Sunday, July 26, 2026
Homeಕ್ರೈಮ್ಚಾರ್ಮಾಡಿ ಘಾಟ್‌ ನಲ್ಲಿ ಮೈ ಜುಂ ಎನಿಸುವ ಅಪಘಾತ: ಕೂದಲೆಳೆ ಅಂತರದಲ್ಲಿ ಪಾರಾದ ದಂಪತಿ &...

ಚಾರ್ಮಾಡಿ ಘಾಟ್‌ ನಲ್ಲಿ ಮೈ ಜುಂ ಎನಿಸುವ ಅಪಘಾತ: ಕೂದಲೆಳೆ ಅಂತರದಲ್ಲಿ ಪಾರಾದ ದಂಪತಿ & ಮಗು

Telegram Group
Join Now

ಮೂಡಿಗೆರೆ: ಕಾರು ಚಾಲಕನ ಅಜಾಗರೂಕತೆ ಹಾಗೂ ಅತೀ ವೇಗದ ಚಾಲನೆಗೆ ಚಾರ್ಮಾಡಿ ಘಾಟಿಯಲ್ಲಿ ದಂಪತಿ ಮತ್ತು ಮಗ ಕೂದಲೆಳೆಯಲ್ಲಿ ಜಸ್ಟ್ ಮಿಸ್ ಆಗಿರುವ ಘಟನೆ ನಡೆದಿದೆ. ಅಪಘಾತದ ದೃಶ್ಯಗಳು ಬೈಕ್‌ ನಲ್ಲಿ ಹಿಂದಿರುವ ಮತ್ತೊಂದು ಕಾರಿನ ಕ್ಯಾಮರಾದಲ್ಲಿ ಸೆರೆಯಾಗಿದ್ದು ದೃಶ್ಯ ನೋಡಲು ಮೈ ಜುಂ ಎನಿಸುತ್ತದೆ.

ಹೌದು .. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಅಣ್ಣಪ್ಪಸ್ವಾಮಿ ದೇಗುಲದ ಬಳಿ ಈ ಘಟನೆ ಸಂಭವಿಸಿದ್ದು ಕೊಟ್ಟಿಗೆಹಾರದಿಂದ ಮಂಗಳೂರಿಗೆ ಹೋಗುತ್ತಿದ್ದ ಕಾರು ಹಾಗೂ ಮಂಗಳೂರಿನಿಂದ ಚಿಕ್ಕಮಗಳೂರು ಕಡೆ ಬರುತ್ತಿದ್ದ ಕಾರು-ಬೈಕಿನ ಮಧ್ಯೆ ಅಪಘಾತ ನಡೆದಿದೆ. ಡಿಕ್ಕಿಯ ರಭಸಕ್ಕೆ ಗಂಡ ಹೆಂತಿ ಹಾಗೂ ಮಗು ರಸ್ತೆಗೆ ಎಸೆಯಲ್ಪಟ್ಟಿದೆ.

ಬೈಕಿನಿಂದ ಕೆಳಗೆ ಬಿದ್ದ ಮಗುವಿಗೆ ಗಂಭೀರ ಗಾಯಗಳಾಗಿದ್ದು ದಂಪತಿಗೆ ಸಣದಣ ಪುಟ್ಟ ಗಾಯಗಳಾಗಿವೆ, ಆದರೆ ಆ ಅಣ್ಣಪ್ಪ ಸ್ವಾಮಿಯ ದಯವೋ ಪವಾಡವೋ ಆದರೆ ಎಲ್ಲರೂ ಸೇಫ್‌ ಆಗಿ ಬದುಕುಳಿದಿದ್ದಾರೆ.ಬೈಕಿಗೆ ಡಿಕ್ಕಿಯಾಗಿ ಮತ್ತೊಂದು ಕಾರಿಗೆ ಗುದ್ದಿ ರಸ್ತೆ ಬದಿ ಕಾಲುವೆಗೆ ಇಳಿದ ನಂತಿರುವ ಕಾರು. ಘಾಟ್‌ ಸೆಕ್ಷನ್‌ ನಲ್ಲಿ ಚಾಲಕರ ಅಜಾರೂಕತೆ ಡ್ರೈವಿಂಗ್‌ ಗಳಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ,

ಘಟನೆ ಸಂಬಂಧ ಬಣಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಹಂತರದ ಕ್ರಮ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments