Thursday, February 12, 2026
Homeಕ್ರೈಮ್ಕೊಪ್ಪ: ಮಾಜಿ ಸಚಿವ ದಿ.ಹೆಚ್.ಜಿ. ಗೋವಿಂದೇಗೌಡರ ಮನೆಯಲ್ಲಿ ಕಳ್ಳತನ ಕೇಸ್:‌ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಆರೋಪಿಗಳ...

ಕೊಪ್ಪ: ಮಾಜಿ ಸಚಿವ ದಿ.ಹೆಚ್.ಜಿ. ಗೋವಿಂದೇಗೌಡರ ಮನೆಯಲ್ಲಿ ಕಳ್ಳತನ ಕೇಸ್:‌ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಆರೋಪಿಗಳ ಬಂಧನ!

ಚಿಕ್ಕಮಗಳೂರು: ಮಲೆನಾಡ ಗಾಂಧಿ ಎಂದೇ ಹೆಸರಾಗಿದ್ದ ಮಾಜಿ ಸಚಿವ ದಿ.ಹೆಚ್.ಜಿ. ಗೋವಿಂದೇಗೌಡರ ಮನೆಯಲ್ಲಿ ಕಳ್ಳತನ ಪ್ರಕರಣದ ಮೂವರು ಆರೋಪಿಗಳನ್ನ ಕೊಪ್ಪ ಪೊಲೀಸರು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಬಂಧಿಸಿದ್ದಾರೆ.

ಹೌದು .. ಅಡಿಷನಲ್ ಎಸ್ ಪಿ ಜಯಕುಮಾರ ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ಬಾಲಾಜಿ ಸಿಂಗ್ ಹಾಗೂ ಪಿಎಸ್ಐ ಬಸವರಾಜ್ ಜಿ.ಕೆ ಹಾಗೂ ಪೇದೆಗಳಾದ ಯುವರಾಜ್ ಪ್ರಕಾಶ್ ತಿಪ್ಪೇಶ್ ಇವರ ನೇತೃತ್ವದಲ್ಲಿ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಆರೋಪಿಗಳನ್ನ ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಾಜಿ ಸಚಿವ ದಿ.ಹೆಚ್.ಜಿ. ಗೋವಿಂದೇಗೌಡ ಪುತ್ರ ಎಚ್.ಜಿ. ವೆಂಕಟೇಶ್ ವಾಸವಿರುವ ಕೊಪ್ಪ ತಾಲೂಕಿನ ಮಣಿಪುರ ಎಸ್ಟೇಟ್‍ನಲ್ಲಿ ಈ ಕಳ್ಳತನ ನಡೆದಿದ್ದು ಅಂತೂ ಕಳ್ಳರನ್ನ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಕ್ಕೆ ಶೃಂಗೇರಿ ಜನತೆ ಪೊಲೀಸರನ್ನ ಶ್ಲಾಘಿಸಿದ್ದಾರೆ.

ನೇಪಾಳ ಮೂಲದ ಮನೆಗೆಲಸದವರಿಂದಲೇ ಕಳ್ಳತನ ನಡೆದಿದೆ. ಗೋವಿಂದೇಗೌಡರ ಪುತ್ರ ವೆಂಕಟೇಶ್ ವಾಸವಿರುವ ಕೊಪ್ಪ ತಾಲೂಕಿನ ಮಣಿಪುರ ಎಸ್ಟೇಟ್‍ನಲ್ಲಿ ಈ ಕಳ್ಳತನ ನಡೆದಿದೆ. ಈ ಮನೆಗೆ ಕಳೆದ 15 ದಿನಗಳ ಹಿಂದಷ್ಟೇ ನೇಪಾಳ ಮೂಲದ ದಂಪತಿ ಕೆಲಸಕ್ಕೆ ಸೇರಿದ್ದರು. ಕಳೆದ ರಾತ್ರಿ ಮನೆಯಲ್ಲಿ ಎಲ್ಲರೂ ನಿದ್ರೆಗೆ ಜಾರಿದ್ದಾಗ, ದಂಪತಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಬಗ್ಗೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.. ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!