Sunday, August 9, 2026
Homeಜಿಲ್ಲಾಸುದ್ದಿಬಾಳೆಹೊನ್ನೂರು: ಕಾಡಾನೆ ಹಾವಳಿಯಿಂದ ಬೇಸತ್ತ ಮಲೆನಾಡಿಗರು: ಇಂದು ರೈತರ ಜೊತೆ ಸಚಿವ ಈಶ್ವರ ಖಂಡ್ರೆ ಸಂವಾದ!

ಬಾಳೆಹೊನ್ನೂರು: ಕಾಡಾನೆ ಹಾವಳಿಯಿಂದ ಬೇಸತ್ತ ಮಲೆನಾಡಿಗರು: ಇಂದು ರೈತರ ಜೊತೆ ಸಚಿವ ಈಶ್ವರ ಖಂಡ್ರೆ ಸಂವಾದ!

Telegram Group
Join Now

ಚಿಕ್ಕಮಗಳೂರು :ಇತ್ತೀಚಿನ ದಿನಗಳಲ್ಲಿ ಮಲೆನಾಡಲ್ಲಿ ಮಾನವ ಮತ್ತು ಕಾಡುಪ್ರಾಣಿಗಳ ಸಂಘರ್ಷ ಹೆಚ್ಚಾಗುತ್ತಿದ್ದು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಇಂದು ಶೃಂಗೇರಿ ಕ್ಷೇತ್ರದ ಬಾಳೆಹೊನ್ನೂರಿಗೆ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ಭೇಟಿ ನೀಡಲಿದ್ದು ರೈತರು, ಗ್ರಾಮಸ್ಥರ ಜೊತೆ ಸಂವಾದ ನಡೆಸಲಿದ್ದಾರೆ.

ಹೌದು .. ಕಳೆದೊಂದು ವರ್ಷದಲ್ಲಿ 9 ಜನ ಕಾಡಾನೆ ದಾಳಿಗೆ ಬಲಿಯಾಗಿದ್ದು ರೈತರ ಜೊತೆ ಅರಣ್ಯ ಸಚಿವ ಮಾತಕತೆ ನಡೆಸುವಂತೆ ಮಲೆನಾಡಿಗರು ಆಗ್ರಹಿಸಿದ್ದರು. ಅಧಿಕಾರಿಗಳು ಕೊಡೋ ಕಾರಣವೇ ಪರಿಹಾರವಲ್ಲ, ರೈತರ ಜೊತೆ ಚರ್ಚಿಸಿ ಎಂದು ಪಟ್ಟು ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಇಂದು ಕಾಡಾನೆ ದಾಳಿ ಪ್ರದೇಶಗಳಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿ ಹಾಗೆ ರೈತರು ಗ್ರಾಮಸ್ಥರ ಜೊತೆ ಸಂವಾದ ನಡೆಸಲಿದ್ದು ಕಾಡಾನೆ ಉಪಟಳ ಕುರಿತು ಸಾರ್ವಜನಿಕರ ಅಹವಾಲುಗಳನ್ನು ಕೇಳಲಿರುವ ಸಚಿವ ಖಂಡ್ರೆ.

ಮಧ್ಯಾಹ್ನ 2.30ಕ್ಕೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ಶ್ರೀ ನಾರಾಯಣ ಗುರು ಭವನದಲ್ಲಿ ಸಂವಾದ ಕಾರ್ಯಕ್ರಮ ನಡೆಯಲಿದೆ. ಸಚಿವರ ಭೇಟಿ ಹಿನ್ನೆಲೆ ವ್ಯಾಪಕ ಪೊಲೀಸ್ ಬಂದೋಬಸ್ತ್ ಇಡಲಾಗಿದೆ.

ಇತ್ತೀಚಿಗೆ ಕಾಡಾನೆ ದಾಳಿಗೆ ಮಹಿಳೆ ಬಲಿ ವೇಳೆ ಕಡಬಗೆರೆಯಲ್ಲಿ ಕಲ್ಲು ತೂರಾಟ ನಡೆದಿತ್ತು ಲಾಠಿ ಚಾರ್ಜ್ ನಡೆಸಿ ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಜಿಲ್ಲಾಡಳಿತ ಹಾಗೆ ಶವವನ್ನ ರಸ್ತೆಯಲ್ಲಿಟ್ಟು ಈಶ್ವರ ಖಂಡ್ರೆ ಬರುವಂತೆ ಪಟ್ಟು ಹಿಡಿದಿದ್ದ ಗ್ರಾಮಸ್ಥರು ಈ ಹಿನ್ನೆಲೆಯಲ್ಲಿ ಇಂದು ಇದಕ್ಕೊಂದು ಶಾಶ್ವತ ಪರಿಹಾರ ಸೂಚಿಸುತ್ತಾರೋ ಅಥವಾ ಬರೀ ಭರವಸೆಯನ್ನು ನೀಡುತ್ತಾರೋ ಎಂದು ಕಾದು ನೋಡಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments