ಚಿಕ್ಕಮಗಳೂರು: ಮಹಿಳಾ ಕೋಟಾದಲ್ಲಿ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿದೆ.

ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳು ಚುನಾವಣೆಯಲ್ಲಿ ಬಿಜೆಪಿಯ ಎಂಕೆ ಪ್ರಾಣೇಶ್ ವಿರುದ್ಧ ಮರು ಮತ ಎಣಿಕೆಯಲ್ಲಿ ಗೆಲುವು ಪಡೆದಿದ್ದ ಗಾಯತ್ರಿ ಶಾಂತೇಗೌಡ ಈಗ ಮಂತ್ರಿ ಸ್ಥಾನ ನೀಡುವ ಮೂಲಕ ಹೈಕಮಾಂಡ್ ದೊಡ್ಡ ಗಿಫ್ಟ್ ನೀಡಿದೆ ಎಂದರೆ ತಪ್ಪಾಗಲಾರದು.
ಕೊನೆಗೂ ಕಾಫಿನಾಡು ಚಿಕ್ಕಮಗಳೂರಿಗೆ ಸಂಪುಟದಲ್ಲಿ ಮಾನ್ಯತೆ ಸಿಕ್ಕಿದಂತಾಗಿದೆ.. ಸೋಮವಾರ ಸಂಜೆ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಎಂಎಲ್‌ಸಿ ಗಾಯತ್ರಿ ಶಾಂತೇಗೌಡ ಸಚಿವೆಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.
