Friday, July 17, 2026
Homeಜಿಲ್ಲಾಸುದ್ದಿಆಲ್ದೂರು: ರಸ್ತೆ ಮಾಡಲು ಬಿಡದೇ ಗ್ರಾಮದ ಅಭಿವೃದ್ಧಿಗೆ ಅಡ್ಡಗಾಲು: ಗ್ರಾಮಸ್ಥರು ಅಳಲು!

ಆಲ್ದೂರು: ರಸ್ತೆ ಮಾಡಲು ಬಿಡದೇ ಗ್ರಾಮದ ಅಭಿವೃದ್ಧಿಗೆ ಅಡ್ಡಗಾಲು: ಗ್ರಾಮಸ್ಥರು ಅಳಲು!

Telegram Group
Join Now

ಚಿಕ್ಕಮಗಳೂರು: ನಮ್ಮೂರಿಗೆ ರಸ್ತೆ ಆಗಬೇಕು ಅಂತಾ ಅದೆಷ್ಟೋ ಜನರು ಇನ್ನಿಲ್ಲದ ಹೋರಾಟವನ್ನ ಮಾಡೋದನ್ನ ನಾವೆಲ್ಲಾ ನೋಡಿದ್ದೇವೆ.. ಆದ್ರೆ ಇಲ್ಲೊಂದು ಊರಿದೆ, ಆ ಊರಲ್ಲಿ ಇರೋ ಇಬ್ಬರು ವ್ಯಕ್ತಿಗಳು ರಸ್ತೆ ಆಗಬಾರದು ಅಂತಾ ಏನೆಲ್ಲಾ ಮಸಲತ್ತು ಮಾಡ್ತಿದ್ದಾರೆ ಅನ್ನೋದನ್ನ ನೀವು ಕೇಳಿದ್ದಾರೆ ದಂಗಾಗ್ತೀರಾ..! ಅಂದಾಗೆ ಇದು ಅದೊಂದು ಊರಿನ ರಸ್ತೆಗೆ ಅಡ್ಡವಾಗ್ತಿರೋ ಕಥೆ.!

ಹೌದು, ರಸ್ತೆ ಆಗಬಾರದು ಅಂತಾ ಕಿರಿಕ್ ಅಸಾಮಿಯೊಬ್ಬ ಗ್ರಾಮಕ್ಕೆ ಕಂಟಕ ಪ್ರಾಯವಾಗಿರೋ ವಿಚಿತ್ರ ಪ್ರಸಂಗ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ದೋಣಗೂಡಿಗೆ ಗ್ರಾಮದಲ್ಲಿ ನಡೆದಿದೆ. ಹೌದು ದೋಣಗೂಡಿಗೆ ಗ್ರಾಮದ ರಮೇಶ್ ಗೌಡ ಎಂಬಾತ ರಸ್ತೆ ಮಾಡಲು ಬಿಡದೇ ಗ್ರಾಮದ ಅಭಿವೃದ್ಧಿಗೆ ಅಡ್ಡಗಾಲು ಆಗಿದ್ದಾನೆ ಅಂತಾ ಗ್ರಾಮಸ್ಥರು ನೋವು ತೋಡಿಕೊಂಡಿದ್ದಾರೆ. ರಸ್ತೆ ಮಂಜೂರು ಹೋರಾಟ ಮಾಡಿ, ರಸ್ತೆಯ ಕಾಮಗಾರಿಯನ್ನ ಮಂಜೂರು ಮಾಡಿಸಿದ ಗ್ರಾಮದ ರಾಜೇಶ್ ಎಂಬ ವ್ಯಕ್ತಿಯನ್ನೇ ಕುತ್ತಿಗೆ ಹಿಸುಕಿ ಕೊಲೆ ಮಾಡಲು ಕೂಡ ಪ್ರಯತ್ನ ಪಟ್ರು ಅಂತಾ ಗ್ರಾಮಸ್ಥರು ಹೇಳಿಕೊಂಡಿದ್ದಾರೆ. ಈ ರಮೇಶ್ ಗೌಡ ಎಂಬ ವ್ಯಕ್ತಿಗೆ ಚಂದ್ರೇಗೌಡ ಎಂಬ ಮತ್ತೊಬ್ಬ ವ್ಯಕ್ತಿ ಕೂಡ ಜೊತೆಯಾಗುತ್ತಿದ್ದು ಇವರಿಬ್ಬರಿಂದ ಇಡೀ ಗ್ರಾಮದ ನೆಮ್ಮದಿಯೇ ಹಾಳಾಗಿ ಹೋಗಿದ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.

ಚಂದ್ರೇಗೌಡ ಎಂಬ ವ್ಯಕ್ತಿ ಸರ್ಕಾರಿ ಕೆರೆಯನ್ನ. ಸ್ಮಶಾನವನ್ನ ಕೂಡ ಒತ್ತುವರಿ ಮಾಡಿಕೊಂಡು, ಊರಿನ ಜನರಿಗೆ ಮಾರಕನಾಗಿದ್ದಾನಂತೆ. ಅಷ್ಟೇ ಅಲ್ಲದೇ ಗ್ರಾಮದಲ್ಲಿ ನಿರ್ಮಾಣವಾಗಿ, ಉದ್ಘಾಟನೆಯ ಹಂತಕ್ಕೆ ಹೋಗಿದ್ದ ಪಾಲಿಟೆಕ್ನಿಕ್ ಕಾಲೇಜನ್ನ ಉದ್ಘಾಟನೆ ಮಾಡದಕ್ಕೂ ಬಿಡದೇ ಈ ಚಂದ್ರೇಗೌಡ ಅನ್ನೋ ಆಸಾಮಿ ಊರಿನ ಅಭಿವೃದ್ಧಿಗೆ ಕಂಟಕನಾಗಿದ್ದಾನೆ. ರಸ್ತೆ ಕಾಮಗಾರಿಗೆ ಚಾಲನೆ ಕೊಟ್ಟಿದ್ದ ಶಾಸಕಿ ನಯನಾ ಮೋಟಮ್ಮನವರು, ಈ ರಸ್ತೆ ಕಾಮಗಾರಿ ಪ್ರಗತಿ ಬಗ್ಗೆಯೂ ಸ್ವಲ್ಪ ಗಮನಹರಿಸಿದ್ರೆ ಒಳ್ಳೆಯದಿತ್ತು ಅಂತಾ ಗ್ರಾಮಸ್ಥರು ವಿನಯಪೂರ್ವಕವಾಗಿ ಕೇಳಿಕೊಂಡಿದ್ದಾರೆ, ಆಗ್ರಹಪಡಿಸಿಲ್ಲ.!

ಒಟ್ಟಿನಲ್ಲಿ ದೇವರು ಕೊಟ್ರೂ, ಪೂಜಾರಿ ಕೊಡ್ತಿಲ್ಲ ಅನ್ನೋ ಗಾದೆಯಂತೆ ಆಗಿದೆ ದೋಣಗೂಡಿಗೆ ಗ್ರಾಮಸ್ಥರು ಪಾಡು.! ಇನ್ನಾದ್ರೂ ಅಧಿಕಾರಿಗಳು ಈ ಬಗ್ಗೆ ಗಮನ ವಹಿಸ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments