Wednesday, November 25, 2026
Homeಜಿಲ್ಲಾಸುದ್ದಿಕೊಪ್ಪ ಗಿರಿಜನ ವಿವಿಧೋದ್ದೇಶ ಸಹಕಾರ ಸಂಘದ ಚುನಾವಣೆ: ಅವಿರೋಧವಾಗಿ ಉಪಾಧ್ಯಕ್ಷರ ಆಯ್ಕೆ.

ಕೊಪ್ಪ ಗಿರಿಜನ ವಿವಿಧೋದ್ದೇಶ ಸಹಕಾರ ಸಂಘದ ಚುನಾವಣೆ: ಅವಿರೋಧವಾಗಿ ಉಪಾಧ್ಯಕ್ಷರ ಆಯ್ಕೆ.

Telegram Group
Join Now

ಕೊಪ್ಪ: ಇಂದು ನಡೆದ ಗಿರಿಜನ ವಿವಿಧೋದ್ದೇಶ ಸಹಕಾರ ಸಂಘದ ಚುನಾವಣೆ ಇಂದು ನಡೆಯಿತು. ಚುನಾವಣೆ ಅಧಿಕಾರಿಯಾದ ಪ್ರಕಾಶ್ ಅವರ ನೇತೃತ್ವದಲ್ಲಿ ನಡೆದ ಉಪಾಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಮರಿಯಪ್ಪ ಎಸ್ ಎ ಅವರು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಒಟ್ಟು 13 ಸದಸ್ಯರು ಈ ಸಂಘದಲ್ಲಿ ಇದ್ದು ಒಮ್ಮತದ ನಿರ್ಧಾರ ತೆಗೆದುಕೊಂಡಿದ್ದರಿಂದ ಚುನಾವಣೆ ಸುಸೂತ್ರವಾಗಿ ನಡೆಯಿತು.

ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಮರಿಯಪ್ಪ ಎಸ್ ಎ ಅವರನ್ಬು ಅಭಿನಂದಿಸಿ ಮಾತನಾಡಿದ ಗೋಪಾಲಕೃಷ್ಣ ಮೆಣಸಿನಹಾಡ್ಯ ಅವರು ಮರಿಯಪ್ಪರವರು ಸುಮಾರು 25 ವರ್ಷದಿಂದ ಸಂಘದ ಅಭಿವೃದ್ಧಿ ಗೆ ಶ್ರಮಿಸಿದ್ದಾರೆ ಅವರ ಸೇವೆಯನ್ನು ಗುರುತಿಸಿ ಇಂದು ಸದಸ್ಯರೆಲ್ಲ ಸೇರಿ ಅವಿರೋಧ ಆಯ್ಕೆ ಮಾಡಿ ಹಿರಿಯರಿಗೆ ಗೌರವ ಸಲ್ಲಿಸಿದ್ದಾರೆ ಭಗವಂತ ಅವರಿಗೆ ಇನ್ನಷ್ಟು ಸೇವೆ ಮಾಡುವ ಅವಕಾಶ ನೀಡಲಿ ಎಂದರು.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!