Wednesday, August 12, 2026
Homeಕ್ರೈಮ್ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಮಾರ್ಗದಲ್ಲಿ ಪಲ್ಟಿಯಾದ ಜೀಪ್:7 ಪ್ರವಾಸಿಗರಿಗೆ ಗಂಭೀರ ಗಾಯ

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಮಾರ್ಗದಲ್ಲಿ ಪಲ್ಟಿಯಾದ ಜೀಪ್:7 ಪ್ರವಾಸಿಗರಿಗೆ ಗಂಭೀರ ಗಾಯ

Telegram Group
Join Now

ಚಿಕ್ಕಮಗಳೂರು: ಕಾಫಿನಾಡಿನ ಪ್ರಸಿದ್ಧ ತಾಣ ಮುಳ್ಳಯ್ಯನಗಿರಿ ಮಾರ್ಗದ ತಿಪ್ಪನಹಳ್ಳಿ ಎಸ್ಟೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿ ಜೀಪ್ ಪಲ್ಟಿಯಾಗಿದ್ದು ವಾಹನದಲ್ಲಿದ್ದ ಏಳು ಮಂದಿ ಪ್ರವಾಸಿಗರಿಗೆ ಗಾಯಗಳಾಗಿವೆ.

ಗಾಯಗೊಂಡವರೆಲ್ಲ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಮೂಲದ ಪ್ರವಾಸಿಗರು ಆಗಿದ್ದು , ಪುತ್ತೂರಿನಿಂದ ಸ್ವಂತ ಜೀಪಿನಲ್ಲಿ ಕಾಫಿನಾಡಿನ ಮುಳ್ಳಯ್ಯನಗಿರಿಗೆ ಪ್ರವಾಸ ಬೆಳಸಿದ್ದರು.ದತ್ತಪೀಠಕ್ಕೆ ಭೇಟಿ ನೀಡಿ ಹಿಂತಿರುಗುತ್ತಿದ್ದ ವೇಳೆ ಅಂಕು ಡೊಂಕಿನ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ.ಕೂಡಲೇ ಧಾವಿಸಿದ ಸ್ಥಳಿಯರು ಗಾಯಾಳುಗಳನ್ನ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಚಿಕ್ಕಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗಿರಿಭಾಗಗಳಲ್ಲಿ ಅಂಕುಡೊಂಕಿನ ರಸ್ತೆ ಇರುವುದರಿಂದ ಚಾಲಕರು ಭಾರೀ ಜಾಗ್ರತೆಯಿಂದ ವಾಹನ ಚಲಿಸಬೇಕು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments