Thursday, July 30, 2026
Homeಜಿಲ್ಲಾಸುದ್ದಿಹಾಸನದ ಗೊರೂರಿನ ಹೇಮಾವತಿ ಡ್ಯಾಂಗೆ ಬಿಜೆಪಿಯ ಬರ ಅಧ್ಯಯನ ತಂಡ ಭೇಟಿ, ಪರಿಶೀಲನೆ!

ಹಾಸನದ ಗೊರೂರಿನ ಹೇಮಾವತಿ ಡ್ಯಾಂಗೆ ಬಿಜೆಪಿಯ ಬರ ಅಧ್ಯಯನ ತಂಡ ಭೇಟಿ, ಪರಿಶೀಲನೆ!

Telegram Group
Join Now

ಹಾಸನ: ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ಜಲಾನಯನ ಪ್ರದೇಶಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾದ ಪರಿಣಾಮ ಗೊರೂರಿನ ಹೇಮಾವತಿ ಡ್ಯಾಂಗೆ ಬಿಜೆಪಿಯ ಬರ ಅಧ್ಯಯನ ತಂಡ ಭೇಟಿ ನೀಡಿ ಪರಿಶಿಲನೆ ನಡೆಸಿದರು.

ಅಣೆಕಟ್ಟಿನಲ್ಲಿರುವ ನೀರಿನ ಪ್ರಮಾಣ, ಪ್ರಸಕ್ತಬಾರಿಯಾಗಿರುವ ಮಳೆಯ ಕೊರತೆ ಕುರಿತಂತೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಮಾಹಿತಿ ಪಡೆದರು

ಈ ವೇಳೆ  ಶಾಸಕರಾದ ಸುನಿಲ್ ಕುಮಾರ್, ಆರಗ ಜ್ಞಾನೇಂದ್ರ, ಸಿಮೆಂಟ್ ಮಂಜು, ಎಚ್. ಕೆ ಸುರೇಶ್, ಚನ್ನಬಸಪ್ಪ ಹಾಗೂ ವಿಧಾನಪರಿಷತ್ ಸದಸ್ಯ ಅರುಣ್ ಶ್ಯಾಮ್ ಇತರರು ಉಪಸ್ಥಿತರಿದ್ದರು.

ಹಾಗೆ  ಇದೇ ವೇಳೆ ಹಾಸನದಲ್ಲಿ ಮಾಜಿಸಚಿವ ಅರಗ ಜ್ಞಾನೇಂದ್ರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್‌ನ 136 ಶಾಸಕನ್ನು ಜನರನ್ನು ಆಯ್ಕೆ ಮಾಡಿದ್ದಾರೆ ಈ ಸರ್ಕಾರ ಜನರಿಗೆ ಶಾಪವಾಗಿದೆ ಸರ್ಕಾರ ನೊಂದ ಜನರ ಬದುಕಿಗೆ ಆತ್ಮವಿಶ್ವಾಸ ತುಂಬವ ಕೆಲಸ ಮಾಡಬೇಕು ರೈತರ ಸಾಲಮನ್ನಾ ಮಾಡಿ ಪರಿಹಾರ ನೀಡಬೇಕು ರೈತರು ಬಹಳ ಹತಾಷೆಯಲ್ಲಿದ್ದಾರೆ ಎಂದರು.

ಬಿಜೆಪಿಯಿಂದ ಆರು ತಂಡಗಳು ರಾಜ್ಯದೆಲ್ಲೆಡೆ ಬರ ಅಧ್ಯಯನ ಮಾಡುತ್ತಿವೆ ಬರ ಅಧ್ಯಯನದ ವರದಿಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೂ ಸಲ್ಲಿಸುತ್ತೇವೆ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments