Thursday, July 30, 2026
Homeಜಿಲ್ಲಾಸುದ್ದಿJCI ಬಿಳಾಲುಕೊಪ್ಪ ವತಿಯಿಂದ ಎಸ್ಟೇಟ್ ಕಾರ್ಮಿಕರಿಗೆ 'ಸ್ಟೀಲ್ ನೀರಿನ ಬಾಟಲಿ' ವಿತರಣೆ!

JCI ಬಿಳಾಲುಕೊಪ್ಪ ವತಿಯಿಂದ ಎಸ್ಟೇಟ್ ಕಾರ್ಮಿಕರಿಗೆ ‘ಸ್ಟೀಲ್ ನೀರಿನ ಬಾಟಲಿ’ ವಿತರಣೆ!

Telegram Group
Join Now

ಬಿಳಾಲುಕೊಪ್ಪ:  ಪರಿಸರ ಸಂರಕ್ಷಣೆ ಹಾಗೂ ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ, ಜೆಸಿಐ ಬಿಳಾಲುಕೊಪ್ಪ ವತಿಯಿಂದ ‘ಬಾಳೇಕೊಂಡ ಎಸ್ಟೇಟ್’ ನಲ್ಲಿ ಎಸ್ಟೇಟ್ ಕಾರ್ಮಿಕರಿಗೆ ಉಚಿತವಾಗಿ ಸ್ಟೀಲ್ ನೀರಿನ ಬಾಟಲಿಗಳನ್ನು ವಿತರಿಸುವ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

“ಆರೋಗ್ಯಕರ ಮತ್ತು ಸಂತೋಷದಾಯಕ ನಾಳೆಗಾಗಿ” ಎಂಬ ಆಶಯದೊಂದಿಗೆ ಈ ಪ್ರಾಜೆಕ್ಟ್ ಅನ್ನು ಹಮ್ಮಿಕೊಂಡಿದ್ದು, ಎಸ್ಟೇಟ್‌ಗಳಲ್ಲಿ ದಿನನಿತ್ಯ ಕಷ್ಟಪಟ್ಟು ದುಡಿಯುವ ಕಾರ್ಮಿಕರು ಪ್ಲಾಸ್ಟಿಕ್ ಬಾಟಲಿಗಳ ಬದಲಾಗಿ, ದೀರ್ಘಕಾಲ ಬಾಳಿಕೆ ಬರುವ ಹಾಗೂ ಆರೋಗ್ಯಕ್ಕೆ ಸುರಕ್ಷಿತವಾದ ಸ್ಟೀಲ್ ಬಾಟಲಿಗಳನ್ನು ಬಳಸುವಂತೆ ಸಾಮಾಜಿಕ ಅಭಿವೃದ್ಧಿಯ ಅಧಿಕಾರಿ JC ಸುಜನ್. S ಈ ಕುರಿತು ಮಾತನಾಡಿದರು.

ಏಕಬಳಕೆಯ ಪ್ಲಾಸ್ಟಿಕ್ ತಡೆಗಟ್ಟಿ ಹಸಿರು ಪರಿಸರ ನಿರ್ಮಾಣ ಮಾಡುವುದು ಕಾರ್ಮಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮತ್ತು ಶುದ್ಧ ನೀರಿನ ಸೇವನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜೆಸಿಐ ಬಿಳಾಲುಕೊಪ್ಪ ಈ ವಿಶಿಷ್ಟ ಹೆಜ್ಜೆಯನ್ನು ಇಟ್ಟಿದೆ.

ಕಾರ್ಯಕ್ರಮದಲ್ಲಿ ಜೆಸಿಐ ಬಿಳಾಲುಕೊಪ್ಪದ ಅಧ್ಯಕ್ಷರಾದ ಜೆಸಿ ವೈಶಾಖ ಶ್ರೇಣಿಕ್, ZVP JC ಅಶೋಕ್, ವಲಯಾಧಿಕಾರಿ JC Sujan, JC ಶ್ರೀಕಾಂತ್, ನಿಕಟ ಪೂರ್ವಾದ್ಯಕ್ಷರಾದ JC ಅಶ್ವಥ್, ಕಾರ್ಯದರ್ಶಿ JC ಸುಶಾಂತ್, JC ಶ್ರೇಣಿಕ್ ಜೈನ್ , JC ಗಿರೀಶ್, JC ರಂಗನಾಥ್, JC ಶುಭವಿಜಯರಂಗ, JC ನಮಿತ್ ಶೆಟ್ಟಿ ಅವರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments