ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮುಂಡಗೋಡು ಗ್ರಾಮದ ಸಮೀಪದ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ದೈತ್ಯ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದೆ.
ಹೌದು .. ಮಳೆಯ ನಡುವೆಯೇ ನಿಧಾನವಾಗಿ ರಸ್ತೆಯನ್ನು ದಾಟುತ್ತಿದ್ದಾಗ ವಾಹನ ಸವಾರರು ಅದರ ದಾಟುವಿಕೆಗೆ ದಾರಿ ಮಾಡಿಕೊಟ್ಟರು.
ಶಿವಮೊಗ್ಗ – ಶೃಂಗೇರಿ- ಕುದುರೆಮುಖ ಘಾಟ್ ಮಾರ್ಗವಾಗಿ ಮಂಗಳೂರು ಸಂಪರ್ಕಿಸುವ ಪ್ರಮುಖ ಹೆದ್ದಾರಿಯಲ್ಲೇ ದೊಡ್ಡ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು.
ವಾಹನ ಸವಾರರು ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
