Wednesday, May 27, 2026
Homeಕ್ರೈಮ್ಚಿಕ್ಕಮಗಳೂರು: ಬಾವಿ ಕ್ಲೀನ್ ಮಾಡುವಾಗ ಉಸಿರುಗಟ್ಟಿ ಕಾರ್ಮಿಕ ಸಾವು!

ಚಿಕ್ಕಮಗಳೂರು: ಬಾವಿ ಕ್ಲೀನ್ ಮಾಡುವಾಗ ಉಸಿರುಗಟ್ಟಿ ಕಾರ್ಮಿಕ ಸಾವು!

ಚಿಕ್ಕಮಗಳೂರು: ಬಾವಿ ಕ್ಲೀನ್ ಮಾಡುವಾಗ ಆಮ್ಲಜನಕದ ಕೊರತೆಯಿಂದ ಉಸಿರುಗಟ್ಟಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ನಗರದ ಉಂಡೇದಾಸರಹಳ್ಳಿ ಬಡಾವಣೆಯಲ್ಲಿ ನಡೆದಿದೆ.

ಮೃತನನ್ನು ಮೋಹನ್ (40) ಎಂದು ಗುರುತಿಸಲಾಗಿದೆ. ದರ್ಶನ್ ಎಂಬವರ ಮನೆಯ ಬಾವಿ ಕ್ಲೀನ್ ಮಾಡಲು ಮೋಹನ್ ತೆರಳಿದ್ದರು. ಬಾವಿಯ ಒಳಗೆ ಇಳಿದಾಗ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು, ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!