರು ಪಡೆದುಕೊಂಡಿದ್ದಾರೆ.
ಆರೋಪಿ ಮಂಜು ಆಲಂ ವಿವಾಹಿತನಾಗಿದ್ದು, ಮಕ್ಕಳು ಕೂಡಾ ಇದ್ದಾರೆ. ಬಿಡದಿಯ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!