ಶೃಂಗೇರಿ ಕೊಪ್ಪ ತಾಲ್ಲೂಕಿನ ಗಡಿ ಭಾಗದಲ್ಲಿ ಇರುವ ಗಡಿಕಲ್ ವೃತ್ತವು ಚಿಕ್ಕಮಗಳೂರು ಶೃಂಗೇರಿ ಮುಖ್ಯ ರಸ್ತೆಗೆ ಹಾಗೂ ಶ್ರೀ ಕ್ಷೇತ್ರ ಹೊರನಾಡಿಗೆ ಸಂಚಾರಿಸುವ ಮಾರ್ಗದ ಮುಖ್ಯ ವೃತ್ತ ಇದಾಗಿದ್ದು ಹಲವು ವರ್ಷದಿಂದ ದುಃಸ್ಥಿತಿಗೊಂಡಿದ್ದು ರೋಟರಿ ಕ್ಲಬ್ ಹಾಗೂ ಸ್ಥಳೀಯ ಗ್ರಾಮಸ್ಥರ ಧನ ಸಹಾಯದಿಂದ ಇಂದು ಗಡಿಕಲ್ ವೃತ್ತದಲ್ಲಿ ನಾಮಫಲಕ, ಸಿಸಿ ಕ್ಯಾಮರಾ ಹಾಗೂ ಸೋಲಾರ್ ಬೀದಿ ದೀಪದ ಉದ್ಘಾಟನ ಕಾರ್ಯಕ್ರಮ ನೆರವೇರಿತು

ನಾಮಫಲಕ ಉದ್ಘಾಟನೆ ಮಾಡಿ ಮಾತನಾಡಿದ ರೋಟರಿ ಅಸಿಸ್ಟೆಂಟ್ ಗೌರ್ವನರ್ ರಾಜಗೋಪಾಲ ಜೋಶಿ,ಹೊರನಾಡು ಅವರು ನಾಮಫಲಕ ನಿರ್ಮಾಣದಿಂದ ಶ್ರೀ ಕ್ಷೇತ್ರ ಹೊರನಾಡಿಗೆ ಬರಲು ಪ್ರವಾಸಿಗರಿಗೆ ತುಂಬಾ ಉಪಯುಕ್ತವಾಗಿದೆ ಹಾಗೂ ಸಿ ಸಿ ಕ್ಯಾಮೆರದಿಂದ ಶೃಂಗೇರಿ ಹಾಗೂ ಜಯಪುರ ಪೊಲೀಸ್ ಠಾಣೆಗೆ ಹಾಗೂ ಅಗಲಗಂಡಿ ಪಂಚಾಯತ್ PDOಗೆ ಅಪರಾಧ ತಡೆಗಟ್ಟಲು ಸಹಾಯವಾಗುತ್ತದೆ ಈ ಕಾರ್ಯಕ್ಕೆ ಕೈ ಜೋಡಿಸಿದ ಊರಿನ ಸಮಸ್ತ ಗ್ರಾಮಸ್ಥರಿಗೂ ಹೃದಯಪೂರ್ವಕ ಅಭಿನಂದನೆಗಳು ಇಂತಹ ಕಾರ್ಯಗಳು ಸಮಾಜಕ್ಕೆ ಮಾದರಿ ಇದರ ಜೊತೆಗೆ ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವಂತಹ ಕೆಲಸವನ್ನು ಎಲ್ಲರೂ ಮಾಡೋಣ ಎಂದರು

ಪ್ರಸ್ತಾವಿಕ ನುಡಿ ಮಾತನಾಡಿದ ಶೃಂಗೇರಿ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಅಂಬಲಮನೆ ಸುಬ್ರಮಣ್ಯ ಅವರು ನಾನು 25ನೇ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ ನನ್ನ ಅವಧಿಯಲ್ಲಿ 100 ಕಾರ್ಯಕ್ರಮಗಳ ಗುರಿ ಇಟ್ಟುಕೊಂಡು ಅಧ್ಯಕ್ಷನಾದೆ ಇದುವರೆಗೂ 95 ಕಾರ್ಯಕ್ರಮಗಳು ಯಶಸ್ಸು ಹೊಂದಿದ್ದು ಈ ಕಾರ್ಯವು 96ನೇ ಕಾರ್ಯಕ್ರಮವಾಗಿದ್ದು ಇನ್ನು ನನ್ನ ಅಧ್ಯಕ್ಷ ಸ್ಥಾನಕ್ಕೆ ಒಂದು ತಿಂಗಳ ಅವಧಿ ಇದ್ದು ಅದರೊಳಗೆ ಇನ್ನು 4ಅಭಿರುದ್ದಿ ಕಾರ್ಯಕ್ರಮವನ್ನು ಮಾಡಿ ನನ್ನ ಗುರಿಯನ್ನು ಮುಟ್ಟುತೇನೆ.
ಈ ಕಾರ್ಯಕ್ಕೆ ಗ್ರಾಮಸ್ಥರಿಂದ ಅಂದಾಜು 70ಸಾವಿರ ಹಣ ಸಂಗ್ರಹವಾಗಿದ್ದು 1ಲಕ್ಷ್ಮಿ ದಲ್ಲಿ ಕಾಮಗಾರಿ ಮುಕ್ತಾಯವಾಗಿದೆ. ಈ ನನ್ನ ಗುರಿಗೆ ಸಹಕರಿಸಿದ ಊರಿನ ಸಮಸ್ತ ಗ್ರಾಮಸ್ಥರಿಗೂ ನನ್ನ ಅಭಿನಂದನೆಗಳು ಗಡಿಕಲ್ನ ನಾಮಫಲಕ, ಸೋಲಾರ್ ವಿದ್ಯುತ್ ದೀಪ ಹಾಗೂ ಸಿ ಸಿ ಕ್ಯಾಮೆರಾ ಇನ್ನು ಮುಂದೆ ಸಾರ್ವಜನಿಕರಿಗೆ ಉಪಯುಕ್ತವಾಗಲಿದೆ ಎಂದರು
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಕೀಲರಾದ ಸುಧೀರ್ ಕುಮಾರ್ ಮುರೊಳ್ಳಿ ಅವರು ಮಾತನಾಡಿ
ಒಂದು ಊರಿನಲ್ಲಿ ನಾಮಫಲಕ, ಬೀದಿ ದೀಪ, ಸಿ ಸಿ ಕ್ಯಾಮೆರಾಗಳು ಇಂದಿನ ಕಾಲಕ್ಕೆ ಮೂಲಭೂತ ಅವಶ್ಯಕತೆ ಆಗಿದೆ ಈ ನಾಮಫಲಕ ನಿರ್ಮಾಣದಿಂದ ಗಡಿಕಲ್ ನ ಸೌಂದರ್ಯ ಇನ್ನು ಹೆಚ್ಚಾಗಿದ್ದು ಆಟೋ ಚಾಲಕರಿಗೂ ಹಾಗೂ ಅಂಗಡಿ ಮಾಲೀಕರಿಗೆ ನಿಟ್ಟುಸಿರು ಬಿಡುವಂತಾಗಿದೆ ಪ್ರತಿನಿತ್ಯ ಪ್ರವಾಸಿಗರಿಗೆ ರಸ್ತೆ ಬಗ್ಗೆ ಮಾರ್ಗದರ್ಶನ ಮಾಡುವ ಕೆಲಸ ತಪ್ಪಿದೆ. ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಮಾಡಿದ ಗುತ್ತಿಗೆದಾರರಾದ ಶೂನ್ಯ ರಮೇಶ್ ಅವರಿಗೆ ಧನ್ಯವಾದಗಳು ಎಂದರು
ಈ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಮಂಜುಳಾ ಸುಬ್ರಮಣ್ಯ ಮಹೇಶ್,ಮಂಜುನಾಥ್ ಹೆಚ್.ಆರ್, ಸುವರ್ಣ ಅವಿನಾಶ್,ನಟೇಶ್ ಶೃಂಗೇರಿ,ಅಣ್ಣಪ್ಪ, ಚಂದ್ರಶೇಖರ್ ಗಡಿಕಲ್ ಹಾಗೂ ಗ್ರಾಮಸ್ಥರು ಉದ್ಘಾಟನೆಯಲ್ಲಿ ಭಾಗವಸಿದ್ದರು.
