Friday, August 14, 2026
Homeಕ್ರೈಮ್ಹಾಸನ: ಆಭರಣ ಅಂಗಡಿಯ ಕಟ್ಟಡದಿಂದ ಬಿದ್ದು ವ್ಯಕ್ತಿ ಸಾವು!

ಹಾಸನ: ಆಭರಣ ಅಂಗಡಿಯ ಕಟ್ಟಡದಿಂದ ಬಿದ್ದು ವ್ಯಕ್ತಿ ಸಾವು!

Telegram Group
Join Now

ಹಾಸನ : ನಗರದ ಬಿ.ಎಂ. ರಸ್ತೆಯಲ್ಲಿರುವ ಖಾಸಗಿ ಅಭರಣದಂಗಡಿ ಕಟ್ಟಡದಿಂದ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಸೋಮವಾರ ಸಂಜೆ ನಡೆದಿದೆ.

ಆಲೂರು ತಾಲ್ಲೂಕಿನ ಕಾರಗೋಡು ಗ್ರಾಮದ ರವೀಂದ್ರ (55) ಮೃತ ವ್ಯಕ್ತಿಯಾಗಿದ್ದು, ಆಭರಣ ಅಂಗಡಿಯಲ್ಲಿ ಎಲಕ್ಟ್ರಿಷಿಯನ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಈತ ಕಳೆದ 14 ವರ್ಷಗಳಿಂದ ಇದೇ ಗೋಲ್ಡ್ ಅಂಡ್ ಡೈಮಂಡ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು.ಸೋಮವಾರ ಸಂಜೆ ರವೀಂದ್ರ ಅವರು ಕಟ್ಟಡಕ್ಕೆ ವಿದ್ಯುತ್ ದೀಪಾಲಂಕಾರ (ಲೈಟಿಂಗ್ಸ್) ಮಾಡುತ್ತಿದ್ದ ವೇಳೆ, ಕಟ್ಟಡದ ಮೇಲಿನಿಂದ ಆಯತಪ್ಪಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.


ಮೃತನಿಗೆ ಇಬ್ಬರು ಮಕ್ಕಳು ಪತ್ನಿಯನ್ನು ಹೊಂದಿದ್ದನು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments