Wednesday, March 25, 2026
Homeಜಿಲ್ಲಾಸುದ್ದಿಮೂಡಿಗೆರೆ: ಶಾಸಕರೇ ವೋಟು ಕೇಳುವಾಗ ಇದ್ದ ವಿನಯತೇ ಈಗ ನಿಮ್ಮ ಜನರ ಕಷ್ಟ ಅರ್ಥವಾಗುತ್ತಿಲ್ಲವೇ?: ಫಾರಿನ್‌...

ಮೂಡಿಗೆರೆ: ಶಾಸಕರೇ ವೋಟು ಕೇಳುವಾಗ ಇದ್ದ ವಿನಯತೇ ಈಗ ನಿಮ್ಮ ಜನರ ಕಷ್ಟ ಅರ್ಥವಾಗುತ್ತಿಲ್ಲವೇ?: ಫಾರಿನ್‌ ಟ್ರಿಪ್‌ ಹೆಚ್ಚಾಯ್ತ?

ಚಿಕ್ಕಮಗಳೂರು: ಇತ್ತೀಚೆಗೆ ಮೂಡಿಗೆರೆ ಕ್ಷೇತ್ರದ ಸುತ್ತಮುತ್ತ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು ಬಡವರು, ಸಣ್ಣ ಹಾಗೂ ಅತಿಸಣ್ಣ ರೈತರಿಗೆಗೆ ಬಹಳ ಹಾನಿವುಂಟು ಮಾಡಿದ್ದು ರೈತರ ಹೊಟ್ಟೆಯ ಮೇಲೆ ಬರೆ ಎಳೆದಂತಾಗಿದೆ. ಇಷ್ಟಾದರೂ ಆ ಊರಿನ ಶಾಸಕಿ ಅನಿಸಿಕೊಂಡ ಮಹಿಳೆ ಈ ಕಡೆ ಮುಖ ಮಾಡದೇ ಕೂತಿರೋದು ನೋಡಿದ್ರೆ ಆಶ್ಚರ್ಯವಾಗುತ್ತೆ. ವೋಟು ಕೇಳುವಾಗ ಮನೆಮನೆಗೂ ಹೋಗಿ ನಿಮ್ಮ ಸಮಸ್ಯೆಗಳಿಗೆ ನಾನಿದ್ದೀನಿ ಅಂದವರು ಈಗ ಆನೆ ಕಾಟದಿಂದ ಮನೆ ಹೊರಗಡೆ ಬರದೇ ಜನರು ಪರಿತಪಿಸುತ್ತಿದ್ದರೂ ಶಾಸಕರಾದವರು ಇತ್ತ ಊರಿಗೂ ಬರದೇ ಆ ಕಡೆ ಕಾಡಾನೆಗಳ ಬಗ್ಗೆ ಕಳವಳ ವ್ಯಕ್ತಪಡಿಸದೇ ಎಲ್ಲೋಗಿ ಕೂತಿದ್ದಾರೆ ಅನ್ನೋದೆ ಸಾರ್ವಜನಿಕರಲ್ಲಿ ಪ್ರಶ್ನೆ ಮೂಡಿದೆ.

ಹೌದು ಓಟು ಹಾಕಿಸಿಕೊಳ್ಳುವಾಗ ನಮ್ಮ ನೆನಪು ಇದ್ದಷ್ಟು ನಮಗೆ ತೊಂದರೆಯಾದಾಗ ನೆನಪು ಆಗಲ್ವಾ? ಎಂದು ಶಾಸಕಿ ನಯನಾ ಮೋಟಮ್ಮನಿಗೆ ವೋಟ್‌ ಹಾಕಿದ ಸಾರ್ವಜನಿಕರೇ ಈಗ ಅವರ ವಿರುದ್ಧ ದಂಗೆ ಏಳುವಂತ ಪರಿಸ್ಥಿತಿ ನಿರ್ಮಾಣವಾದಂತಿದೆ. ನಾವು ಎಷ್ಟು ದಿನ ಹೀಗೆ ಹೆದರಿ ಮನೆಯೊಳಗೆ ಕೂರುವುದು ಇಲ್ಲಿ ಒಂದು ಹೆಣ ಬಿದ್ದ ಮೇಲೆ ನಮ್ಮ ಕಡೆ ತಿರುಗಿ ನೋಡುತ್ತೀರಾ ಎಂದು ಜನ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಕ್ಷೇತ್ರದ ಅಭಿವೃದ್ಧಿಯಲ್ಲಿ ನಿಮ್ಮ ಪಾತ್ರವೇನು? ಯಾಕಿಷ್ಟು ಜನತೆ ಬಗ್ಗೆ ತಾತ್ಸಾರ? ನಿಮ್ಮನ್ನು ಗೆಲ್ಲಿಸಿದ್ದು ಯಾಕೆ? ಗೆದ್ದ ಮೇಲೆ ನೀವು ನೀಡಿದ ಆಶ್ವಾಸನೆ ಸತ್ತು ಹೋಗಿದೆ? ಅಧಿಕಾರದ ತೆವಲು ತೀರಿಸಿಕೊಳ್ಳಲು ರಾಜಕೀಯಕ್ಕೆ ಬಂದಿರೆ? ಆನೆ ಹಾವಳಿ ಬಗ್ಗೆ ನಿಮ್ಮ ಪ್ರತಿಕ್ರಿಯೆ ಯಾಕಿಲ್ಲ? ಆನೆ ತಡೆಗೆ ರಾಜ್ಯ ಸರ್ಕಾರದ ಗಮನಕ್ಕೆ ತರುವಲ್ಲಿ ವಿಫಲತೆ ಯಾಕೆ? ಒಂದಲ್ಲ ಎರಡಲ್ಲ ಸಾಲು ಸಾಲು ಪ್ರಶ್ನೆಗಳನ್ನು ಮೂಡಿಗೆರೆ ಶಾಸಕರನ್ನು ಪ್ರಶ್ನಿಸಿದ ಸಾರ್ವಜನಿಕರು

ಹೌದು .. ಒಂದಲ್ಲ ಒಂದು ವಿವಾದಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಶಾಸಕಿ ನಯನ ಮೋಟಮ್ಮ ಅವರಿಗೆ ಸಾಲು ಸಾಲು ಪ್ರಶ್ನೆಗಳ ಸುರಿಮಾಲೆ ಇಟ್ಟ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಜನತೆ.ಸಮಸ್ಯೆಗಳ ಸಾಗರವಾಗಿರೋ ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ಉದ್ದಗಲಕ್ಕೂ ಬರಿ ಸೌಕರ್ಯಾಗಳ ಕೊರತೆ ಎದ್ದು ಕಾಣುತ್ತಿದ್ದೂ ಶಾಸಕರ ಮೌನಕ್ಕೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ

ಹಳ್ಳಿ ಪಟ್ಟಣ ಭಾಗಗಳಲ್ಲಿ ಬರಿ ಸಮಸ್ಯೆಯ ಮೂಟೆಗಳಿದ್ದರು ಕ್ಯಾರೇ ಎನ್ನದೆ ಜಾಲಿ ಟ್ರಿಪ್‌ ಗೆ ಹೆಚ್ಚು ಒತ್ತು ಕೊಡುತ್ತಿರುವ ಜನನಾಯಕಿ ಕ್ಷೇತ್ರದ ಜನತೆ ಬೇಸತ್ತು ಹೋಗಿದ್ದಾರೆ, ಇತ್ತೀಚಿನ ದಿನಗಳಲ್ಲಿ ತಾಲ್ಲೂಕಿನ ಸುತ್ತ ಮುತ್ತ ಪ್ರದೇಶಗಳಲ್ಲಿ ಕಾಡಾನೆ ಹಾವಳಿ ಹೆಚ್ಚಿದ್ದು ಅನೇಕ ರೈತರ ಅಸ್ತಿ ಪಾಸ್ತಿ ಬೆಳೆ ಹಾನಿ ಆಗಿದ್ದು ಜನನಾಯಕಿಯಾಗಿ ರೈತರ ಕಷ್ಟಗಳಿಗೆ ಸ್ಪಂದಿಸದೆ ಇರುವ ಶಾಸಕಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ತಾಲೂಕಿನಾದ್ಯಂತ ರಸ್ತೆಗಳು ಹಾಳಾಗಿದ್ದು ವಾಹನ ಸವಾರರ ಗೋಳು ಹೇಳಕೂಡದು ಹಾಗೆ ಕ್ಷೇತ್ರದಲ್ಲಿ ನಿರುದ್ಯೋಗ, ಶಿಕ್ಷಣ ಕೊರತೆ ಇದೆ ಯುವ ನಾಯಕಿಯಾಗಿ ಯುವ ಸಮೂಹದ ಕಿಂಚಿತ್ತೂ ಯೋಚಿಸದೆ ಇರುವ ನಾಯಕಿ ಬಗ್ಗೆ ಅಸಮಾಧಾನ ವ್ಯಕ್ತ ವಾಗಿದೆ. ಉನ್ನತ ಮಟ್ಟದ ಉಪಕರಣ ಕೊರತೆ ಆಸ್ಪತ್ರೆ ಯಲ್ಲಿ ಎದ್ದು ಕಾಣುತ್ತಿದ್ದು ಚಿಕ್ಕ ಮಕ್ಕಳ ಸಾವು ನೋವು ಕೂಡ ಇವರ ಕಣ್ಣಿಗೆ ಕಾಣುತ್ತಿಲ್ಲವೇ

ಒಟ್ಟಿನಲ್ಲಿ ಐಷಾರಾಮಿ ಬದುಕಿನಿಂದ ಹೊರ ಬಂದು ಇನ್ನುಳಿದ ಅಧಿಕಾರ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿ ಎಂಬುದು ಸಾರ್ವಜನಿಕರ ಮಾತಾಗಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!