Saturday, August 15, 2026
Homeಕ್ರೈಮ್ಹಾಸನ: ಈಜಲು ತೆರಳಿದ್ದ ಐವರು ಅಪ್ರಾಪ್ತ ಮಕ್ಕಳಲ್ಲಿ ಇಬ್ಬರು ನೀರುಪಾಲು!

ಹಾಸನ: ಈಜಲು ತೆರಳಿದ್ದ ಐವರು ಅಪ್ರಾಪ್ತ ಮಕ್ಕಳಲ್ಲಿ ಇಬ್ಬರು ನೀರುಪಾಲು!

Telegram Group
Join Now

ಹಾಸನ: ಕೆರೆಯಲ್ಲಿ ಈಜಲು ತೆರಳಿದ್ದ ಐವರು ಅಪ್ರಾಪ್ತ ಮಕ್ಕಳಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಅರಸೀಕೆರೆ ತಾಲ್ಲೂಕಿನ ಹುಂಡಿಗನಾಳು ಗ್ರಾಮದಲ್ಲಿ ನಡೆದಿದೆ.

ವಿಜಯಕುಮಾರ (13), ಸುಜನ್ (12) ಮೃತ ಮಕ್ಕಳು. ಇಂದು ರಜೆ ಹಿನ್ನೆಲೆಯಲ್ಲಿ ಐವರು ಅಪ್ರಾಪ್ತ ಮಕ್ಕಳು ಕೆರೆಯಲ್ಲಿ ಈಜಲು ತೆರಳಿದ್ದರು. ಐವರಲ್ಲಿ ಉಂಡಿಗನಾಳು ಗ್ರಾಮದ ಶಿವಕುಮಾರ ಅವರ ಮಗ ವಿಜಯಕುಮಾರ ಮತ್ತು ಗಿರೀಶ ಅವರ ಮಗ ಸುಜನ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಅಗ್ನಿಶಾಮಕದಳದ ಸಿಬ್ಬಂದಿ ಮಕ್ಕಳ ಮೃತದೇಹ ಹೊರಗೆ ತೆಗೆದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಾವಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments