ಚಿಕ್ಕಮಗಳೂರು: ಮೂಡಿಗೆರೆ ಟೈಲರ್ಸ್ ಸಂಘದಿಂದ ದುಂಡುಗ ಗ್ರಾಮದ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ಹಾಗೂ ವಿದ್ಯಾಭ್ಯಾಸಕ್ಕೆ ಸಂಬಂಧಿತ ಸಾಮಾಗ್ರಿಗಳನ್ನು ನೀಡಲಾಯಿತು.
ಸಂದರ್ಭದಲ್ಲಿ ಟೈಲರ್ಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಶಿವೇಗೌಡ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ಅಭಿಯಾನದಡಿ ವಿದ್ಯಾರ್ಥಿಗಳಿಗೆ ಸಾಕಷ್ಟು ಸೌಲಭ್ಯಗಳಿವೆ. ಇದನ್ನು ಬಳಸಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಬೇಕು ಹಾಗೂ ಶಾಲೆ ಹಾಜರಿ ಹೆಚ್ಚಿಸಲು ಶಿಕ್ಷಕ ವೃಂದ ಪೋಷಕರು ಹಾಗೂ ಎಸ್‌ಡಿಎಂಸಿ ಸಮಿತಿ ಶ್ರಮವಹಿಸಬೇಕು ಎಂದರು. ಇದೆ ವೇಳೆ 79ನೇ ಸ್ವತಂತ್ರ್ಯ ಆಚರಣೆ ಸಮೀಪವಿದ್ದು ವಿದ್ಯಾರ್ಥಿಗಳಿಗೆ ಶುಭ ಕೋರಲಾಯಿತು
ಈ ಸಂಧರ್ಭದಲ್ಲಿ ನಗರ ಅಧ್ಯಕ್ಷ ಉಮಾಶಂಕರ್, ಮುಖ್ಯಶಿಕ್ಷಕಿ ದೇವಕಿ, ಶಿಕ್ಷಕ ಕೃಷ್ಣ, ಎಸ್ ಡಿ ಎಂ ಸಿ. ಸದಸ್ಯರು, ಟೈಲರ್ಸ್ ಸಂಘದ ಷಣ್ಮುಖನಂದ, ಗಿರೀಶ್, ಸತೀಶ್, ಮಂಜು, ಪ್ರಕಾಶ್ ಮಂಜುಳಾ ಶ್ರುತಿ, ಮೋಹನ್ ಸೇರಿದಂತೆ ಶಿಕ್ಷಕರು ದುಂಡುಗ ಗ್ರಾಮಸ್ಥರು ಪಾಲ್ಗೊಂಡಿದ್ದರು.
