ಚಿಕ್ಕಮಗಳೂರು: 2023ರ ವಿಧಾನಸಭೆಯ ಚುನಾವಣೆ, ತುಂಬಾ ಹತ್ತಿರದಿಂದ ನಾನು ನೋಡಿದ ಚುನಾವಣಾ ಅಖಾಡ. 5 ಕ್ಷೇತ್ರಗಳನ್ನ ಹೊಂದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೃಂಗೇರಿಯ ರಾಜೇಗೌಡರನ್ನ ಹೊರತುಪಡಿಸಿ, ಉಳಿದ ನಾಲ್ಕು ಕ್ಷೇತ್ರದಲ್ಲಿಯೂ ಕೂಡ ಬಿಜೆಪಿಯ ಪಾರುಪತ್ಯವಿತ್ತು. ಶೃಂಗೇರಿಯಲ್ಲೂ ರಾಜೇಗೌಡರು ದೊಡ್ಡ ಅಂತರದಲ್ಲಿ ಗೆಲುವು ದಾಖಲಿಸಿರಲಿಲ್ಲ, ಕೇವಲ 201 ಮತಗಳ ಮಾರ್ಜಿನ್‌ನಲ್ಲಿ ಗೆಲುವಿನ ಗೆರೆ ದಾಟಿದ್ರು ಎನ್ನಲಾಗುತ್ತಿದೆ( ಪ್ರಕರಣ ಇನ್ನೂ ವಿಚಾರಣೆಯ ಹಂತದಲ್ಲಿದೆ). ಸಾಲದ್ದಕ್ಕೆ ಬಿಜೆಪಿ ಎಂಪಿ ಬೇರೆ.. ಇಂತಹ ಸನ್ನಿವೇಶದಲ್ಲಿ, ಬಿಜೆಪಿ ಪ್ರಾಬಲ್ಯವಿದ್ದ ಜಿಲ್ಲೆಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸೋದು ಅಷ್ಟು ಸುಲಭದ ಮಾತು ಖಂಡಿತಾ ಆಗಿರಲಿಲ್ಲ.
ಇಂತಹ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಐದಕ್ಕೆ ಐದು ಸ್ಥಾನಗಳನ್ನ ಗೆಲ್ಲುತ್ತೆ ಅಂದ್ರೆ ಅದು, ಕಾಂಗ್ರೆಸ್ಸಿಗರು ಮಾಡಿದ ಜಾದೂ ಖಂಡಿತಾ ಅಲ್ಲವೇ ಅಲ್ಲ.! ಚಿಕ್ಕಮಗಳೂರಿನ ಜನರು ಕೊಟ್ಟ ಅಧಿಕಾರದ ಭಿಕ್ಷೆ.! ಹಿಂದಿನ ಬಿಜೆಪಿ ಶಾಸಕರು, ಸರ್ಕಾರದ ಸಾಧನೆ ತೃಪ್ತಿ ತಂದಿಲ್ಲ ಅನ್ನೋದು.! ಹಾಗಾಗಿಯೇ ಯೋಚಿಸಿ, ಈ ಬಾರಿ ಕಾಂಗ್ರೆಸ್‌ಗೆ ಒಂದು ಅವಕಾಶ ಕೊಡೋಣ ಅಂತಾ ಐವರನ್ನ ಗೆಲ್ಲಿಸಿದ್ದಾರೆಯೇ ಹೊರತು, ನೀವೇನೋ ಮ್ಯಾಜಿಕ್ ಮಾಡಿ ಐದಕ್ಕೆ ಐದು ಸ್ಥಾನಗಳನ್ನ ಪಡೆದುಕೊಂಡಿದಲ್ಲ.!
ಇಲ್ಲಿ ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಅನ್ನೋದಕ್ಕಿಂತ, ಚಿಕ್ಕಮಗಳೂರಿನ ಜನರು ಕಾಂಗ್ರೆಸ್‌ಗೆ ಒಂದು ಅವಕಾಶ ಕೊಟ್ಟಿದ್ರು.! ಐದಕ್ಕೆ ಐದು ಸ್ಥಾನ ಗೆಲ್ಲಿಸಿದ್ದಾರೆ.. ಅದು ಕೂಡ ಬಿಜೆಪಿಯ ಪ್ರಾಬಲ್ಯವಿದ್ದ ಜಿಲ್ಲೆಯಲ್ಲಿ ಅಂತಾ ನಿಮ್ಮ ಅರಿವಿಗೆ ಬಂದ ಕೂಡಲೇ, ನೀವು ಮೊದಲ ಹಂತದಲ್ಲೇ ಅಂದರೆ ಸಿದ್ದರಾಮಯ್ಯರವರು ಸಿಎಂ ಆಗಿದ್ದ ಸಮಯದಲ್ಲೇ ಕನಿಷ್ಠ ಒಂದು ಸ್ಥಾನವನ್ನಾದ್ರೂ ಚಿಕ್ಕಮಗಳೂರು ಜಿಲ್ಲೆಗೆ ಕೊಡಬೇಕಿತ್ತು.!
ನಿಮ್ಮ ಜಾತಿ-ಧರ್ಮದ ಖೋಟಾ ಬಿಟ್ಟು, ಜಿಲ್ಲೆಗೆ ಪ್ರಾತಿನಿಧ್ಯ ನೀಡಬೇಕಿತ್ತು.. ಆದರೆ ನೀವುಗಳು ಅದನ್ನ ಮಾಡಲಿಲ್ಲ.. ಹೋಗಲಿ, ಎರಡನೇ ಹಂತದಲ್ಲಾದ್ರೂ ಚಿಕ್ಕಮಗಳೂರಿಗೆ ಒಂದು ಅವಕಾಶ ಸಿಗುತ್ತೆ ಅಂತಾ ಎಲ್ಲರೂ ಭಾವಿಸಿದ್ರು.. ಈ ಐವರು ಶಾಸಕರ ಜೊತೆಗೆ ಆರತಿ ಕೃಷ್ಣ ಹಾಗೂ ಗಾಯತ್ರಿ ಶಾಂತೇಗೌಡ ಇಬ್ಬರು ಎಂಎಲ್‌ಸಿಗಳು( ಸಿಂಹಿಣಿಗಳು) ಬೇರೆ ಸೇರಿಕೊಂಡಿದ್ರು.. ಅಲ್ಲಿಗೆ ಒಟ್ಟು 7 ಮಂದಿಯ ದೊಡ್ಡ ಕೂಟವೇ ರಚನೆಯಾಯ್ತು..! ಹಾಗಾಗೀ ಈ ಬಾರಿ ನೋ ಡೌಟ್.. ಕೊನೆಪಕ್ಷ ಒಂದು ಸೀಟು ಅಂತೂ ಪಕ್ಕಾ ಅಂತಾನೇ ಚಿಕ್ಕಮಗಳೂರಿನ ಜನತೆ ಭಾವಿಸಿದ್ರು..!
ಹೀಗೆ ಭಾವಿಸೋಕೆ ಕಾರಣವಿಷ್ಟೇ.. ಡಿಕೆ ಸಾಹೇಬ್ರು.. ಪಟ್ಟು ಬಿಡದೇ ಸಿಎಂ ಪಟ್ಟವನ್ನ ಗಿಟ್ಟಿಸಿಕೊಂಡಿದ್ದು.. ನಾನು ಪಕ್ಷಕ್ಕಾಗಿ ದುಡಿದಿದ್ದೇನೆ, ತ್ಯಾಗ ಮಾಡಿದ್ದೇನೆ, ಶ್ರಮಿಸಿದ್ದೇನೆ.. 136 ಸೀಟು ಬರಲು ರಕ್ತ, ಅಲ್ಲಲ್ಲ ಬೆವರು ಸುರಿಸಿದ್ದೇನೆ ಅಂತಾ ಹೈ ಕಮಾಂಡನ್ನ ಒಪ್ಪಿಸಿ , ಈಗಲ್ಲದಿದ್ರೆ ಇನ್ಯಾವಾಗ .? ಅಂತಾ ಸಿಎಂ ಪಟ್ಟವನ್ನ ದಕ್ಕಿಸಿಕೊಂಡಿದ್ದು..! ಹೇಗೆ ಡಿಕೆ, ಕಾಂಗ್ರೆಸ್ ಪಕ್ಷವನ್ನ ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಶ್ರಮವಹಿಸಿದ್ರೋ ಹಾಗೆಯೇ ಜಿಲ್ಲೆಯಲ್ಲಿ ಐವರು ಕಾಂಗ್ರೆಸ್ ಶಾಸಕರನ್ನ ಆರಿಸಿದ್ದು, ಚಿಕ್ಕಮಗಳೂರಿನ ಜನರು.! ಕೈ ಕಟ್ಟಾಳುಗಳಿಗೂ ಒಂದು ಅವಕಾಶವನ್ನ ಕೊಡೋಣ ಅಂತಾ ಭಾವಿಸಿ ಐವರನ್ನ ಗೆಲ್ಲಿಸಿದ್ರು..
ಈ ಸಾಮಾನ್ಯಜ್ಞಾನ ಮಾನ್ಯ ಡಿಕೆ ಸಾಹೇಬ್ರಿಗೆ ಇರಬೇಕಿತ್ತು.! ಆದ್ರೆ ನೀವು ಸಿಎಂ ಸ್ಥಾನ ದಕ್ಕಿಸಿಕೊಳ್ಳಲು ಕೊಟ್ಟ ಕಾರಣವನ್ನ, ಚಿಕ್ಕಮಗಳೂರು ವಿಚಾರದಲ್ಲಿ ಮರೆತದ್ದು ನಿಜಕ್ಕೂ ವಿಪರ್ಯಾಸ..!
ಕೇವಲ #ಕೈ ಕಟ್ಟಿಕೊಂಡು ಕೂರುವ ಕಟ್ಟಾಳುಗಳನ್ನ ನೋಡದೇ #ಕಾಫಿನಾಡಿಗರತ್ತ ದೃಷ್ಠಿ ಹಾಯಿಸಬೇಕಿತ್ತು..!
ಹೌದು, ಬೇರೆ ಜಿಲ್ಲೆಗಳ ಕೈ ನಾಯಕರು, ಅವರುಗಳು ಮಾಡುವ ಲಾಬಿಯನ್ನ ನೋಡಿದ್ರೆ, ಚಿಕ್ಕಮಗಳೂರಿನ ಕೈ ಶಾಸಕರು ನೋ ಡೌಟ್ ರಾಜಕೀಯವಾಗಿ ಇನ್ನೂ ಗಟ್ಟಿಯಾಗಬೇಕು..! ಅದೇನೋ ಹೇಳ್ತಾರಲ್ಲ, ಮಗು ಅಳ್ಳದಿದ್ರೆ(ಕಿರುಚದಿದ್ರೆ) ತಾಯಿ ಕೂಡ ಎದೆ ಹಾಲು ನೀಡಲ್ಲ ಅಂತಾ ಹಾಗೇ..! ಇಲ್ಲಿ ಆಗಿದ್ದು ಅಷ್ಟೇ.. ಕೊಟ್ರೆ ಲಾಟರಿ.. ಕೊಡದಿದ್ರೆ ಡೋಂಟ್ ವರಿ.. ಅನ್ನೋ ಜಾಯಮಾನ ನಮ್ಮವರದ್ದು.!
ಅರ್ಥಾತ್.. ಸಚಿವ ಸ್ಥಾನ ಕೊಡಲೇಬೇಕು ಅಂತಾ ಕಡ್ಡಿ ಮುರಿದ ಹಾಗೇ ಮಾತಾನಾಡಿದ ಒಬ್ಬರೇ ಒಬ್ಬರು ಶಾಸಕರನ್ನ ನಾನು ನೋಡಲೇ ಇಲ್ಲ..! ಐದಕ್ಕೆ ಐದು ಸ್ಥಾನಗಳನ್ನ ಜನರು ಗೆಲ್ಲಿಸಿದ್ದಾರೆ. ಮಂತ್ರಿ ಸ್ಥಾನವನ್ನ ಬೇಡಿಯೋ..? ಕಾಡಿಯೋ..? ಹೇಗಾದ್ರೂ ಮಾಡಿ ತಗೊಂಡು ಜಿಲ್ಲೆಯನ್ನ ಅಭಿವೃದ್ಧಿ ಮಾಡಲೇಬೇಕು ಅನ್ನೋ ಮನಸ್ಸನ್ನ ಯಾರೂ ಕೂಡ ಮಾಡಲೇ ಇಲ್ಲ..! ಪರಿಣಾಮ, ನಿರ್ಲಕ್ಷ್ಯ.. ನೀವು ಐದಾರು ಗೆಲ್ಲಿ.. ಈಗ ಏಳಾದ್ರೂ ಏರಿಸಿಕೊಳ್ಳಿ.. ನನ್ನ ಸರ್ಕಾರ ಭದ್ರವಾಗಿದೆ, ನೋ ವರಿ ಅನ್ನೋ ಧೋರಣೆಯೇ..? ಅನ್ನೋದನ್ನ ಆ ‘ಶಿವ’ನೊಬ್ಬನೇ ಬಲ್ಲ..! ಅದಕ್ಕೆ ಹೇಳಿದ್ದು, ನಿಮಗೆ ಒತ್ತಡ #ಹಾಕದ ಕೈ ಕಟ್ಟಾಳುಗಳನ್ನ ಮಾತ್ರ ನೋಡದೇ, ನಿಮಗೆ ಅಧಿಕಾರದ ಭಿಕ್ಷೆ ಕೊಟ್ಟ ಚಿಕ್ಕಮಗಳೂರಿನ ಜನತೆಯ ಮನಸ್ಥಿತಿಯನ್ನಾದ್ರೂ ಅರಿತು, ಶಿವನೇ ನೀವು ಕಣ್ಣು ತೆರೆಯಬೇಕಿತ್ತು ಅಂತಾ..!
#ಜಿಲ್ಲೆಗೂ ಅವಮಾನ.. #ಹೆಣ್ಣಿಗೂ ಅವಮಾನ..!
ಇನ್ನೊಂದೆಡೆ ಐವರು ಶಾಸಕರನ್ನ ಕೊಟ್ಟು ನಿಮ್ಮ ಸರ್ಕಾರವನ್ನ ಸುಭದ್ರ ಮಾಡಿದವರ ಮರೆತು ಬಿಟ್ಟಿರಿ.. ಸಾಲದೆಂಬಂತೆ, ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಗೆದ್ದರೂ ನಾಲ್ಕೂವರೆ ವರ್ಷ ವನವಾಸ ಅನುಭವಿಸಿ, ಕೊನೆ ಘಳಿಗೆಯಲ್ಲಿ ಸುಪ್ರೀಂ ಮೆಟ್ಟಿಲು ಹತ್ತಿ #ವಿಜಯ ಪತಾಕೆ ಹಾರಿಸಿದ ಗಾಯತ್ರಿ ಶಾಂತೇಗೌಡರಿಗೆ ಕೈ ಕೊಟ್ಟಿದ್ದು, ಯಾವ ನ್ಯಾಯ ಸ್ವಾಮಿ..? ಅದು ಕೂಡ ಮೊದಲ ಪಟ್ಟಿಯಲ್ಲಿ ಹೆಸರು ಹಾಕಿ, ಅವರು ಸಂಭ್ರಮಿಸಿ.. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ.. ಪ್ರಮಾಣವಚನ ಕಾರ್ಯಕ್ರಮಕ್ಕೆ ರೆಡಿಯಾಗುವ ಹೊತ್ತಿಗೆ ಹೆಸರನ್ನ ತೆಗೆದು ಹಾಕೋದು..! ಇದು ಹೆಣ್ಣಿಗೆ ಮಾಡಿದ ಅವಮಾನ ಅಲ್ಲವೇ..? ಗಾಯತ್ರಿ ಶಾಂತೇಗೌಡರು, ನಾ ನೋಡಿದ ಹಾಗೇ ತುಂಬಾ ಗಟ್ಟಿಗಿತ್ತಿ.. ಛಲಗಾರ್ತಿ..! ಎಲ್ಲವನ್ನೂ ಎದುರಿಸೋ ಶಕ್ತಿಯಿರುವ ಹೆಣ್ಣುಮಗಳು..! ಅವರಾಗುವ ಹೊತ್ತಿಗೆ ಎಲ್ಲವನ್ನೂ ಎದುರಿಸಿ ನಿಂತಿದ್ದಾರೆ..! ಮುಂದೆಯೂ ನಿಲ್ಲುತಾರೆ.! ಆ ಸ್ಥಾನದಲ್ಲಿ ಬೇರೆ ಹೆಣ್ಣು ಮಗಳು ಇದ್ದು, ನೀವು ಆಕೆಗೆ ಈ ರೀತಿ ಕೊನೆ ಹಂತದಲ್ಲಿ ನೀವು ಕೈ ಎತ್ತಿದಿದ್ರೆ, ಆ ಹೆಣ್ಣುಮಗಳ ಆತ್ಮಸ್ಥೈರ್ಯವನ್ನೇ ನೀವು ಕೊಂದಂತೆ ಆಗಿದೆ ಅಂತಾ ಆಕೆಯೇ ಏನಾದ್ರೂ ಮಾಡಿಕೊಂಡಿದ್ರೆ, ನಿಮ್ಮ ಪ್ರಮಾಣವಚನ ಕಾರ್ಯಕ್ರಮವೇ ನಡೀತಾ ಇರಲಿಲ್ಲ..!
ಒಟ್ಟಿನಲ್ಲಿ ಈ ಚಿಕ್ಕಮಗಳೂರು, ಕೊಡಗು ಜಿಲ್ಲೆಗಳೆಲ್ಲಾ ನಿಮಗೆ ಆಟಕ್ಕುಂಟು, ಲೆಕ್ಕಕ್ಕೇ ಇಲ್ಲ ಅನ್ನೋ ಮೈದಾನಗಳು ಅಷ್ಟೇ.! ನಿಮ್ಮ ನಿಮ್ಮ ಬೇಳೆ ಬೇಯಿಸಿಕೊಳ್ಳೋ ತನಕ ಬಳಸಿಕೊಳ್ತೀರಾ..? ಆಮೇಲೆ ಬಿಸಾಕಿ ಬಿಡ್ತೀರಾ.!. ಈಗ ಆಗಿರೋದು ಅಷ್ಟೇ..! ಇದು ನಿಮ್ಮ ತಪ್ಪಲ್ಲ.. ನಮ್ಮ ಜನರದ್ದೇ..! ಜಾಗೃತರಾಗಬೇಕು.. ರಾಜಕೀಯವಾಗಿ..!
ವರದಿ: ಪ್ರಶಾಂತ್ ಮೂಡ್ಗೆರೆ
099169 17520
