Sunday, February 15, 2026
Homeವಿಶೇಷ“Rolls Royce” ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಂಡ ಮಲೆನಾಡಿನ ಕುವರಿ!

“Rolls Royce” ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಂಡ ಮಲೆನಾಡಿನ ಕುವರಿ!

ಭಾರತದಲ್ಲಿ ರೋಲ್ಸ್‌ ರಾಯ್ ಕಾರು ಖರೀದಿಸುವುದು ಇನ್ನೂ ಅನೇಕ ಜನರ ದೊಡ್ಡ ಕನಸಾಗಿದೆ. ಆದರೆ ಭಾರತದ ಹಲವು ಸೆಲೆಬ್ರಿಟಿಗಳು ಹಾಗೂ ಉದ್ಯಮಿಗಳು ದುಬಾರಿ ಕಾರುಗಳ ದೊಡ್ಡ ಸಂಗ್ರಹವನ್ನು ಹೊಂದಿದ್ದಾರೆ. ಇನ್ನೂ ಯುವ ಉದ್ಯಮಿಗಳ ಸಂಖ್ಯೆಯ ಹೆಚ್ಚಳದೊಂದಿಗೆ ವಿದೇಶಿ ಐಷಾರಾಮಿ ಕಾರುಗಳನ್ನು ಖರೀದಿಸುವವರ ಸಂಖ್ಯೆಯು ಹೆಚ್ಚಳವಾಗಿದೆ.‌

ಹೌದು ಮಲೆನಾಡಿನ ಕುವರಿ ತುಳುನಾಡಿನ ಹೆಣ್ಣುಮಗಳು ರಿತುಪರ್ಣ ಕೆ.ಎಸ್, ವಿಶ್ವದ ಪ್ರತಿಷ್ಠಿತ ರೋಲ್ಸ್-ರಾಯ್ಸ್ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅತೀ ಕಿರಿಯ ವಯಸ್ಸಿನಲ್ಲಿ ತನ್ನ ಕನಸಿನಂತೆ “Rolls Royce” ಕಂಪೆನಿಯಲ್ಲಿ ಕೆಲಸ ಪಡೆಯಲು ಯಶಸ್ವಿಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ ಕೀರ್ತಿ ತರುವ ಮೂಲಕ ವಿದ್ಯಾರ್ಥಿ ಸಮುದಾಯಕ್ಕೂ ಪ್ರೇರಣೆಯಾಗಿದ್ದಾರೆ. ಕರ್ನಾಟಕದಿಂದ ಈ ಉನ್ನತ ಹುದ್ದೆಗೇರಿದ ಅತ್ಯಂತ ಕಿರಿಯ ಯುವತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಇವರು, ವಾರ್ಷಿಕ ₹72.3 ಲಕ್ಷ ಸಂಬಳದ ಪ್ಯಾಕೇಜ್ ಪಡೆದಿದ್ದಾರೆ.

ವೈದ್ಯೆಯಾಗಬೇಕೆಂಬ ಕನಸು ಕಂಡಿದ್ದ ತೀರ್ಥಹಳ್ಳಿ ಮೂಲದ ರಿತುಪರ್ಣ, ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ರೊಬೊಟಿಕ್ಸ್ ಮತ್ತು ಆಟೊಮೇಷನ್ ಇಂಜಿನಿಯರಿಂಗ್ ಪದವಿ ಪಡೆದು, ತಮ್ಮ ಪರಿಶ್ರಮದಿಂದ ಈ ಯಶಸ್ಸಿನ ಶಿಖರವೇರಿದ್ದಾರೆ. ತೀರ್ಥಹಳ್ಳಿ ಮೂಲದ ಮಂಗಳೂರು ನಿವಾಸಿಯಾಗಿದ್ದು ವ್ಯಾಸನಗರ ನಿವಾಸಿ ಸುರೇಶ್ ಹಾಗೂ ಗೀತಾ ದಂಪತಿ ಪುತ್ರಿ ರಿತುಪರ್ಣಗೆ ಬಾಲ್ಯದಲ್ಲಿ ವೈದ್ಯೆ ಆಗಬೇಕು ಎಂದು ಕನಸು ಇತ್ತು. ಆದರೆ ಕಾರಣಾಂತರಗಳಿಂದ ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ರೊಬೋಟಿಕ್ಸ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದರು.

ಇನ್ನೋವೇಶನ್ ಸಮ್ಮೇಳನದಲ್ಲಿ ಚಿನ್ನದ ಪದಕ ಪಡೆದ ರಿತುಪರ್ಣ, ಬಳಿಕ ರೋಲ್ಸ್ ರಾಯ್ಸ್ ಕಂಪನಿಗೆ ಇಂಟರ್ನ್ಶಿಪ್‌ಗೆಂದು ತೆರಳಿದ್ದರು. 8 ತಿಂಗಳ ಟಾಸ್ಕ್ ಟೆಸ್ಟ್‌ನಲ್ಲಿ ರಿತುಪರ್ಣರ ಚಾಕಚಕ್ಯತೆ ಕಂಡು ರೋಲ್ಸ್ ರಾಯ್ ಕಂಪನಿ ನೇರವಾಗಿ ನೇಮಕಾತಿ ಪತ್ರ ನೀಡಿದೆ.

ಪ್ರಸಕ್ತ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ರೋಬೋಟಿಕ್ ಆ್ಯಂಡ್ ಅಟೋಮೇಶನ್ ಕೋರ್ಸ್‌ನ 6ನೇ ಸೆಮಿಸ್ಟರ್‌ನ ವಿದ್ಯಾರ್ಥಿನಿಯಾಗಿರುವ ರಿತುಪರ್ಣ ರೋಲ್ಸ್‌ರೋಯ್ಸ್ ಸಂಸ್ಥೆಯ ಜೆಟ್ ಇಂಜಿನ್ ವಿಭಾಗಕ್ಕೆ ಆಯ್ಕೆಯಾಗಿದ್ದಾರೆ. ಕಂಪನಿಯಲ್ಲಿ ವಾರ್ಷಿಕ 72.3 ಲಕ್ಷ ರೂ.ಗಳ ವೇತನದ ಆಫರನ್ನು ಗಿಟ್ಟಿಸಿಕೊಂಡಿರುವ ರಿತುಪರ್ಣ ಅವರು ಸಂಸ್ಥೆಯ ಅತ್ಯಂತ ಕಿರಿಯ ಉದ್ಯೋಗಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ.

ಈ ಸಾಧನೆಗೆ ಪೋಷಕರ ಹಾಗೂ ಕಾಲೇಜಿನವರ ಪ್ರೋತ್ಸಾಹ ಇದ್ದು, ಇನ್ನೂ ಕೆಲವೇ ತಿಂಗಳಲ್ಲಿ ಅಮೆರಿಕಕ್ಕೆ ಹಾರಲಿದ್ದಾರೆ. ಮಗಳ ಸಾಧನೆಗೆ ಹೆತ್ತವರು ಸಂತಸ ವ್ಯಕ್ತಪಡಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!