Saturday, August 15, 2026
Homeಕ್ರೈಮ್ಚಿಕ್ಕಮಗಳೂರು: ಮೆಡಿಕಲ್‌ ಕಾಲೇಜು ಸುತ್ತಮುತ್ತ ಡ್ರಗ್ಸ್‌ ಮುಕ್ತ ಜಾಗೃತಿ ಬೋರ್ಡ್‌ ಅಳವಡಿಕೆ!

ಚಿಕ್ಕಮಗಳೂರು: ಮೆಡಿಕಲ್‌ ಕಾಲೇಜು ಸುತ್ತಮುತ್ತ ಡ್ರಗ್ಸ್‌ ಮುಕ್ತ ಜಾಗೃತಿ ಬೋರ್ಡ್‌ ಅಳವಡಿಕೆ!

Telegram Group
Join Now

ಚಿಕ್ಕಮಗಳೂರು: ಇಂದಿನ ಯುವಜನರಲ್ಲಿ ಹೆಚ್ಚುತ್ತಿರುವ ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನದ ಬಗ್ಗೆ ಜಾಗೃತಿ ವಹಿಸಲು ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಹತ್ವದ ಹೆಜ್ಜೆಯನ್ನು ಇಟ್ಟಿದೆ.

ಹೌದು .. ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಕುರಿತು ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ ತನ್ನ ತೇಗೂರು ಕ್ಯಾಂಪಸ್ ಸುತ್ತಮುತ್ತ ಪ್ರದೇಶದಲ್ಲಿ ಬೃಹತ್ ಜಾಗೃತಿ ಫಲಕಗಳನ್ನು ಅಳವಡಿಸಿದೆ.‌

ಪೊಲೀಸ್ ಇಲಾಖೆ ಸಲಹೆ ಮತ್ತು ಮಾರ್ಗದರ್ಶನದ ಮೇರೆಗೆ ಆಡಳಿತ ಮಂಡಳಿ ಈ ಮಹತ್ವದ ಹೆಜ್ಜೆಯನ್ನು ಕೈಗೊಂಡಿದೆ

ವೈದ್ಯಕೀಯ ಸಂಸ್ಥೆಯಾಗಿರುವ ಕಾರಣ ಅದರ ಸುತ್ತಮುತ್ತ ಹೆಚ್ಚಿನ ಸಂಖ್ಯೆ ವಿದ್ಯಾರ್ಥಿಗಳು ವಾಸಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯುವ ಸಮುದಾಯವನ್ನು ಮಾದಕ ವ್ಯಸನದಿಂದ ದೂರವಿರಿಸಲು ಮತ್ತು ಅದರ ಗಂಭೀರ ಪರಿಣಾಮಗಳು ಕುರಿತು ಅರಿವು ಮೂಡಿಸಲು ಈ ಫಲಕಗಳನ್ನು ಪ್ರಮುಖ ಪಾತ್ರ ವಹಿಸಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments