ಚಿಕ್ಕಮಗಳೂರು: ಕಾರ್ಯನಿರ್ವಹಿಸುತ್ತಿದ್ದ ಫಾರೆಸ್ಟ್ ಗಾರ್ಡ್ ನಿಗೂಢವಾಗಿ ನಾಪತ್ತೆಯಾಗಿರುವಂತಹ ಘಟನೆ ಕಡೂರು ತಾಲೂಕಿನ ನೀಲಗಿರಿ ಪ್ಲಾಂಟೇಶನ್ನಲ್ಲಿ ನಡೆದಿದೆ. ನೂರಾರು ಅರಣ್ಯ ಸಿಬ್ಬಂದಿ ಸೇರಿ ಪೊಲೀಸರು, ಅರಣ್ಯದಲ್ಲಿ ಹುಡುಕಾಟ ನಡೆಸಿದರೂ ಕಳೆದ 6 ದಿನಗಳಿಂದ ಮಾತ್ರ ಗಾರ್ಡ್ ಸುಳಿವು ಮಾತ್ರ ಎಲ್ಲೂ ಕೂಡ ಸಿಕ್ಕದಿರುವುದೇ ದೊಡ್ಡ ಆಶ್ಚರ್ಯವಾಗಿದೆ ಕೂಡಿದೆ.

ಮಂಗಳೂರಿನ ಸುಳ್ಯದಿಂದ ಕಳೆದ 6 ತಿಂಗಳ ಹಿಂದೆ ವರ್ಗಾವಣೆಯಾಗಿ ಬಂದಿದ್ದ 33 ವರ್ಷದ ಫಾರೆಸ್ಟ್ ಗಾರ್ಡ್ ಶರತ್ ಕೊಡಗು ಜಿಲ್ಲೆಯ ಕಾಲೂರು ಗ್ರಾಮದವರಾಗಿದ್ದರು. ಕಳೆದ 6 ದಿನಗಳಿಂದ ನಾಪತ್ತೆಯಾಗಿದ್ದು ಕಡೂರು ತಾಲೂಕಿನ ಸಖರಾಯಪಟ್ಟಣ ಅರಣ್ಯ ವಿಭಾಗಕ್ಕೆ ವರ್ಗಾವಣೆಯಾಗಿ ಬಂದಿದ್ದರು.
ನೀಲಗಿರಿ ಪ್ಲಾಂಟೇಶನ್ ಸಮೀಪದ ಅರಣ್ಯದಲ್ಲಿ ಶರತ್ ಬೈಕ್ ಪತ್ತೆಯಾಗಿದ್ದು ಬೈಕ್ ಸಿಕ್ಕ ಸ್ಥಳದಿಂದ ಎರಡು ಕಿಮೀ ದೂರದಲ್ಲಿ ಬಟ್ಟೆ ಸಿಕ್ಕಿದ್ದು ಹೀಗಾಗಿ ನಾಪತ್ತೆ ಬಗ್ಗೆ ನೂರಾರು ಸಂಶಯಗಳು ಮೂಡಿಬಂದಿವೆ. ಶರತ್ ನಾಪತ್ತೆ ಸಂಬಂಧ ಪೋಷಕರು ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಖರಾಯಪಟ್ಟಣ ಪೊಲೀಸರು ಹಗಲು ರಾತ್ರಿ ಹುಡುಕಾಟ ನಡೆಸಿದ್ದು ಈವರೆಗೂ ಯಾವುದೇ ಕುರುಹು ಸಹ ಪತ್ತೆಯಾಗಿಲ್ಲ ಆದ್ದರಿಂದ ಯಾವುದಾದರೂ ಕಾಡು ಪ್ರಾಣಿಗಳ ದಾಳಿಗೆ ತುತ್ತಾಗಿರಬಹುದೆಂಬ ಶಂಕೆಯಲ್ಲೂ ಪೊಲೀಸರು ಅನುಮಾನಿಸಿದ್ದು ಈ ನಿಟ್ಟಿನಲ್ಲೂ ತನಿಖೆ ನಡೆಸಲಾಗುತ್ತಿದೆ.
ಶರತ್ ನಿಗೂಢವಾಗಿ ಕಣ್ಮರೆ ಆಗಿರುವುದು ನೂರಾರು ಅನುಮಾನಕ್ಕೆ ಕಾರಣವಾಗಿದ್ದು ಪೊಲೀಸರು ಸ್ಥಳಿಯರ ಮಾಹಿತಿ ಪಡೆದು ಗಾಢವಾಗಿ ತನಿಖೆ ನಡೆಸಲು ಆರಂಭಿಸಿದ್ದಾರೆ.
