Friday, November 6, 2026
Homeಕ್ರೈಮ್ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಪ್ರತಾಪ್ ಗೌಡ ಸಾವಿನ ಬೆನ್ನಲ್ಲೇ ತಂದೆ ಕೂಡ ನಿಧನ!

ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಪ್ರತಾಪ್ ಗೌಡ ಸಾವಿನ ಬೆನ್ನಲ್ಲೇ ತಂದೆ ಕೂಡ ನಿಧನ!

Telegram Group
Join Now

ಹಾಸನ: ಇತ್ತೀಚಿಗೆ ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಉದ್ಯಮಿ ಪ್ರತಾಪ್ ಗೌಡ ಸಾವನ್ನಪ್ಪಿದ್ದ ಬೆನ್ನಲ್ಲೇ ನೋವಲ್ಲೇ ಇದ್ದ  ಅವರ ತಂದೆಯವರು ಸಹ ವಿಧಿವಶರಾಗಿದ್ದಾರೆ

ಹೌದು .. ನಿಂಗರಾಜು (84) ಸಾವನ್ನಪ್ಪಿದ ಪ್ರತಾಪ್‌ಗೌಡ ತಂದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಹಾಸನ ತಾಲ್ಲೂಕಿನ ಜೋಡಿ ಕೃಷ್ಣಾಪುರದಲ್ಲಿ ನಿಂಗರಾಜು ಅವರು ಟೈಲರ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು. ನಂತರ ಸಕಲೇಶಪುರ ತಾಲ್ಲೂಕಿನ ಬಾಚಿಹಳ್ಳಿ ಗ್ರಾಮದಲ್ಲಿ ನೆಲೆಸಿದ್ದರು. 

ಆನಂತರ ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ಪುತ್ರ ಪ್ರತಾಪ್‌ಗೌಡ ಕಂಟ್ರಾಕ್ಟರ್, ಉದ್ಯಮಿಯಾಗಿದ್ದರು. ಮಗನ ಸಾವಿನ ಚಿಂತೆಯಲ್ಲಿದ್ದ ನಿಂಗರಾಜು ಅವರು ನಿನ್ನೆ (ನ.5) ರಾತ್ರಿ ಕೊನೆಯುಸಿರೆಳೆದಿದ್ದಾರೆ. ಇಂದು ಬಾಚಿಹಳ್ಳಿ ಗ್ರಾಮದಲ್ಲಿ ನಿಂಗರಾಜು ಅವರ ಅಂತ್ಯಕ್ರಿಯೆ ನೆರವೇರಲಿದೆ.

ಕೆಲವೇ ದಿನಗಳ ಅಂತರದಲ್ಲಿ ಮಗ ಹಾಗೂ ತಂದೆ ಇಬ್ಬರನ್ನೂ ಕಳೆದುಕೊಂಡಿರುವ ಪ್ರತಾಪ್ ಗೌಡ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!