Wednesday, August 12, 2026
Homeಜಿಲ್ಲಾಸುದ್ದಿಬಾಳೆಹೊನ್ನೂರು: ಪಟ್ಟಣದಲ್ಲಿ ಬೀದಿನಾಯಿಗಳ ಕಾಟ: ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಒತ್ತಾಯ

ಬಾಳೆಹೊನ್ನೂರು: ಪಟ್ಟಣದಲ್ಲಿ ಬೀದಿನಾಯಿಗಳ ಕಾಟ: ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಒತ್ತಾಯ

Telegram Group
Join Now

ಎನ್‌ ಆರ್‌ ಪುರ: ಬಾಳೆಹೊನ್ನೂರು ಪಟ್ಟಣದಲ್ಲಿ ಬೀದಿ ನಾಯಿಗಳ ಕಾಟ ದಿನೇ ದಿನೇ ಹೆಚ್ಚಾಗುತ್ತಿದ್ದು ನಾಗರೀಕರಲ್ಲಿ ಆತಂಕದ ಮನೆ ಮಾಡಿದೆ. ಮಹಾನಗರಗಳಂತೆ ಇಲ್ಲಿ ಕೂಡ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ.

ಹೌದು .. ಎನ್‌ ಆರ್‌ ಪುರ ರಸ್ತೆಯಡೋಬಿ ಹಳ್ಳದ ಬಳಿ ಕೋಳಿ ತ್ಯಾಜ್ಯವನ್ನು ಹಳ್ಳದ ದಂಡೆಗೆ ಹಾಕುತ್ತಿರುವುದರಿಂದ ನಾಯಿಗಳು ಅಲ್ಲಿ ಗುಂಪು ಸೇರಿ ಕೊಬ್ಬುತ್ತಿವೆ. ಹಾಗೆ ಜನರ ಮೇಲೆ ಏಕಾಏಕಿ ದಾಳಿ ಮಾಡಲು ಮುಂದಾಗುತ್ತಿದ್ದು ಜನರಲ್ಲಿ ಮತ್ತಷ್ಟು ಆತಂಕ ಮನೆಮಾಡಿದೆ.

ಹಾಗೆ ಪಟ್ಟಣದ ಬಸ್‌ ಸ್ಟ್ಯಾಂಡ್‌ ಬಳಿ ಆವರಣದಲ್ಲಿ ಹತ್ತಕ್ಕೂ ಹೆಚ್ಚು ಬೀದಿ ನಾಯಿಗಳು , ಪೈ ಕಾಂಪ್ಲೆಕ್ಸ್‌ ಆವರಣದ ನೂತನ ಕಟ್ಟಡದಲ್ಲಿ 20ಕ್ಕೂ ಹೆಚ್ಚು ನಾಯಿಗಳು ಬೀಡು ಬಿಟ್ಟಿವೆ.

ವಿದ್ಯಾರ್ಥಿಗಳು, ಪಾದಚಾರಿಗಳುಹಾಗೂ ಸಾರ್ವಜನಿಕರು ಭಯಭೀತರಾಗಿದ್ದು ಗ್ರಾಮ ಪಂಚಾಯಿತಿ ಮತ್ತು ಪ್ರಾಣಿ ದಯಾ ಸಂಘದವರು ಶೀಘ್ರದಲ್ಲೇ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments