Thursday, June 11, 2026
Homeಜಿಲ್ಲಾಸುದ್ದಿIndia Book Of Record: ಬಾಳೆಹೊನ್ನೂರಿನ ಸೈಯದಾ ಜಬೀನಾಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ:...

India Book Of Record: ಬಾಳೆಹೊನ್ನೂರಿನ ಸೈಯದಾ ಜಬೀನಾಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ: ಮೆಹಂದಿ ಕೋನ್‌ಗಳಿಂದ ಅತಿದೊಡ್ಡ ಗೋಡೆ ಚಿತ್ರ ರಚಿಸಿ ಸಾಧನೆ

ಚಿಕ್ಕಮಗಳೂರು : ಜಿಲ್ಲೆಯ ಬಾಳೆಹೊನ್ನೂರಿನ ಮಂಜೂರ್ ಅಹ್ಮದ್ ಅವರ ಪತ್ನಿ ಸೈಯದಾ ಜಬೀನಾ ಅವರು ಮೆಹಂದಿ ಕೋನ್‌ಗಳ ಬಳಕೆಯಿಂದ ಅತಿದೊಡ್ಡ ಗೋಡೆ ಚಿತ್ರವನ್ನು ರಚಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.

ಸೈಯದಾ ಜಬೀನಾ ಅವರು ಅರಣ್ಯ ವಿಷಯಾಧಾರಿತ ಭವ್ಯ ಚಿತ್ರವನ್ನು 12.5 ಅಡಿ ಉದ್ದ ಹಾಗೂ 10 ಅಡಿ ಅಗಲದ ಗೋಡೆಯ ಮೇಲೆ ಸಂಪೂರ್ಣವಾಗಿ ಮೆಹಂದಿ ಕೋನ್‌ಗಳ ಮೂಲಕ ರಚಿಸಿದ್ದು, ಈ ವಿಶಿಷ್ಟ ಕಲಾಕೃತಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆ ಮಾನ್ಯತೆ ನೀಡಿದೆ.

ದಾಖಲೆಗಾಗಿ ಸಲ್ಲಿಸಲಾದ ಛಾಯಾಚಿತ್ರಗಳು, ವಿಡಿಯೊಗಳು ಹಾಗೂ ಇತರೆ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಸಂಸ್ಥೆಯ ಸಂಪಾದಕೀಯ ಮಂಡಳಿ, “ಒಬ್ಬ ವ್ಯಕ್ತಿಯಿಂದ ಮೆಹಂದಿ ಕೋನ್‌ಗಳನ್ನು ಬಳಸಿ ರಚಿಸಲಾದ ಅತಿದೊಡ್ಡ ಗೋಡೆ ಚಿತ್ರ” ವಿಭಾಗದಲ್ಲಿ ಈ ಸಾಧನೆಯನ್ನು ದಾಖಲೆಯಾಗಿ ಅಂಗೀಕರಿಸಿದೆ.

ಕಲೆ ಮತ್ತು ಸೃಜನಶೀಲತೆಯ ಮೇಲಿನ ಅಪಾರ ಆಸಕ್ತಿ, ಪರಿಶ್ರಮ ಹಾಗೂ ವಿಭಿನ್ನ ಕಲ್ಪನೆಯ ಫಲವಾಗಿ ಈ ಸಾಧನೆ ಸಾಧ್ಯವಾಗಿದ್ದು, ಸೈಯದಾ ಜಬೀನಾ ಅವರ ಸಾಧನೆಗೆ ಸಾರ್ವಜನಿಕರು, ಕಲಾಭಿಮಾನಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!