Tuesday, October 6, 2026
Homeಕ್ರೈಮ್ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡುಕೋಣ ಬೇಟೆ, ಕೇರಳಕ್ಕೆ ಮಾಂಸ ರವಾನೆ: ಕೆಡಿಪಿ ಸಭೆಯಲ್ಲಿ MLC ಭೋಜೇಗೌಡ ಗಂಭೀರ...

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡುಕೋಣ ಬೇಟೆ, ಕೇರಳಕ್ಕೆ ಮಾಂಸ ರವಾನೆ: ಕೆಡಿಪಿ ಸಭೆಯಲ್ಲಿ MLC ಭೋಜೇಗೌಡ ಗಂಭೀರ ಆರೋಪ

Telegram Group
Join Now

ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರು ಅರಣ್ಯ ಭಾಗದಲ್ಲಿ ಅಕ್ರಮವಾಗಿ ಕಾಡುಕೋಣಗಳ ಬೇಟೆಯಾಡುತ್ತಿದ್ದು ಅವುಗಳ ಮಾಂಸವನ್ನು ಕೇರಳಕ್ಕೆ ಸಾಗಾಟದ ಜಾಲ ನಡೆಯುತ್ತಿದೆ ಎಂದು ಜಿಲ್ಲಾ ಕೆಡಿಪಿ ಸಭೆಯಲ್ಲಿ ಎಂ.ಎಲ್‌.ಸಿ. ಭೋಜೇಗೌಡ ಗಂಭೀರ ಆರೋಪ ಮಾಡಿದ್ದಾರೆ.

ಅದು ಅಲ್ಲದೆ  ಕೇರಳದಲ್ಲಿ ಕಾಡುಕೋಣ ಮಾಂಸಕ್ಕೆ ಕೆ.ಜಿ.ಗೆ ₹5,000  ಭಾರೀ ಬೆಲೆ ಹಿನ್ನೆಲೆ ಹೊರರಾಜ್ಯದ ಶಿಕಾರಿ ಗ್ಯಾಂಗ್‌ಗಳ ಕೃತ್ಯ ನಡೆಯುತ್ತಿದೆ. ಚಿಕ್ಕಮಗಳೂರು ಕಾಡುಗಳಲ್ಲೇ ಬೀಡುಬಿಟ್ಟು ನಿರಂತರ ಬೇಟೆಯಾಡುತ್ತಿದ್ದು ಇದಕ್ಕೆ ಅರಣ್ಯ ಇಲಾಖೆ ಕೆಳಹಂತದ ಸಿಬ್ಬಂದಿ  ಲಕ್ಷಾಂತರ ರೂಪಾಯಿ ಹಣ ಪಡೆದು  ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ  ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಕಾಡುಕೋಣಗಳ ಅಕ್ರಮ ಬೇಟೆ ಜಾಲವನ್ನು ಬೇರುಸಹಿತ ಕಿತ್ತೊಗೆಯಬೇಕೆಂದು ಒತ್ತಾಯಿಸಿದರು.

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!