Monday, September 14, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಏ.30 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ-2

ಚಿಕ್ಕಮಗಳೂರು: ಏ.30 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ-2

Telegram Group
Join Now

ಚಿಕ್ಕಮಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ 2 ಇದೇ ಏ.30 ರಿಂದ ಆರಂಭಗೊಳ್ಳುತ್ತಿರುವುದರಿಂದ ಪರೀಕ್ಷಾ ತಯಾರಿ ಕುರಿತು ಅಪರ ಜಿಲ್ಲಾಧಿಕಾರಿ ನಂಜುಡೇಗೌಡ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.

ಏ.30 ರಿಂದ ಮೇ 13 ರ ವರೆಗೆ ಪರೀಕ್ಷೆ 2 ನಡೆಸುವುದಕ್ಕೆ ಪಿಯುಸಿ ಪರೀಕ್ಷಾ ಮಂಡಳಿ ವೇಳಾ ಪಟ್ಟಿ ಸಿದ್ದಪಡಿಸಿದೆ. ಅದರಂತೆ ಪರೀಕ್ಷೆಗೆ ಬೇಕಾದ ಸಿದ್ದತೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಸಿಸಿ ಟಿವಿ ಕ್ಯಾಮರಾ ಅಳವಡಿಕೆ, ವೆಬ್‌ ಕಾಸ್ಟಿಂಗ್‌ ಹಾಗೂ ಪರೀಕ್ಷಾ ಪ್ರಶ್ನ ಪತ್ರಿಕೆಗೆ ಪೂರೈಕೆ ಸೇರಿದಂತೆ ಎಲ್ಲವನ್ನೂ ನಿಯಮಾನುಸಾರ ತಯಾರಿ ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ 7 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ 2 ನಡೆಯಲಿದ್ದು, ಈ ಪೈಕಿ ಎನ್‌ಆರ್‌ಪುರ, ಶೃಂಗೇರಿ, ಕೊಪ್ಪ, ಚಿಕ್ಕಮಗಳೂರು, ಮೂಡಿಗರೆ, ತರೀಕೆರೆ ಹಾಗೂ ಕಡೂರು ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟು 1744 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ.

ಈ ಪೈಕಿ 844 ವಿದ್ಯಾರ್ಥಿಗಳು ಕಳೆದ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು. ಏ.9 ರಂದು ಪ್ರಕಟವಾದ ಫಲಿತಾಂಶದಲ್ಲಿ ಅಂಕ ಕಡಿಮೆ ಬಂದಿದೆ ಎಂಬ ಕಾರಣಕ್ಕೆ ಮರು ಪರೀಕ್ಷೆ ತೆಗೆದುಕೊಂಡ 658 ವಿದ್ಯಾರ್ಥಿಗಳು, ಕಳೆದ ವರ್ಷ ಅನುತ್ತೀರ್ಣರಾದ 227 ಹಾಗೂ ಖಾಸಗಿಯಾಗಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆದುಕೊಂಡ 8 ವಿದ್ಯಾರ್ಥಿಗಳಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!