Wednesday, August 12, 2026
Homeಕ್ರೈಮ್ಕಡೂರು: ಮರದಿಂದ ಬಿದ್ದ ತೆಂಗಿನಕಾಯಿ ಮುಟ್ಟಿದ್ದಕ್ಕೆ ಹೊಡೆದು ಕೊಂದಿರುವ ತೋಟದ ಮಾಲೀಕ!

ಕಡೂರು: ಮರದಿಂದ ಬಿದ್ದ ತೆಂಗಿನಕಾಯಿ ಮುಟ್ಟಿದ್ದಕ್ಕೆ ಹೊಡೆದು ಕೊಂದಿರುವ ತೋಟದ ಮಾಲೀಕ!

Telegram Group
Join Now

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಅಮಾನವೀಯ ಘಟನೆ ನಡೆದಿದ್ದು . ಮರದಿಂದ ಬಿದ್ದ ತೆಂಗಿನಕಾಯಿ ಮುಟ್ಟಿದ್ದಕ್ಕೆ ಹೊಡೆದು ಕೊಂದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ

ಹೌದು . ಮರದಿಂದ ಬಿದ್ದ ತೆಂಗಿನಕಾಯಿ ಮುಟ್ಟಿದ್ದಕ್ಕೆ ಕಾರ್ಮಿಕನನ್ನೇ ಹೊಡೆದು ಸಾಯಿಸಿದ ತೋಟದ ಮಾಲೀಕ ಈ ಘಟನೆ ನಡೆದಿದ್ದು ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಗೊಲ್ಲರಹಟ್ಟಿ ಗ್ರಾಮದಲ್ಲಿ ಸಂಭವಿಸಿದೆ.ತೋಟದ ಮಾಲೀಕ ಮಧು ಎಂಬಾತ ಕೂಲಿ ಕಾರ್ಮಿಕ ಕುಮಾರ್ (37) ನನ್ನು ಗುದ್ದಲಿಯಿಂದ ಹೊಡೆದು ಸಾಯಿಸಿರುತ್ತಾನೆ.

ಘಟನೆಯ ವಿವರ:

ಮಧು ಎನ್ನವವನ ತೋಟದಲ್ಲಿ ಕುಮಾರ್ ಬಿದ್ದಿದ್ದ ತೆಂಗಿನಕಾಯಿ ತೆಗೆದುಕೊಂಡು ಹೋಗ್ತಿದ್ದ. ತೋಟದ ಮಾಲೀಕ ಮಧು ಈ ಹಿಂದೆ ಸಾಕಷ್ಟು ಬಾರಿ ಎಚ್ಚರಿಕೆಯನ್ನು ನೀಡಿದ್ದ. ನಿನ್ನೆ ಕೂಡ ತೆಂಗಿನಕಾಯಿ ತೆಗೆದುಕೊಂಡು ಹೋಗುವಾಗ ತೋಟದ ಮಾಲೀಕ ಮಧುಗೆ, ಕುಮಾರ್ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಮಧು ಗುದ್ದಲಿಯಿಂದ ಕುಮಾರ್ ಮೇಲೆ ಹಲ್ಲೆ ಮಾಡಿದ್ದಾನೆ.

ಮದ್ಯ ಸೇವಿಸಿ ಊಟ-ತಿಂಡಿ ಮಾಡಿರದ ಕಾರಣ ಕುಮಾರ್ ನಿತ್ರಾಣಗೊಂಡು ತೀವ್ರ ರಕ್ತಸ್ರಾವದಿಂದ ಅಲ್ಲೆ ಬಿದ್ದಿದ್ದನು. ಆಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾಸ್ಪತ್ರೆಯಲ್ಲಿ ಕುಮಾರ್ ಸಾವುನ್ನಪ್ಪಿದ್ದಾನೆ. ಸದ್ಯ ಸಖರಾಯಪಟ್ಟಣ ಪೋಲಿಸರು ಕೊಲೆ ಆರೋಪಿ ಮಧುನನ್ನು ಬಂಧಿಸಲಾಗಿದೆ.

ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments