Wednesday, August 12, 2026
Homeಜಿಲ್ಲಾಸುದ್ದಿಮೂಡಿಗೆರೆ :ಅನಾರೋಗ್ಯದಿಂದ ಬೇಸತ್ತು ವ್ಯಕ್ತಿ ಆ*ತ್ಮಹತ್ಯೆಗೆ ಶರಣು : ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ವತಿಯಿಂದ...

ಮೂಡಿಗೆರೆ :ಅನಾರೋಗ್ಯದಿಂದ ಬೇಸತ್ತು ವ್ಯಕ್ತಿ ಆ*ತ್ಮಹತ್ಯೆಗೆ ಶರಣು : ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ವತಿಯಿಂದ ಅಂತ್ಯಸಂಸ್ಕಾರ

Telegram Group
Join Now

ಮೂಡಿಗೆರೆ :ಅನಾರೋಗ್ಯ ಸಮಸ್ಯೆಯಿಂದ ಬೇಸತ್ತು ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಪಟ್ಟಣದ ಬಿದರಹಳ್ಳಿ ಕುಶಾಲನಗರದಲ್ಲಿ ಸೆಪ್ಟಂಬರ್ 11 ರಂದು ನಡೆದಿದೆ.ಚಂದ್ರು ಮೃತ ವ್ಯಕ್ತಿ.

ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಚಂದ್ರು ಅವರು ಹೃದಯ ಸಂಬಂಧಿ ಕಾಯಿಲೆ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು.ಅವರ ಚಿಕಿತ್ಸೆಗಾಗಿ ಸಾಕಷ್ಟು ಹಣ ಖರ್ಚಾಗಿತ್ತು. ಆದರೂ ಯಾವುದೇ ಸುಧಾರಣೆ ಕಂಡು ಬಂದಿರಲಿಲ್ಲ. ಹೀಗಾಗಿ ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರಿಗೆ ಕುಟುಂಬಸ್ಥರು ಯಾರು ಇಲ್ಲದ ಕಾರಣ ಮೂಡಿಗೆರೆಯ ಹಿಂದೂ ರುದ್ರಭೂಮಿ ಬೀಜುವಳ್ಳಿಯಲ್ಲಿ ಹಿಂದೂ ವಿಧಿ ವಿಧಾನಗಳ ಪ್ರಕಾರ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯವರು ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ. ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಫಿಶ್ ಮೋನು ಅಬ್ದುಲ್ ರಹಿಮಾನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments