Tuesday, July 14, 2026
Homeಕ್ರೈಮ್ಆಲ್ದೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ದಲಿತರಿಗೆ ಉನ್ನತ ಹುದ್ದೆ ನೀಡುವುದಾಗಿ ಮೋಸ : ಧರಣಿಗೆ...

ಆಲ್ದೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ದಲಿತರಿಗೆ ಉನ್ನತ ಹುದ್ದೆ ನೀಡುವುದಾಗಿ ಮೋಸ : ಧರಣಿಗೆ ಮುಂದಾದ ದಲಿತ ಸಂಘಟನೆಗಳು

Telegram Group
Join Now

ಆಲ್ದೂರು: ಚಿಕ್ಕಮಗಳೂರು ತಾಲ್ಲೂಕು ಆಲ್ದೂರು ಹೋಬಳಿ ವ್ಯಾಪ್ತಿಯ ಪಟ್ಟಣದ ಹೃದಯ ಭಾಗದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂಭಾಗ ಅಹೋರಾತ್ರಿ ಧರಣಿಗೆ ಡಾ.ಬಿ.ಆರ್. ಅಂಬೇಡ್ಕರ್ ಹೋರಾಟ ವೇದಿಕೆ ಮತ್ತು ದಲಿತ ಸಂಘಟನೆ ಒಕ್ಕೂಟಗಳು ಮುಂದಾಗಿವೆ

ಡಾ.ಬಿ,ಆರ್ ಅಂಬೇಡ್ಕರ್ ಹೋರಾಟ ವೇದಿಕೆ ಮತ್ತು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಈ ಹಿಂದೆ ದಿನಾಂಕ 8.8.2024 ರಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನೌಕರಿಗೆ ಅಭ್ಯರ್ಥಿಗಳ ಆಯ್ಕೆ ಮಾಡುವಾಗ ಸಾಮಾಜಿಕ ನ್ಯಾಯ ಕಡೆಗಣಿಸಿ ರೋಸ್ಟರ್ ಪದ್ಧತಿ ಅಳವಡಿಸದೆ ನೇಮಕಾತಿ ನಿಯಮಗಳನ್ನು ಗಾಳಿಗೆ ತೂರಿ ಒಂದೇ ಜಾತಿಗೆ ನೌಕರಿ ನೀಡುವುದನ್ನು ವಿರೋಧಿಸಿ ನಡೆಸಿದ ಹೋರಾಟ ಸಂದರ್ಭದಲ್ಲಿ ದಿನಾಂಕ 04.09.2024 ರಂದು ನಡೆದ ಸರ್ವ ಸದಸ್ಯರ ಮಹಾಸಭೆಯಲ್ಲಿ ದಲಿತರಿಗೆ ಅಕೌಂಟೆಂಟ್ ಹುದ್ದೆಯನ್ನು ನೀಡುವುದಾಗಿ ಭರವಸೆ ನೀಡಿದ ಅಲ್ಲದೆ ಸಭಾ ನಿರ್ಣಯ ಕೂಡ ಮಾಡಿರುತ್ತಾರೆ ಆದರೆ ಈಗ ದಲಿತರನ್ನು ಕೇವಲ ಡಿ ದರ್ಜೆ ನೌಕರಿಗೆ ಸೀಮಿತಗೊಳಿಸಿದ್ದು ಈಗಾಗಲೇ ಸಹಕಾರಿ ಸಂಘದಲ್ಲಿ ಮೂರರಿಂದ ನಾಲ್ಕು ಹುದ್ದೆಗಳು ಖಾಲಿ ಇರುತ್ತದೆ ಆದ್ದರಿಂದ ದಲಿತರಿಗೆ ಉನ್ನತ ಹುದ್ದೆಯನ್ನು ನೀಡಬೇಕೆಂದು ಒತ್ತಾಯಿಸಿ ಈ ತಿಂಗಳ ಮಾಸಿಕ ಸಭೆಯ ದಿನದಂದು ಅಹೋರಾತ್ರಿ ಧರಣಿ ನಡೆಸುವುದಾಗಿ ಡಾ. ಬಿ,ಆರ್,ಅಂಬೇಡ್ಕರ್ ಹೋರಾಟ ವೇದಿಕೆ ಮತ್ತು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಪತ್ರಿಕ ಹೇಳಿಕೆ ನೀಡಿದ್ದು, ದಲಿತ ಸಮುದಾಯಕ್ಕೆ ನ್ಯಾಯ ಸಿಗುವರೆಗೂ ಹೋರಾಟ ಮುನ್ನಡೆಸುವುದಾಗಿ ಎಚ್ಚರಿಕೆ ನೀಡಿವೆ

ಈ ಸಂದರ್ಭ ಹೋರಾಟ ವೇದಿಕೆ ಗೌರವಾಧ್ಯಕ್ಷ ವೈ ಎಂ ಹೊನ್ನಪ್ಪ, ಅಧ್ಯಕ್ಷ ನವರಾಜು ಎಚ್, ಉಪಾಧ್ಯಕ್ಷ ಕಠಾರದಹಳ್ಳಿ ಗಣೇಶ್, ಕಾರ್ಯದರ್ಶಿ ಹೆಡದಾಳು ಕುಮಾರ್, ಸಹ ಕಾರ್ಯದರ್ಶಿ ದೋಣಗುಡಿಗೆ ನಾಗೇಶ್, ಖಜಾಂಚಿ ವಸಂತ್ ಆಲ್ದೂರು ಸೇರಿದಂತೆ ಆನೇಕರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments