Saturday, September 26, 2026
Homeಜಿಲ್ಲಾಸುದ್ದಿಹಾಸನ: ಭರದಿಂದ ಸಾಗುತ್ತಿರುವ ಹಾಸನಾಂಬೆ ಹುಂಡಿ ಎಣಿಕೆ ಕಾರ್ಯ: ಫಾರಿನ್ ಕರೆನ್ಸಿಗಳು ಪತ್ತೆ!

ಹಾಸನ: ಭರದಿಂದ ಸಾಗುತ್ತಿರುವ ಹಾಸನಾಂಬೆ ಹುಂಡಿ ಎಣಿಕೆ ಕಾರ್ಯ: ಫಾರಿನ್ ಕರೆನ್ಸಿಗಳು ಪತ್ತೆ!

Telegram Group
Join Now

ಹಾಸನಾಂಬೆಯ ದರ್ಶನೋತ್ಸವ ಈಗಾಗಲೇ ಮುಕ್ತಾಯಗೊಂಡಿದ್ದು, ಈ ಬಾರಿ ಊಹೆಗೂ ಮೀರಿದ ಭಕ್ತಸಾಗರ ತುಂಬಿ ತುಳುಕಿದ್ದು ಇದೀಗ ಹುಂಡಿ ಎಣಿಕೆ ಕಾರ್ಯ ನಡೆಸಿದ್ದಾರೆ.

ಹುಂಡಿಯಲ್ಲಿ ಇಂಡೋನೇಷ್ಯಾ, ಮಾಲ್ಡೀವ್ಸ್ ಹಾಗೂ ಅಮೆರಿಕ ಕರೆನ್ಸಿಗಳು ಪತ್ತೆಯಾಗಿದೆ. ಅಮೆರಿಕದ ಐದು ಡಾಲರ್ ಸೇರಿದಂತೆ ಭಕ್ತರು ಬರೆದ ಪತ್ರಗಳು, ಹಳೆಯ ಐದು ನೂರು ರೂಪಾಯಿ ನೋಟುಗಳೂ ಸಹ ಸಿಕ್ಕಿವೆ. ಹಾಗೆ ಚಿನ್ನ, ಬೆಳ್ಳಿ ವಸ್ತುಗಳನ್ನು ಹುಂಡಿಯಲ್ಲಿ ಹಾಕಿರುವ ಭಕ್ತರು. ಅದೇ ರೀತಿ ನೋಟ್‌ ಬ್ಯಾನ್‌ ಆಗಿದ್ದರು 500, 1000  ನೋಟುಗಳು ಸಹ ಕಂಡುಬಂದಿವೆ.

ಬೆಳಿಗ್ಗೆಯಿಂದ ಆರಂಭವಾದ ಎಣಿಕೆ ಕಾರ್ಯವನ್ನು ಡಿಸಿ ಲತಾ ಮತ್ತು ಆಡಳಿತ ಅಧಿಕಾರಿ ಮಾರುತಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!