Sunday, May 10, 2026
Homeಕ್ರೈಮ್ಚಿಕ್ಕಮಗಳೂರು: ಒಂದೇ ದಿನ 3 ನಾಗರ ಹಾವು ಕೋಳಿ ಗೂಡಿನಲ್ಲಿ ಪ್ರತ್ಯಕ್ಷ: ಬೆಚ್ಚಿಬಿದ್ದ ಗ್ರಾಮಸ್ಥರು!

ಚಿಕ್ಕಮಗಳೂರು: ಒಂದೇ ದಿನ 3 ನಾಗರ ಹಾವು ಕೋಳಿ ಗೂಡಿನಲ್ಲಿ ಪ್ರತ್ಯಕ್ಷ: ಬೆಚ್ಚಿಬಿದ್ದ ಗ್ರಾಮಸ್ಥರು!

ಚಿಕ್ಕಮಗಳೂರು: ತಾಲೂಕಿನ ಖಾಂಡ್ಯ ಹೋಬಳಿ ಬಿದರೆ ಗ್ರಾಮದ ನಿವಾಸಿಗಳಾದ ರಾಮೇಗೌಡ ದೇವರಾಜೇಗೌಡ ಸುಗ್ಗಿಮಕ್ಕಿ ನಾಗರತ್ನ ಕೆರೆಮನೆ ಮನೆಯಲ್ಲಿ ಕೋಳಿ ಗೂಡಿನಲ್ಲಿ 3 ನಾಗರ ಹಾವುಗಳು ಪ್ರತ್ಯಕ್ಷವಾಗಿವೆ.

ಹೌದು .. 3 ನಾಗರ ಹಾವು ಕೋಳಿ ಗೂಡಿನಲ್ಲಿ ಪ್ರತ್ಯಕ್ಷವಾಗಿದ್ದು ಕೋಳಿ ಮೊಟ್ಟೆಗಳನ್ನ ನುಂಗಿ ಹೊರ ಬರುತ್ತಿದ್ದವು. ಈ ಸಂದರ್ಭದಲ್ಲಿ ಊರಿನ ಸ್ಥಳೀಯ ನಿವಾಸಿ ಶಶಿ ಬಿದರೆ ರೋಹಿತ್ ತಕ್ಷಣ ಬಾಳೆಹೊನ್ನೂರಿನ ಉರಗ ತಜ್ಞನಿಗೆ ಆಲ್ಬರ್ಟ್ ಗೆ ಕರೆ ಮಾಡಿ ಹಿಡಿಯಲು ಮುಂದಾಗಿದ್ದಾರೆ.ಆ ನಂತರ ಅವುಗಳನ್ನ ರಕ್ಷಣೆ ಮಾಡಿ ಎಲೆಕಲ್ಲು ಸಮೀಪದ ಕಾಡಿಗೆ ಬಿಟ್ಟಿದ್ದಾರೆ.

ಒಂದೇ ದಿನ 3 ನಾಗರಹಾವನ್ನು ಕಂಡು ಗ್ರಾಮದ ನಿವಾಸಿಗಳು ಶಾಕ್ ಆಗಿದ್ದಾರೆ. ಈ ಹಾವುಗಳನ್ನು ಬಿದರೆ ಊರಿನ ಜನ ನೋಡಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!