ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಮೆಣಸೆ ಗ್ರಾಮದ ಕನ್ಯಾಕುಮಾರಿ ದೇವಸ್ಥಾನ ಹಾಗೂ ಯಡದಳ್ಳಿಯ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನಗಳಲ್ಲಿ ಒಡವೆ ಹಾಗೂ ಹಣ ಕಳ್ಳತನ ಮಾಡಿದ್ದ ಇಬ್ಬರು ಅಂತರ್ ಜಿಲ್ಲಾ ಆರೋಪಿಗಳನ್ನು ಪೊಲೀಸ್ ತಂಡವು ಬಂಧಿಸಿ, ಸುಮಾರು 11 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿಚಾರಣೆ ವೇಳೆ ಆರೋಪಿಗಳು ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಸಬ್ಲಿ ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಹಾಸನ ಜಿಲ್ಲೆ ಬೇಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಶೆಟ್ಟಿಗೆರೆ ಗ್ರಾಮದ ಶೆಟ್ಟಿಗೆರೆ ದೇವಿರಮ್ಮ ದೇವಸ್ಥಾನದಲ್ಲಿಯೂ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಮೂಲಕ ಒಟ್ಟು 4 ದೇವಸ್ಥಾನಗಳ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಿದಂತಾಗಿದೆ.
ಶೃಂಗೇರಿ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕರಾದ ಅಬ್ದುಲ್ ಖಾದರ್ ರವರ ನೇತೃತ್ವದ ಪೊಲೀಸ್ ತಂಡದಲ್ಲಿ ಪಿಎಸ್ಐಗಳಾದ ಅಭಿಷೇಕ್ ಕೆ ಮತ್ತು ನಾಗರಾಜ್ ಬಿ ಆರ್ ಹಾಗೂ ಸಿಬ್ಬಂದಿಗಳಾದ ರಜತ್, ಕುಮಾರ್, ಸುನಿಲ್ ಕುಮಾರ್, ಪರಮೇಶ್, ಅಜಯ್, ಪ್ರದೀಪ, ಸದಾಶಿವ ಕಾರಜೋಳ, ಮದನ್, ರಾಮು ಹನಗಂಡಿ, ಸುನೀಲ್, ಗೋಪಾಲ್ ರೆಡ್ಡಿ ಮತ್ತು ಪ್ರಶಾಂತ್ ರವರು ಯಶಸ್ವಿ ಕಾರ್ಯಾಚರಣೆ ನಡೆಸಿರುತ್ತಾರೆ.
ಈ ಪ್ರಕರಣದ ತನಿಖೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಬೆರಳು ಮುದ್ರೆ ಘಟಕದ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ಹಾಗೂ ಸಿಬ್ಬಂದಿಗಳಾದ ಸತೀಶ್ ಮತ್ತು ಕುಮಾರ್ ರವರು ವೈಜ್ಞಾನಿಕ ನೆರವು ನೀಡಿದ್ದಾರೆ.
ವರದಿ: ವಿಠಲ್ , ಶೃಂಗೇರಿ
