Thursday, July 30, 2026
Homeಜಿಲ್ಲಾಸುದ್ದಿGovt Model Higher Primary School: ಶಾಸಕರ ಮಾದರಿ ಶಾಲೆ ದುಃಸ್ಥಿತಿಗೆ ಯಾರು ಹೊಣೆ? ಜನ...

Govt Model Higher Primary School: ಶಾಸಕರ ಮಾದರಿ ಶಾಲೆ ದುಃಸ್ಥಿತಿಗೆ ಯಾರು ಹೊಣೆ? ಜನ ಪ್ರತಿನಿಧಿಗಳೇ ಕಣ್ಣು ತೆರೆದು ಶಾಲೆ ಉಳಿಸಿ ಎಂದ ವಿದ್ಯಾರ್ಥಿಗಳು

Telegram Group
Join Now

ಮೂಡಿಗೆರೆ: ಪಟ್ಟಣದ ಹೃದಯ ಭಾಗದಲ್ಲಿ ಇರುವ ಶಾಸಕರ ಮಾದರಿ ಶಾಲೆಯ ಪರಿಸ್ಥಿತಿಗೆ ಹೊಣೆ ಯಾರು ಎಂಬ ಪ್ರಶ್ನೆ ಸಾರ್ವಜನಿಕರ ವಲಯದಲ್ಲಿ ಮೂಡಿದೆ.

ಹೌದು.. ಕಳೆದ 25 ವರ್ಷಗಳ ಹಿಂದಿನಿಂದಲೂ ಈ ಶಾಲೆಯಲ್ಲಿ ಕಲಿತು ಬೆಳೆದವರು ಸಂಖ್ಯೆ ಅಧಿಕ ಆದರೆ ಶಾಲೆಯ ಇವತ್ತಿನ ದುಃಸ್ಥಿತಿ ನೋಡಿದರೆ ಅಯ್ಯೋ ಎನ್ನಿಸುತ್ತದೆ.

ಖಂಡಿತ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಈ ದಿನಗಳಲ್ಲಿ ನಮ್ಮ ಶಾಲೆಯನ್ನು ಉಳಿಸಿಕೊಡಿ ಎಂದು ವಿದ್ಯಾರ್ಥಿಗಳು ಅಳಲನ್ನ ತೋಡಿಕೊಂಡ ಬಗೆ ಮಾತ್ರ ಎಂತಹವರು ಹೃದಯ ಕೂಡ ಕರಗುವಂತೆ ಮಾಡಿದೆ.

ಒಂದು ಕಾಲವಿತ್ತು ಕಿಲೋಮೀಟರ್ ಗಟ್ಟಲೆ ಶಾಲೆಯ ವಿದ್ಯಾಭ್ಯಾಸಕ್ಕೆ ನಡೆದು ಸಾಗುತ್ತಿದ್ದ ವಿದ್ಯಾರ್ಥಿಗಳು ಇವತ್ತಿನ ಕಾಲದಲ್ಲಿ ಪ್ರತಿ ಸೌಕರ್ಯಗಳಿದ್ದರು ಜನ ಪ್ರತಿನಿಧಿಗಳು ಎಂಬ ಅಕ್ಷರಸ್ತ ಅನಕ್ಷರಸ್ಥರಿಂದ ಶಾಲೆಗೆ ಈ ಸ್ಥಿತಿ ನಿರ್ಮಾಣವಾಗಿದೆ ಎಂದರು ತಪ್ಪಾಗಲಾರದು

ವಿದ್ಯಾರ್ಥಿಗಳು ಶಾಲೆಯಲ್ಲಿ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಗಮನಿಸುವುದಾದರೆ ಶಾಲಾ ಕೊಠಡಿಗಳು ಸಂಪೂರ್ಣ ಸೋರಿಕೆಯಾಗುತ್ತಿದ್ದು ಕೊಠಡಿಯ ಕೆಳಭಾಗ ಸಂಪೂರ್ಣ ನೀರಿನಿಂದ ಆವರಿಸಿದೆ ಕನ್ನಡ ಮಾಧ್ಯಮ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೆ ಒಂದೇ ಕೊಠಡಿಯಲ್ಲಿ ಕುಳಿತು ಪಾಠ ಕೇಳಬೇಕು ಹಂಚು ಹಾರಿ ಹೋಗಿವೆ, ಪಾಠ ಕೇಳಲು ಹಿಂಸೆಯಾಗುತ್ತಿದ್ದೂ  ಎಂದು ವಿದ್ಯಾರ್ಥಿಗಳು ಶಾಲೆ ದುಃಸ್ಥಿತಿ  ಬಗ್ಗೆ ಅಳಲನ್ನು ತೋಡಿಕೊಂಡರು.

ಎಸ್ ಡಿಎಂಸಿ ಅಧ್ಯಕ್ಷ ಕೃಷ್ಣ ಕುಮಾರ್ ಶಾಲೆಯ ಸಮಸ್ಯೆಗಳ ಕುರಿತು ಪ್ರತಿಕ್ರಿಯಿಸಿ ಶಾಲೆ ಕಾಮಗಾರಿಗಳು ಯಾವುದು ಅಚ್ಚುಕಟ್ಟಾಗಿ ನಡೆಯುತ್ತಿಲ್ಲ ಬಿಸಿಯೂಟಕ್ಕೂ ತೊಂದರೆ ಯಾಗುತ್ತಿದೆ, ಕುಡಿಯುವ ನೀರಿನ ಸಮಸ್ಯೆ ಇದೆ ಶಾಲಾ ಕಾಮಗಾರಿಗೆ ಬಂದ 3 ಲಕ್ಷ ಹಣದಲ್ಲಿ ಮನಸು ಇಚ್ಛೆ ಬಂದ ರೀತಿಯಲ್ಲಿ ಗುತ್ತಿಗೆದಾರರು ಕೆಲಸ ಮಾಡಿ ಹೋಗಿ ಶಾಲೆಯ ಹಂಚುಗಳು ತೂತು ಬಿದ್ದಿವೆ. ಕೆಲ ಹಂಚುಗಳು ಹಾರಿ ಹೋಗಿವೆ ಎಂದರು

ಎಸ್ ಡಿ ಎಂ ಸಿ ಸದಸ್ಯ ಪ್ರಕಾಶ್ ಮಾತನಾಡಿ ಬಂದ ಅನುದಾನವನ್ನು ಒಳ್ಳೆಯ ಗುತ್ತಿಗೆದಾರರಿಗೆ ನೀಡಬೇಕಿತ್ತು, ತಪ್ಪು ಆಯ್ಕೆಯಿಂದ ಶಾಲೆಗೆ ಈ ದುಃಸ್ಥಿತಿ ನಿರ್ಮಾಣವಾಗಿದೆ. ಕಾಂಪೌಂಡ್  ಬಿದ್ದು ಹೋಗಿ ತುಂಬಾ ದಿನಗಳು ಕಳೆದವು ಪಕ್ಕದಲ್ಲಿ ಮುಖ್ಯ ರಸ್ತೆ ಇದೆ ಮಕ್ಕಳಿಗೆ ಏನಾದರು ತೊಂದರೆ ಆದರೆ ಯಾರು ಹೊಣೆ ಶಾಲೆಯು ಅವ್ಯವಸ್ಥೆಗಳಿಂದ ಕೂಡಿದೆ ಎಂದರು.

ವರದಿ:ಪುನೀತ್ ಕಡಿದಾಳು
9483811948
636176958

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments