Wednesday, November 25, 2026
Homeಜಿಲ್ಲಾಸುದ್ದಿಸಿಕ್ಕಾಪಟ್ಟೆ ಯಶಸ್ಸು ಕಂಡ ಮೂಡಿಗೆರೆ ಟೌನ್‌ ಬಂದ್‌ : ಕಾಂಗ್ರೆಸ್-ಬಿಜೆಪಿ-ಜೆಡಿಎಸ್‌ ಪಕ್ಷಾತೀತವಾಗಿ ಬೆಂಬಲ

ಸಿಕ್ಕಾಪಟ್ಟೆ ಯಶಸ್ಸು ಕಂಡ ಮೂಡಿಗೆರೆ ಟೌನ್‌ ಬಂದ್‌ : ಕಾಂಗ್ರೆಸ್-ಬಿಜೆಪಿ-ಜೆಡಿಎಸ್‌ ಪಕ್ಷಾತೀತವಾಗಿ ಬೆಂಬಲ

Telegram Group
Join Now

ಮೂಡಿಗೆರೆ: ಬೇಲೂರಿನಿಂದ ಕಾಡಾನೆಗಳ ಶಿಫ್ಟ್‌ ವಿರೋಧಿಸಿ ನಡೆದ ಮೂಡಿಗೆರೆ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾಂಗ್ರೆಸ್‌, ಬಿಜೆಪಿ, JDS ಪಕ್ಷಾತೀತವಾಗಿ ಹಮ್ಮಿಕೊಂಡಿದ್ದ ಬಂದ್‌ ಯಶಸ್ಸು ಕಂಡಿದೆ.

ರೈತ ಸಂಘಟನೆ ಸದಸ್ಯರು, ರೈತರು ಬೀದಿಗೆ ಇಳಿದ್ರೆ.. ವ್ಯಾಪಾರಸ್ಥರು ಅಂಗಡಿ ಮುಚ್ಚಿ ಬಂದ್‌ಗೆ ಬೆಂಬಲು ಸೂಚಿಸಿದ್ರು. ಬೆಳಗ್ಗೆ ಪಟ್ಟಣದ ಲಯನ್ಸ್ ವೃತ್ತದ ಬಳಿ ಜಮಾಯಿಸಿದ ಧರಣಿನಿರತರು, ಕೈಯಲ್ಲಿ ಕಾಫಿ ಗಿಡ ಹಿಡಿದು ರಸ್ತೆ ತಡೆ ನಡೆಸಿ ಆಕ್ರೋಶ ಹೊರ ಹಾಕಿದ್ರು.

ಕಾಡಾನೆ ಶಿಫ್ಟ್‌ ಕಾರ್ಯಾಚರಣೆ ಕೈಬಿಡುವಂತೆ ಆಗ್ರಹಿಸಿದ್ರು. ಅಲ್ಲದೆ, KSRTC ಬಸ್ ತಡೆದು ಗರಂ ಸಚಿವ ಶಿವಲಿಂಗೇಗೌಡರ ವಿರುದ್ಧ ಘೋಷಣೆ ಕೂಗಿದ್ರು. ನಂತರ ಮಿನಿಸ್ಟರ್‌ ಭಾವ ಚಿತ್ರಕ್ಕೆ ಬೆಂಕಿ ಹಚ್ಚಿ ಸಿಟ್ಟಾದ್ರು. ಇದೇ ವೇಳೆ ಕಡೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ 173 ತಡೆದಿದ್ದರಿಂದ ಕೆಲ ಕಾಲ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು.

ಬಂದ್‌ ತೀವ್ರಗೊಳ್ಳುತ್ತಿದ್ದನ್ನ ಅರಿತ, ಐಜಿಪಿ ಎನ್‌. ಶಶಿಕುಮಾರ್‌, ಎಸ್‌ಪಿ ಹೋರಾಟಗರರನ್ನ ಮನವೊಲಿಸಲು ಯತ್ನಿಸಿದ್ರು. ಬಂದ್‌ ಅಂಗವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಹಮ್ಮಿಕೊಳ್ಳಲಾಗಿತ್ತು.

ಒಟ್ಟಿನಲ್ಲಿ ಮೂಡಿಗೆರೆ ಕಡೆಗೆ ಆನೆಗಳನ್ನ ಓಡಿಸಿದ್ದಕ್ಕೆ ಸಿಟ್ಟಾಗಿದ್ದ ಮಲೆನಾಡಿಗರು ಬಂದ್‌ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ. ಪ್ರತಿಭಟನೆ ಹಮ್ಮಿಕೊಂಡು ʻರಾಜೀನಾಮೆ ನೀಡ್ತೀನಿʼ ಎಂದಿರೋ ಶಾಸಕಿ ನಯನ ನಡೆ ಬೆಂಬಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!