Thursday, July 2, 2026
Homeಕ್ರೈಮ್ಶಕುಂತಲಾ ನಟರಾಜ್‌ ಪುತ್ರ ಆತ್ಮಹತ್ಯೆ - ಡೆತ್‌ನೋಟ್‌ನಲ್ಲಿತ್ತು ಕಾರಣ..!

ಶಕುಂತಲಾ ನಟರಾಜ್‌ ಪುತ್ರ ಆತ್ಮಹತ್ಯೆ – ಡೆತ್‌ನೋಟ್‌ನಲ್ಲಿತ್ತು ಕಾರಣ..!

Telegram Group
Join Now

ತುಮಕೂರು : ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್‌ ಪುತ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನ ವಿಜಯನಗರದಲ್ಲಿ ನಡೆದಿದೆ.
ಸ್ಥಳೀಯ ಶಾಲೆಯಲ್ಲಿ ೦೭ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ತ್ರಿಶಾಲ್‌ ಮೃತ ಬಾಲಕ. ಶಾಲಾ ಸಮವಸ್ತ್ರದಲ್ಲೇ ನೇಣಿಗೆ ಕೊರಳೊಡ್ಡಿದ್ದು, ಮನೆಯಲ್ಲಿ ಮೃತದೇಹ ಶುಕ್ರವಾರ ಪತ್ತೆಯಾಗಿದೆ. ತನ್ನ ತಾಯಿ ಶಕುಂತಲಾ ಜೊತೆಗೆ ತ್ರಿಶಾಲ್‌ ವಿಜಯನಗರದ ೨ನೇ ಮುಖ್ಯರಸ್ತೆಯಲ್ಲಿ ವಾಸವಿದ್ದ.
ಆತ್ಮಹತ್ಯೆಗೆ ಮುನ್ನ ಮರಣ ಪತ್ರ(ಡೆತ್‌ ನೋಟ್)‌ ಬರೆದಿಟ್ಟಿದ್ದಾನೆ. ಪಾರಿವಾಳ ಬೆಟ್ಟಿಂಗ್‌ ವಿಚಾರವಾಗಿ ಸ್ನೇಹಿತರ ಜೊತೆಗೆ ಗಲಾಟೆಯಾಗಿದ್ದು, ಆ ವಿಚಾರದಲ್ಲಿ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ತುಮಕೂರು ಜಿಲ್ಲಾಸ್ಪತ್ರೆಗೆ ಮೃತದೇಹ ರವಾನಿಸಲಾಗಿದೆ. ಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments