Tuesday, February 10, 2026
Homeಜಿಲ್ಲಾಸುದ್ದಿಶೃಂಗೇರಿ: ಕೆಸಿಆರ್‌ ಇ ವಿರುದ್ಧ ತನಿಖೆಗೆ ಆದೇಶ ನೀಡದಿರುವುದು ಖಂಡನೀಯ: ಸಾಹಿತಿ ಕಲ್ಕುಳ್ಳಿ ವಿಠಲ್‌ ಹೆಗಡೆ

ಶೃಂಗೇರಿ: ಕೆಸಿಆರ್‌ ಇ ವಿರುದ್ಧ ತನಿಖೆಗೆ ಆದೇಶ ನೀಡದಿರುವುದು ಖಂಡನೀಯ: ಸಾಹಿತಿ ಕಲ್ಕುಳ್ಳಿ ವಿಠಲ್‌ ಹೆಗಡೆ

ಶೃಂಗೇರಿ: ಜೀವ ವೈವಿಧ್ಯತೆಯ ಅತ್ಯಮೂಲ್ಯ ತಾಣ ನಮ್ಮ ಪಶ್ಚಿಮ ಘಟ್ಟ ಇಲ್ಲಿನ ಜೀವ ಸಂಪತ್ತಿನ ಲೂಟಿ ಹಿಂದಿನಿಂದಲೂ ನಡೆಯುತ್ತಲೇ ಬಂದಿದೆ. ಅಧ್ಯಯನದ ಹೆಸರಿನಲ್ಲಿ ಜೀವ ವೈವಿಧ್ಯತೆಯ ಬಗ್ಗೆ ತಿಳಿಸುಕೊಂಡು ಅದರ ಮೇಲೆ ಹಕ್ಕು ಸಾಧಿಸುವ ಸಂಖಯೆ ಕಡಿಮೆ ಇಲ್ಲ. ಅದಕ್ಕೆ ನಾವು ಇಲ್ಲಿ ಅವಕಾಶ ಮಾಡಿಕೊಡಬಾರದು ಎಂದು ಸಾಹಿತಿ ಕಲ್ಕುಳ್ಳಿ ವಿಠಲ್‌ ಹೆಗಡೆ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗುಂಬೆಯಲ್ಲಿ ಅಧಯಯನ ಮತ್ತು ಸಂಶೋಧನೆ ಹೆಸರಲ್ಲಿ ಇದೆ ರೀತಿಯ ಲೂಟಿ ನಡೆಯುತ್ತಲೇ ಬಂದಿದೆ. ಪ್ರಸ್ತುತ ಕಾಳಿಂಗ ಸರ್ಪಗಳ ಸಂರಕ್ಷಣೆ ಸಂಶೋಧನೆ ಹೆಸರಿನಲ್ಲಿ ಅವ್ಯವಹಾರ ನಡೆದಿದ್ದು ಯಾರ ಅಂದಾಜಿಗೂ ನಿಲುಕದ್ದು . ಅರಣ್ಯ ಮತ್ತು ಸಂರಕ್ಷಣೆಯ ಕಾನೂನುಗಳನ್ನು ಮುಂದಿಟ್ಟುಕೊಂಡು ಕಾಡಿನೊಳಗೆ ಬೆರೆತು ಬದುಕುವ ಸ್ಥಳಿಯರನ್ನ ಹಿಂಸಿಸುವ ಅರಣ್ಯ ಇಲಾಖೆ ಅಧಿಕಾರಿಗಳು ಎಲ್ಲಾ ರೀತಿಯ ಕಾನೂನುಗಳನ್ನು ಗಾಳಿಗೆ ತೂರಿದ್ದಾರೆ.

ಕಾಳಿಂಗ ಹಾವಿನ ಬಗ್ಗೆ ಮಲೆನಾಡಿನಲ್ಲಿ ಭಯಭಕ್ತಿ ಇದೆ. ಕಾಳಿಂಗ ಹಾವುಗಳ ಸಂಖ್ಯೆ ಹೆಚ್ಚಿದ್ದು ಇನ್ನಿತರ ಹಾವುಗಳನ್ನು ತಿಂದು ಬದುಕುತ್ತಿದ್ದು ಉಳಿದ ಹಾವಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕೃತಕವಾಗಿ ನೂರಾರು ಕಾಳಿಂಗ ಮೊಟ್ಟೆಗಳ ಮರಿ ಮಾರಿ ಮಾಡುವ ಕಾರಣ ಕಾಳಿಂಗ ಹಾವುಗಳು ಆಹಾರ ಹುಡುಕಿ ಪಟ್ಟಣಕ್ಕೆ ಬರುತ್ತಿವೆ. ಯಾವುದೇ ಸಂಶೋಧನೆಗಳ, ಅರಣ್ಯಗಳ ಅಧ್ಯಯನಕ್ಕೆ ಬರುವಾಗ ಅರಣ್ಯಾವಾಸಿಗಳ ಒಪ್ಪಿಗೆ ಪಡೆಯಬೇಕು.

ಎಲ್ಲೆಂದಲೋ ಬಂದು ಅವೈಜ್ಞಾನಿಕವಾಗಿ ಸಂಶೋಧನಾ ವರದಿ ನಗರವಾಸಿಗಳಿಗಾಗಿ ಕಾಡಿನೊಳಗೆ ರೆಸಾರ್ಟ್‌ ನಿರ್ಮಿಸುವ ವಿರುದ್ಧ ಇಲಾಖೆ ಸರಿಯಾದ ಕ್ರಮ ಕೈಗೊಂಡರೆ ನಮ್ಮ ಕಾಡು ಉಳಿಯಲು ಮಾತ್ರ ಸಾಧ್ಯ ಎಂದಿದ್ದಾರೆ.

ವರದಿ : ವಿಠಲ್‌ ಶೃಂಗೇರಿ

7676798969

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!