ಚಿಕ್ಕಮಗಳೂರು: ದೇಶದ ಪ್ರತಿಷ್ಠಿತ ಐಐಟಿ ಎನ್‌ಐಟಿ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ಸೇರಬಯಸುವ ವಿದ್ಯಾರ್ಥಿಗಳಿಗೆ ಪ್ರಸಕ್ತ ವರ್ಷದ ತಾಂತ್ರಿಕ ಶಿಕ್ಷಣ ಕೋರ್ಸ್ ಗಳಿಗೆ ನಡೆಸಲಾಗುವ ರಾಷ್ಟ್ರಮಟ್ಟದ ಪರೀಕ್ಷೆ ಜೆಇಇ ಅಡ್ವಾನ್ಸ್ ಪರೀಕ್ಷೆ ಫಲಿತಾಂಶದಲ್ಲಿ ನಗರದ ಶ್ರೀ ಸಾಯಿ ಏಂಜಲ್ಸ್ ಪದವಿಪೂರ್ವ ವಿದ್ಯಾಲಯದ ಅಭಿಷೇಕ್ ಸಿ.ಆರ್. ರಾಷ್ಟ್ರ ಮಟ್ಟದಲ್ಲಿ 4974 ರ್ಯಾಂಕ್ ಪಡೆದು ಜಿಲ್ಲೆಗೆ ಮತ್ತು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಯಾವುದೇ ರಿಪೀಟರ್ ಲಾಂಗ್ ಟರ್ಮ್ ಇಲ್ಲದೆ ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ.
ಕಠಿಣ ಪರಿಶ್ರಮದಿಂದ ಹಾಗೂ ಉತ್ತಮ ಮಾರ್ಗದರ್ಶನದಿಂದ ಮಾತ್ರ ಇಂತಹ ಪರೀಕ್ಷೆಗಳನ್ನು ಎದುರಿಸಲು ಸಾಧ್ಯ ಅಂತಹ ವಾತಾವರಣವು ಸಾಯಿ ಏಂಜಲ್ಸ್ ನಲ್ಲಿ ಮಾತ್ರ ಇದ್ದು ಅಧ್ಯಾಪಕ ವೃಂದದ ಪರಿಶ್ರಮ ಮತ್ತು ವಿದ್ಯಾರ್ಥಿಗಳ ಪರಿಶ್ರಮ ಎರಡರಿಂದಲು ಉತ್ತಮ ಫಲಿತಾಂಶ ದೊರೆತಿದೆ ಎಂದು ಸಂಸ್ಥೆಯ ಜಂಟಿ ಕಾರ್ಯದರ್ಶಿಗಳಾದ ಕಾರ್ತಿಕ್ ಎಂ.ಜೇ. ಸಂತಸ ವ್ಯಕ್ತಪಡಿಸಿದ್ದಾರೆ ಪ್ರಾಚಾರ್ಯರಾದ ನಾಗರಾಜ್ ಕೆಕೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ನಾಗೇಶ್ ಶ್ರೀಮತಿ ವಿಜಯ ನಾಗೇಶ್ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
