Tuesday, August 11, 2026
Homeಕ್ರೈಮ್ಹಾಸನ: ಸಹೋದರಿಯ ಆರತಕ್ಷತೆ ದಿನವೆ ಮಸಣ ಸೇರಿದ ಸಹೋದರರು!

ಹಾಸನ: ಸಹೋದರಿಯ ಆರತಕ್ಷತೆ ದಿನವೆ ಮಸಣ ಸೇರಿದ ಸಹೋದರರು!

Telegram Group
Join Now

ಹಾಸನ: ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ, ಮುತ್ತಗನ್ನೆ ಗ್ರಾಮದ ಬಳಿ ನಡೆದಿದೆ.

ಬೇಲೂರು ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದ ಲೋಕೇಶ್ (25),‌ ಚಿಕ್ಕಮಗಳೂರು ಜಿಲ್ಲೆ, ರಾಮೇನಹಳ್ಳಿ ಗ್ರಾಮದ ಕಿರಣ್ (32) ಮೃತ ದುರ್ದೈವಿಗಳು.

ಇಂದು ಲೋಕೇಶ್ ತಂಗಿ ಆರತಕ್ಷತೆ ಇತ್ತು. ಅದಕ್ಕಾಗಿ ಮಜ್ಜಿಗೆ, ಮೊಸರು ತರಲು KA-05 LE-4017 ಸಂಖ್ಯೆಯ ಹೀರೋ ಸ್ಪ್ಲೆಂಡರ್‌ ಬೈಕ್‌ನಲ್ಲಿ ಬೇಲೂರಿಗೆ ತೆರಳುತ್ತಿದ್ದರು. ಈ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎಂದು ಶಂಕಿಸಲಾಗಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಭಾವ-ಭಾಮೈದರಾದ ಲೋಕೇಶ್ ಹಾಗೂ ಕಿರಣ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.‌ ಮೃತದೇಹಗಳು ಇದ್ದ ಜಾಗದಿಂದ 10 ಅಡಿ ದೂರದಲ್ಲಿ ಬೈಕ್ ಬಿದ್ದಿದೆ.‌

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments