Thursday, July 9, 2026
Homeಜಿಲ್ಲಾಸುದ್ದಿಹಾಸನ: ಕಡಜಗಳು ಕಡಿದು ರೈತ ಸಾವು!

ಹಾಸನ: ಕಡಜಗಳು ಕಡಿದು ರೈತ ಸಾವು!

Telegram Group
Join Now

ಹಾಸನ: ಕಡಜಗಳು ಕಡಿದು ರೈತ ಸಾವನ್ನಪ್ಪಿರುವ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ, ಜೋಗಿಪುರ ಗ್ರಾಮದಲ್ಲಿ ನಡೆದಿದೆ.

ಕಾಂತರಾಜು (62) ಮೃತ ರೈತನಾಗಿರುತ್ತಾನೆ. ಸೈಕಲ್‌ನಲ್ಲಿ ಮನೆಗೆ ತೆರಳುತ್ತಿ ವೇಳೆ ರಸ್ತೆಗೆ ಬಿದ್ದ ತೆಂಗಿನ ಗರಿ
ಎಡೆಮಟ್ಟೆಯನ್ನು ರಸ್ತೆ ಪಕ್ಕಕ್ಕೆ ಹಾಕಲು ಹೋದಾಗ ಎಡೆಮಟ್ಟೆಯಲ್ಲಿ ಗೂಡು ಕಟ್ಟಿದ್ದ ಕಡಜಗಳು ದಾಳಿ ಮಾಡಿದ ಹಿನ್ನೆಲೆ ರೈತ ಕಾಂತರಾಜು ತೀವ್ರ ಅಸ್ವಸ್ಥನಾಗಿರುತ್ತಾನೆ.

ಕೂಡಲೇ ಕುಟುಂಬಸ್ಥರು ಅವರನ್ನು ಚನ್ನರಾಯಪಟ್ಟಣ ಆಸ್ಪತ್ರೆಗೆ ಕರೆದೊಯ್ದ ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ಳೂರು ಕ್ರಾಸ್‌ನ ಆದಿಚುಂಚನಗಿರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಚನ್ನರಾಯಪಟ್ಟಣ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments