Friday, July 31, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಬಸವ ಜಯಂತಿಯಂದು ಅಧಿಕಾರಿಗಳು ಗೈರು: ಜಿಲ್ಲಾಡಳಿತದ ವಿರುದ್ಧ ಜನಸಾಮಾನ್ಯರು ಆಕ್ರೋಶ

ಚಿಕ್ಕಮಗಳೂರು: ಬಸವ ಜಯಂತಿಯಂದು ಅಧಿಕಾರಿಗಳು ಗೈರು: ಜಿಲ್ಲಾಡಳಿತದ ವಿರುದ್ಧ ಜನಸಾಮಾನ್ಯರು ಆಕ್ರೋಶ

Telegram Group
Join Now

ಚಿಕ್ಕಮಗಳೂರು: ಕಾಯಕವೇ ಕೈಲಾಸ ಅಂತಾ ಹೇಳಿಕೊಟ್ಟ ಕಾಯಕ ಗುರು, ಕಾಯಕಯೋಗಿ, ಜಗಜ್ಯೋತಿ ಶ್ರೀ ಬಸವಣ್ಣನವರ ಜಯಂತಿಯನ್ನ ನಿನ್ನೆ ಚಿಕ್ಕಮಗಳೂರಿನಲ್ಲಿ ಆಚರಿಸಲಾಯ್ತು. ಆದ್ರೆ ವಿಪರ್ಯಾಸ ಅಂದ್ರೆ ಕಾಯಕವೇ ಕೈಲಾಸ ಅಂತಾ ಹೇಳಿಕೊಟ್ಟ ಬಸವಣ್ಣನವರ ವಿಚಾರಧಾರೆಗಳಿಗೆ ಎಳ್ಳುನೀರು ನೀರು ಬಿಟ್ಟು, ತದ್ವಿರುದ್ದವಾಗಿ ನಡೆದುಕೊಂಡ ಚಿಕ್ಕಮಗಳೂರು ಜಿಲ್ಲಾಡಳಿತದ ವಿರುದ್ಧ ಜನಸಾಮಾನ್ಯರು ಆಕ್ರೋಶ ಹೊರಹಾಕಿದ್ದಾರೆ.

ಮುಖ್ಯವಾಗಿ ಕಾರ್ಯಕ್ರಮದಲ್ಲಿರಬೇಕಾದ ಡಿಸಿ,ಎಸ್ಪಿ ಹಾಗೂ ಸಿಇಓ ಸರ್ಕಾರಿ ರಜೆ ಅಂತಾ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ.. ಇನ್ನೂ ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಅನ್ನೋ ಹಾಗೆ ನಮ್ಮ ಡಿಸಿ, ಎಸ್‌ಪಿ, ಸಿಇಓಗಳೇ ಬಂದಿಲ್ಲ , ನಾವು ಏನಕ್ಕೆ ಹೋಗೋದು ಅಂತಾ ಅಧಿಕಾರಿಗಳೆಲ್ಲಾ ಚಕ್ಕರ್ ಹೊಡಿದಿದ್ದಾರೆ.. ಅಧಿಕಾರಿಗಳೇ ಬಂದಿಲ್ಲ ಅಂದ್ಮೇಲೆ ಸಭಿಕರು ಬರ್ತಾರಾ..? ಚಾನ್ಸೇ ಇಲ್ಲಾ.. ಹಾಗಾಗಿಯೇ ಕಾಯಕಯೋಗಿಯ ಕಾರ್ಯಕ್ರಮದಲ್ಲಿ ತುಂಬಿ ತುಳುಕಬೇಕಿದ್ದ ಚೇರ್ ಗಳೆಲ್ಲಾ ಸಂಪೂರ್ಣ ಖಾಲಿ.. ಖಾಲಿ..! ಆದ್ರೂ ಖಾಲಿ ಖುರ್ಚಿಗಳಿಗೆ ಚಿಕ್ಕಮಗಳೂರು ಶಾಸಕ ತಮ್ಮಯ್ಯ, ಪರಿಷತ್ ಶಾಸಕ ಸಿ.ಟಿ ರವಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಪಿ ಮಂಜೇಗೌಡ ಭಾಷಣ ಮಾಡಬೇಕಾದ ಹೀನಾಯ ಪರಿಸ್ಥಿತಿ ಉದ್ಭವಿಸಿತು.

ಶಾಸಕರು, ಜನಪ್ರತಿನಿಧಿಗಳು ಬರ್ತಾರೆ ಅಂದ್ರೂ ಅಧಿಕಾರಿಗಳು ಇಲ್ಲ., ಜಗಜ್ಯೋತಿ, ಕಾಯಕವೇ ಕೈಲಾಸ ಅಂತಾ ವಿಶ್ವಕ್ಕೆ ಹೇಳಿಕೊಟ್ಟ ಮುತ್ಸದ್ಧಿಗಾದ್ರೂ ಗೌರವ ಕೊಡಬೇಕು ಅನ್ನೋ ಕನಿಷ್ಠ ಜ್ನಾನವೂ ಇಲ್ಲದೇ ಮಾಡೋ ಕಾಯಕಕ್ಕೆ ಬೆನ್ನು ಹಾಕಿದ್ದು ಅಕ್ಷಮ್ಯ ಅಪರಾಧ.

ಒಟ್ಟಿನಲ್ಲಿ, ಒಂದು ಜಿಲ್ಲಾಡಳಿತ ಸಕ್ರಿಯವಾಗಿಲ್ಲ ಅಂದ್ರೆ ಬಸವಣ್ಣನವರಿಗೂ ಅವಮಾನ ಆಗುತ್ತೆ.. ರಾಜ್ಯಕ್ಕೂ.. ದೇಶಕ್ಕೂ ಅವಮಾನ ಆಗುತ್ತೆ ಅನ್ನೋದನ್ನ ಚಿಕ್ಕಮಗಳೂರಿನ ಅಧಿಕಾರಿಗಳು ಸಾಬೀತು ಮಾಡಿದ್ದು, ವ್ಯವಸ್ಥೆಗೆ ಹಿಡಿದ ಕೈಗನ್ನಡಿದ ಅಲ್ಲದೇ ಬೇರೆನೂ ಅಲ್ಲ.!

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments