ಚಿಕ್ಕಮಗಳೂರು: ಜಿಲ್ಲೆಯ ಪ್ರಸಿದ್ಧ ಬಿಂಡಿಗ ದೇವಿರಮ್ಮನ ಜಾತ್ರಾ ಮಹೋತ್ಸವ ಇಂದು & ನಾಳೆ ಎರಡು ದಿನಗಳ ಕಾಲ ವಿಜೃಂಭಣಿಯಿಂದ ಜರುಗಲಿದೆ. ಇಷ್ಟಾರ್ಥ ಸಿದ್ಧಿಗಾಗಿ ಬರೋಬ್ಬರಿ 3 ಸಾವಿರದ 800 ಅಡಿ ಎತ್ತರದ ಬೆಟ್ಟ ಏರಿ ದೇವಿರಮ್ಮನ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ತುದಿಗಾಲಲ್ಲಿ ನಿಂತಿದ್ದಾರೆ.
ಈಗಾಗಲೇ ಕೆಲ ಭಕ್ತರು ದೇವಿಯತ್ತ ಮುಖ ಮಾಡಿದ್ದಾರೆ. ನರಕ ಚತುರ್ದಶಿಯಂದು ದೇವಿರಮ್ಮನ ಕಾಣಲು ಭಕ್ತಸಾಗರವೇ ಸುನಾಮಿ ರೀತಿ ಬೆಟ್ಟದತ್ತ ಹೆಜ್ಜೆ ಹಾಕಲಿದೆ. ವಿಶೇಷ ಏನಂದ್ರೆ ಬರಿಗಾಲಲ್ಲಿ ಕಲ್ಲು-ಮುಳ್ಳುಗಳಿಂದ ಕೂಡಿದ ಕಠಿಣ ಹಾದಿಯಲ್ಲಿ ಸಾಗಿ ಆಸ್ತಿಕರು ತಾಯಿ ದರ್ಶನ ಪಡೆಯಲಿದ್ದಾರೆ. ಇದೇ ಹೊತ್ತಲ್ಲಿ ಬೆಟ್ಟ ಏರಲು ಜಿಲ್ಲಾಡಳಿತ 2 ದಿನ ಅನುಮತಿ ನೀಡಿದ್ರೂ, ರಾತ್ರಿ ವೇಳೆ ಬೆಟ್ಟ ಹತ್ತೋದನ್ನ ನಿಷೇಧಿಸಿದೆ.
ಈ ಬಾರಿ ಒಂದೂವರೆ ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, 20 ಸಾವಿರಕ್ಕೂ ಹೆಚ್ಚು ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡ್ಲಾಗಿದೆ. ಕುಡಿಯುವ ನೀರು, ಬಸ್, ಆಂಬುಲೆನ್ಸ್ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಬೆಟ್ಟದಲ್ಲಿ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಾಗಿದ್ದು, ಪೊಲೀಸ್ ಇಲಾಖೆ ಬಿಗಿ ಭದ್ರತೆ ಏರ್ಪಡಿಸಿದೆ.
ಇನ್ನೊಂದು ವಿಶೇಷ ಅಂದ್ರೆ, ಮೈಸೂರು ಅರಸರ ಮನೆಯಿಂದ ಇಂದಿಗೂ ದೇವಿರಮ್ಮನಿಗೆ ಮಡಲಕ್ಕಿ ಸೇವೆ ಸಲ್ಲಿಸುವ ಸಂಪ್ರದಾಯ ಮುಂದುವರಿದಿದ್ದು, ಭಕ್ತಗಣ ದೇವಿ ದರ್ಶನಕ್ಕೆ ತುದಿಗಾಲಲ್ಲಿ ನಿಂತಿದೆ
