ಚಿಕ್ಕಮಗಳೂರು: ಕರುವಿನ ಮೇಲೆ ಮನಸ್ಸೋ ಇಚ್ಛೆ ಚಾಕು ಇರಿದು ವಿಕೃತಿ ಮೆರದ ಘಟನೆಯೊಂದು ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ಬಳಿ ನಡೆದಿದೆ.
ಹೌದು .. ಹೌಸಿಂಗ್ ಬೋರ್ಡ್ ನಿರ್ಜನ ಪ್ರದೇಶದಲ್ಲಿ ಕರುವಿನ ಮೇಲೆ ಮನಸ್ಸೋ ಇಚ್ಛೆ ಚಾಕುವಿನಿಂದ ಇರಿಯಲಾಗಿದ್ದು, ಸಾವು-ಬದುಕಿನ ನಡುವೆ ಹೋರಾಡ್ತಿದೆ. ಹೀಗಾಗಿ ಹಿಂದೂ ಸಂಘಟನೆಗಳು ಸಾವು-ಬದುಕಿನ ನಡುವೆ ಹೋರಾಡ್ತಿದ್ದ ಕರುವಿನ ರಕ್ಷಣೆ ಮಾಡಿ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಾಲೀಕರಿಗೆ ಒಪ್ಪಿಸಿದ್ದಾರೆ.
ಹಾಗೆ ಕರು ಮೇಲೆ ಮನಸ್ಸೋ ಇಚ್ಛೆ ಚಾಕು ಇರಿದವರ ಮೇಲೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಚಿಕ್ಕಮಗಳೂರು ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
