Tuesday, August 11, 2026
Homeಕ್ರೈಮ್ಚಿಕ್ಕಮಗಳೂರು: ದೇವಿರಮ್ಮ ದೀಪೋತ್ಸವ: ಭದ್ರತೆ ಪರಿಶೀಲಿಸಿದ ವಿಕ್ರಮ ಅಮಟೆ

ಚಿಕ್ಕಮಗಳೂರು: ದೇವಿರಮ್ಮ ದೀಪೋತ್ಸವ: ಭದ್ರತೆ ಪರಿಶೀಲಿಸಿದ ವಿಕ್ರಮ ಅಮಟೆ

Telegram Group
Join Now

ಚಿಕ್ಕಮಗಳೂರು: ಅಕ್ಟೋಬರ್ 19 ರಿಂದ 23 ರವರೆಗೆ ಚಿಕ್ಕಮಗಳೂರು ತಾಲೂಕು ಬಿಂಡಿಗ ಗ್ರಾಮದಲ್ಲಿ ಶ್ರೀ ದೇವಿರಮ್ಮನವರ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ.

ಈ ಹಿನ್ನಲೆಯಲ್ಲಿ ಭದ್ರತಾ ದೃಷ್ಠಿಯಿಂದ ಡಾ. ವಿಕ್ರಮ ಅಮಟೆ, IPS, ಪೊಲೀಸ್ ಅಧೀಕ್ಷಕರು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಪದಾಧಿಕಾರಿಗಳೊಂದಿಗೆ ದೇವಿರಮ್ಮ ಬೆಟ್ಟಕ್ಕೆ ಇಂದು ಚಾರಣ ನಡೆಸಿದರು.

ಹಾಗೆ ಪೊಲೀಸ್ ಬಂದೋಬಸ್ತ್ ನಿಯೋಜನೆ, ಬೆಟ್ಟ ಹತ್ತಲು ಭಕ್ತಾದಿಗಳು ನಡೆದುಕೊಂಡು ಹೋಗುವ ದಾರಿ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ನೂಕು ನುಗ್ಗಲು ಆಗದಂತೆ ಜನ ಸಂದಣಿ ನಿಯಂತ್ರಣ, ಆ್ಯಂಬುಲೆನ್ಸ್ ನಿಯೋಜನೆ, ಸುರಕ್ಷತಾ ಕ್ರಮಗಳು ಹಾಗೂ ಇತರೇ ಸಿದ್ಧತೆಗಳನ್ನು ಪರಿಶೀಲಿಸಿ, ಪೊಲೀಸ್ ಅಧೀಕ್ಷಕರವರು ಸೂಕ್ತ ಸಲಹೆ ಮತ್ತು ಸೂಚನೆಗಳನ್ನು ಸಹ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments