Friday, July 24, 2026
Homeಜಿಲ್ಲಾಸುದ್ದಿಸುಬ್ರಮಣ್ಯದಲ್ಲಿ ಭಾರತೀಯ ಮಜ್ದೂರ್ ಸಂಘ ಸ್ಥಾಪನ ದಿನಾಚರಣೆ: ಸಂಘಟನೆಯ ಮಹತ್ವ ಸಾರಿದ ಅಧ್ಯಕ್ಷರು!

ಸುಬ್ರಮಣ್ಯದಲ್ಲಿ ಭಾರತೀಯ ಮಜ್ದೂರ್ ಸಂಘ ಸ್ಥಾಪನ ದಿನಾಚರಣೆ: ಸಂಘಟನೆಯ ಮಹತ್ವ ಸಾರಿದ ಅಧ್ಯಕ್ಷರು!

Telegram Group
Join Now

ಭಾರತೀಯ ಮಜ್ದೂರ್ ಸಂಘದ (BMS) ಸ್ಥಾಪನಾ ದಿನವನ್ನು ಪ್ರತಿ ವರ್ಷ ಜುಲೈ 23ರಂದು ದೇಶಾದ್ಯಂತ ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ.

ಅದೇ ರೀತಿ ಇಂದು ಸುಬ್ರಮಣ್ಯ ಘಟಕದಲ್ಲಿ ಭಾರತೀಯ ಮಜ್ದೂರ್ ಸಂಘ ಸ್ಥಾಪನ ದಿನಾಚರಣೆಯನ್ನು ಆಚರಿಸಿ ಭಾರತ ಮಾತೆಯ ಭಾವಚಿತ್ರದ ಎದುರು ದೀಪ ಪ್ರಜ್ವಲಿಸಿ  ಪುಷ್ಪಾರ್ಚನೆ ಮಾಡಲಾಯಿತು.

ಈ ವೇಳೆ ಬಿಎಮ್ಎಸ್ ಎಂದರೇನು ಮತ್ತು ನಮಗೆ ಏಕೆ ಈ ಸಂಘಟನೆ ಬೇಕು ಎಂಬುದನ್ನು ಸಂಘದ ಮಾಜಿ ಅಧ್ಯಕ್ಷರಾದ ಸುಬ್ಬಪ್ಪ ಕುಲಕುಂಡರವರು ಸಭೆಯಲ್ಲಿ ಸೇರಿದ ಸದಸ್ಯರುಗಳಿಗೆ ತಿಳಿಸಿದರು.

ಇದು ರಾಜಕೀಯೇತರ ಮತ್ತು ರಾಷ್ಟ್ರೀಯವಾದಿ ಕಾರ್ಮಿಕ ಸಂಘಟನೆಯಾಗಿದ್ದು, “ರಾಷ್ಟ್ರ ಪ್ರಥಮ, ಸಂಸ್ಥೆ ನಂತರ ಮತ್ತು ವ್ಯಕ್ತಿ ಕೊನೆ” ಎಂಬ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ

ಆ ನಂತರ  ಘೋಷಣೆ ಕೂಗಿ ಎಲ್ಲಾ ಸದಸ್ಯರುಗಳಿಗೆ ಸಿಹಿ ತಿಂಡಿ ಹಂಚಿ ಸಂಘದ ಸ್ಥಾಪನ ದಿನಾಚರಣೆಯನ್ನು ಸಂಭ್ರಮಿಸಿದರು.

ವರದಿ ಚೇತನ್ ನಾಯ್ಕ್
ಕುಕ್ಕೆ ಸುಬ್ರಹ್ಮಣ್ಯ 9483964639

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments