Wednesday, May 27, 2026
Homeಕ್ರೈಮ್ಶಾಲಾ -ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಶಿಕ್ಷಣದ ಮಹತ್ವಕ್ಕೆ ದೊಡ್ಡ ಹೊಡೆತ :ಹಿಂದೂ ಜನಜಾಗೃತಿ ವೇದಿಕೆ

ಶಾಲಾ -ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಶಿಕ್ಷಣದ ಮಹತ್ವಕ್ಕೆ ದೊಡ್ಡ ಹೊಡೆತ :ಹಿಂದೂ ಜನಜಾಗೃತಿ ವೇದಿಕೆ

ಮೂಡಿಗೆರೆ: ಶಾಲೆ – ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡುವ ಹಾಗೂ ಕೇಸರಿ ಶಾಲು ನಿರ್ಬಂಧಿಸುವ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು ಹಾಗೂ ಅಕ್ರಮ ಗೋ ಸಾಗಾಟಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಸಿ ಹಿಂದೂ ಜನಜಾಗೃತಿ ವೇದಿಕೆ ಮುಖಂಡರು ಸೋಮವಾರ ತಹಸೀಲ್ದಾರ್ ಎಸ್.ಅಶ್ವಿನಿ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯ ಸರಕಾರ ಶಾಲೆ ಹಾಗೂ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿ, ಕೇಸರಿ ಶಾಲು ಧರಿಸುವುದಕ್ಕೆ ನಿರ್ಬಂಧ ವಿಧಿಸಿರುವುದು ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ. ಈ ನಿರ್ಧಾರ ಸಮಾನತೆ, ಧರ್ಮನಿರಪೇಕ್ಷತೆ ಹಾಗೂ ಏಕರೂಪದ ಸಮವಸ್ತ್ರ ನೀತಿಗೆ ವಿರುದ್ಧವಾಗಿದೆ. 2022ರಲ್ಲಿ ಉಡುಪಿಯಲ್ಲಿ ಆರಂಭವಾದ ಹಿಜಾಬ್ ವಿವಾದವು ರಾಜ್ಯಾದ್ಯಂತ ಉದ್ವಿಗ್ನ ಪರಿಸ್ಥಿತಿಯನ್ನು ನಿರ್ಮಿಸಿತ್ತು. ಈ ಪ್ರಕರಣದ ಕುರಿತು ನ್ಯಾಯಾಲಯ ಶಾಲೆ-ಕಾಲೇಜುಗಳಲ್ಲಿ ನಿಗದಿತ ಸಮವಸ್ತ್ರವನ್ನು ಪಾಲಿಸಬೇಕೆಂದು ಸೂಚಿಸಿತ್ತು. ಹಿಜಾಬ್ ಪ್ರಕರಣ ಸುಪ್ರಿಂ ಕೋರ್ಟನಲ್ಲಿ ಬಾಕಿಯಿದೆ. ಆದರೂ ಸರಕಾರ ಹಿಜಾಬ್‌ಗೆ ಅವಕಾಶ ನೀಡಿ, ಕಾನೂನು ಉಲ್ಲಂಘಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಹಿಜಾಬ್‌ಗೆ ಅವಕಾಶ ನೀಡಿದರೆ ಇತರೆ ಸಮುದಾಯದ ವಿದ್ಯಾರ್ಥಿಗಳು ಸಹ ತಮ್ಮ ಧಾರ್ಮಿಕ ಚಿಹ್ನೆಗಳನ್ನು ಪ್ರದರ್ಶಿಸುವ ಸಾಧ್ಯತೆ ಇರುತ್ತದೆ. ಇದರಿಂದ ಶಿಕ್ಷಣದ ಮಹತ್ವ ಕಳೆದುಕೊಳ್ಳುತ್ತದೆ. ಹಾಗಾಗಿ ಹಿಜಾಬ್‌ಗೆ ಅವಕಾಶ ನೀಡಬಾರದು. ಅಲ್ಲದೇ ಗೋ ಕಳ್ಳತನ, ಗೋಮಾಂಸ ಮಾರಾಟ ಹೆಚ್ಚುತ್ತಿದೆ. ಇದಕ್ಕೂ ಕೂಡ ಕಡಿವಾಣ ಹಾಕಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಹಿಂದೂ ಮುಖಂಡರಾದ ಸಂಜಯ್ ಕೊಟ್ಟಿಗೆಹಾರ, ಬಸವರಾಜ್, ರಘು ಮೂಡಿಗೆರೆ, ಶರತ್ ಮಾಕೋನಹಳ್ಳಿ, ಧರ್ಮರಾಜ್ ಬಿನ್ನಡಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!