ಚಿಕ್ಕಮಗಳೂರು: ವಿಧಾನಸೌಧದ ಮೆಟ್ಟಿಲು ಹತ್ತಬೇಕು..! ಒಂದ್ಸರಿ ಎಲ್ಲಾ ಕಡೆ ಅಡ್ಡಾಡಬೇಕು..! ಅಧಿವೇಶನದಲ್ಲಿ ಮಂತ್ರಿಗಳು, ಶಾಸಕರು ಮಾತಡೋದನ್ನ ನೋಡ್ಬೇಕು.! ಇಡೀ ರಾಜ್ಯವನ್ನೇ ನಿಯಂತ್ರಿಸುವ ಕಂಟ್ರೋಲ್ ರೂಂ ಹೇಗಿರುತ್ತೆ.? ಆಡಳಿತಸೌಧ ಹೇಗೆ ಇರುತ್ತೆ ಅನ್ನೋದ್ನ ಕಣ್ಣಾರೆ ನೋಡ್ಬೇಕು ಅನ್ನೋದು ಅಸಂಖ್ಯ ಜನರ ಕನಸು.! ಆದ್ರೆ ಅಷ್ಟು ಸುಲಭಕ್ಕೆ ಅಲ್ಲಿಗೆ ಎಲ್ಲರೂ ಹೋಗೋಕೆ ಆಗಲ್ಲ.. ಹೋದ್ರೂ ಒಳಗಡೆ ಹೋಗೋಕೆ ಕಷ್ಟ ಕಷ್ಟ.. ಬರೀ ಎಂಎಲ್ ಎಗಳು, ಮಂತ್ರಿಗಳು, ಅಧಿಕಾರಿಗಳು, ಅವರ ಪಿಎಗಳು, ಒಂದಷ್ಟು ಪ್ರಭಾವಿಗಳು.. ಹೀಗೆ ಒಂದಷ್ಟು ಮಂದಿ ವಿಧಾನಸೌಧದಲ್ಲಿ ಓಡಾಡೋದನ್ನ ನೋಡಿ, ಛೇ.. ನಮಗೆ ಈ ರೀತಿಯ ಭಾಗ್ಯ ಸಿಕ್ಕಿಲ್ವಲ್ಲ ಅಂತಾ ಬೇಸರಪಡುವವರು ಹಲವರು ಮಂದಿ.!
ಹೀಗೆ ಯೋಚ್ನೆ ಮಾಡುವ ಹಲವರಲ್ಲಿ ಇವ್ರು ಕೂಡ ಇದ್ದರು.! ನಾವು ವಿಧಾನಸೌಧ ಮೆಟ್ಟಿಲು ಹತ್ತೋದು ಕಷ್ಟಸಾಧ್ಯ ಅಂತಾನೇ ಎಲ್ಲರೂ ಭಾವಿಸಿದ್ರು.! ಹೀಗೆ ಭಾವಿಸಿದ್ದೇ ಅನೇಕರು, ಕನಸೋ ಇದು, ನನಸೋ ಇದು, ಅಂತಾ ಅಂತೂ ಇಂತೂ ವಿಧಾನಸೌಧದ ಮೆಟ್ಟಿಲು ಹತ್ತೇ ಬಿಟ್ರು.! ಹೀಗೆ ಖುಷಿ ಖುಷಿಯಿಂದ ವಿಧಾನಸೌಧಕ್ಕೆ ಎಂಟ್ರಿಯಾಗ್ತಾ ಇರೋರು, ಕಾಫಿನಾಡು ಚಿಕ್ಕಮಗಳೂರು ತಾಲೂಕಿನ ಶೃಂಗೇರಿ ವಿಧಾನಸಭಾ ಕ್ಷೇತ್ರದ ಖಾಂಡ್ಯ ಹೋಬಳಿಯ 165 ಮಂದಿ ಕಾಂಗ್ರೆಸ್ ಕಾರ್ಯಕರ್ತರು. ಇವ್ರೆಲ್ಲಾ ಬರೀ ವಿಧಾನಸೌಧದ ಮೆಟ್ಟಿಲು ಹತ್ತಿದ್ದು ಮಾತ್ರ ಅಲ್ಲ, ಅಧಿವೇಶನದ ಕಾರ್ಯ ಕಲಾಪಗಳನ್ನ ವೀಕ್ಷಕರ ಸೀಟಿನಲ್ಲಿ ಕುಳಿತು ವೀಕ್ಷಣೆ ಮಾಡಿದ್ರು. ನಮ್ಮ ರಾಜ್ಯದ ರಾಜ್ಯಭಾರ ಹೇಗೆ ನಡೆಯುತ್ತೆ ಅನ್ನೋದನ್ನ ಕಣ್ತುಂಬಿಸಿಕೊAಡರು. ಸಿಎಂ ಹೇಗೆ ಮಾತಾಡ್ತಾರೆ, ಎಲ್ಲಿ ಕೂರ್ತಾರೆ, ಡಿಸಿಎಂ ಎಲ್ಲಿ ಕೂರ್ತಾರೆ, ವಿರೋಧಪಕ್ಷದ ನಾಯಕರು ಎಲ್ಲಿರ್ತಾರೆ, ಆಡಳಿತ ಪಕ್ಷದ ಮಂತ್ರಿಗಳು, ಶಾಸಕರು, ವಿರೋಧಪಕ್ಷದ ಶಾಸಕರು ಎಲ್ಲಿ ಕೂರ್ತಾರೆ ಅನ್ನೋದನ್ನ ಕಣ್ಣಾರೆ ಕಂಡರ
ಇಷ್ಟಕ್ಕೆ ಮುಗಿಯಲಿಲ್ಲ ಕಾಫಿನಾಡ ಮಂದಿಯ ಪಯಣ, ಅಧಿವೇಶನವನ್ನೂ ನೋಡಿದ ಇವ್ರು ಸರ್ಕಾರದ ಬಹುತೇಕ ಸಭೆ, ಸಮಾರಂಭ ನಡೆಯುವ ಬ್ಯಾಂಕ್ವೆಟ್ ಹಾಲ್ ಗೂ ಎಂಟ್ರಿ ಕೊಟ್ರು.. ಅಲ್ಲಿ ಸುಮಾರು ಒಂದೂವರೆ ಗಂಟೆ ಕಾಲ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರ ಜೊತೆ ಮಾತುಕತೆ ನಡೆಸಿದ್ರು. ಶೃಂಗೇರಿ ಶಾಸಕರಾದ ಟಿ.ಡಿ ರಾಜೇಗೌಡ್ರು, ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಅಂಶುಮತ್ ಕೂಡ ಈ ವೇಳೆ ಹಾಜರಿದ್ದು, ತಮ್ಮೂರಿನ ಸಮಸ್ಯೆಗಳನ್ನ ಊರಿಂದ ಬಂದಿದ್ದವರು, ಅರಣ್ಯ ಸಚಿವರ ಜೊತೆ ಮುಕ್ತವಾಗಿ ಚರ್ಚಿಸಲು ಅವಕಾಶ ಮಾಡಿಕೊಟ್ಟರು. ಲಿಖಿತವಾಗಿ ಮನವಿಯನ್ನ ಕೂಡ ಸಚಿವರಿಗೆ ಕೊಟ್ಟಿದ್ದಾಯ್ತು. ನೀವು ನನ್ನ ಗಮನಕ್ಕೆ ತಂದ ಸಮಸ್ಯೆಗಳನ್ನ ಆದಷ್ಟು ಬೇಗ ಪರಿಹರಿಸುವುದಾಗಿ ಸಚಿವರು ಮಾತು ಕೊಟ್ಟರು. . ಬ್ಯಾಕ್ವೆಂಟ್ ಹಾಲ್ ನಲ್ಲಿ ಗಂಟೆಗಟ್ಟಲೇ ಕೂತ್ಕೊಂಡು ಸಚಿವರ ಜೊತೆ ಚರ್ಚಿಸಿದ್ದು, ಕಾಫಿನಾಡಿಗರಿಗೂ ಖುಷಿ ಕೊಟ್ಟಿತ್ತು..
ಇಲ್ಲಿಗೂ ಮುಗಿಯಲಿಲ್ಲ ಕಾಫಿನಾಡಿಗರ ತಿರುಗಾಟ.. ಹೋಗೋದ್ ಹೋಗಿದ್ದೀವಿ, ಎಲ್ಲಾ ಕಡೆ ರೌಂಡ್ ಹೊಡ್ಕೊಂಡ್ ಬರೋದೇ.. ಅಂತಾ ಶಾಸಕರ ಭವನಕ್ಕೂ ಹೋಗಿದ್ದಾಯ್ತು.. ಹೇಗೂ ನಮ್ಮ ಖಾಂಡ್ಯ ಹೋಬಳಿಯ ಎಲ್ಲಾ ಕೈ ಕಟ್ಟಾಳುಗಳು ಇಲ್ಲೇ ಇದ್ದೀವಿ, ಒಂದು ಮೀಟಿಂಗನ್ನ ಶಾಸಕರ ಭವನದಲ್ಲೇ ಖಾಂಡ್ಯ ಹೋಬಳಿಯ ಕೈ ಕಾರ್ಯಕರ್ತರ ಮೀಟಿಂಗನ್ನೂ ಮಾಡಿ ಮುಗ್ಸಿದ್ರು. ಅಷ್ಟೊತ್ತಿಗೆ ಅಲ್ಲಿಗೆ ಬಂದ ಚಿಕ್ಕಮಗಳೂರು ಶಾಸಕ ಹೆಚ್,ಡಿ ತಮ್ಮಯ್ಯ, ಓಯ್.. ಏನಿದು, ನಮ್ ಕಡೆ ನೆಂಟ್ರು ಎಲ್ಲಾ ಈ ಕಡೆಗೆ ಬಂದ್ಬಿಟ್ಟೀರಿ ಅಂತಾ ಖುಷಿ ಆಗ್ಬಿಟ್ರು..! ಬಳಿಕ ವಿಧಾನಸೌಧಕ್ಕೆ ಬಂದಾಗಿದೆ, ಎಲ್ಲವನ್ನೂ ನೋಡಿ ಆಗಿದೆ.. ಒಂದು ಪೋಟೋ ಸೆಷನ್ .. ಇಲ್ಲಾ ಅಂದ್ರೆ ಹೇಗೆ ಅಂತಾ .. ವಿಧಾನಸೌಧ ಎದುರುಗಡೆ ಟಿ.ಡಿ ರಾಜೇಗೌಡರು, ಹೆಚ್.ಡಿ ತಮ್ಮಯ್ಯನವರ ಜೊತೆಗೂಡಿಅದ್ದೂರಿ ಪೋಟೋ ಸೆಷನ್ ಕೂಡ ನಡೆದೋಯ್ತು.!
ಹೀಗೆ ಕಾರ್ಯಕರ್ತರು ವಿಧಾನಸೌಧದ ಮೆಟ್ಟಿಲು ಹತ್ತಲು ಅವಕಾಶ ಮಾಡಿಕೊಟ್ಟಿದ್ದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ್ರು.. ಟಿಡಿಆರ್ ಮಾರ್ಗದರ್ಶನದಲ್ಲಿ ಗಿರೀಶ್, ಬಿ.ಸಿ ಮಂಜುನಾಥ್ ಎಲ್ಲರನ್ನೂ ಒಗ್ಗೂಡಿಸಿ ಕಾರ್ಯಕರ್ತರನ್ನ ವಿಧಾನಸೌಧ ಮೆಟ್ಟಿಲು ಹತ್ತಿಸಿ, ಜೀವನದ ಅಮೂಲ್ಯ ಕ್ಷಣಗಳನ್ನ ಹಸಿರಾಗಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಎಲ್ಲರೂ ಧನ್ಯರಾದ್ರು.! ಶ್ರೀ ಸಾಮಾನ್ಯರು ಕೂಡ ವಿಧಾನಸೌಧದ ಮೆಟ್ಟಿಲು ಹತ್ತಬಹುದು ಅನ್ನೋದನ್ನ ಈ ನಾಯಕರು ಸಾಬೀತು ಮಾಡಿಸಿದ್ರು. ಇನ್ನೂ ಈ ಚಿಕ್ಕಮಗಳೂರು ಟು ಬೆಂಗಳೂರಿನ ಟೂರಿನಲ್ಲಿ ಕಾಂಗ್ರೆಸ್ ಹೋಬಳಿ ಕಾರ್ಯದರ್ಶಿಗಳಾದ ದಿನೇಶ್ ಕುಂಬರಕೋಡು, ಗಣೇಶ್ ಕುಂಬರಕೋಡು, ಬೆಳೆಗಾರರ ಸಂಘದ ಅಧ್ಯಕ್ಷ ಬೆಳೆಸೆ ರತ್ನಾಕರ್, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಸತೀಶ್, ದೇವದಾನ ಸೊಸೈಟಿ ಉಪಾಧ್ಯಕ್ಷ ಉಜ್ಜಯಿನಿ ಜಯರಾಂ, ನಿರ್ದೇಶಕರಾದ ಪಲ್ಲವಿ ಗಣೇಶ್, ವಿನಯ್ ಬಿದರೆ, ಗ್ರಾ ಪಂ ಸದಸ್ಯೆ ಆಶಾ ನಾರಾಯಣ್ ಸೇರಿದಂತೆ ಒಟ್ಟು 165 ಮಂದಿಯಿದ್ದರು.. ಪ್ರತಿಯೊಬ್ಬರಿಗೂ ಇದೊಂದು ಅವಿಸ್ಮರಣೀಯ, ಸುಂದರವಾದ ನೆನಪನ್ನ ಈ ಪಯಣ ಕೊಟ್ಟಿದ್ದಂತೂ ಸುಳ್ಳಲ್ಲ.!
ಪಬ್ಲಿಕ್ ಇಂಪ್ಯಾಕ್ಟ್, ಚಿಕ್ಕಮಗಳೂರು
