Thursday, July 30, 2026
Homeಜಿಲ್ಲಾಸುದ್ದಿಸರ್ವೇ ನಂ. 74 ಗೋಮಾಳ ಜಾಗ ಅಕ್ರಮ ಒತ್ತುವರಿ ಆರೋಪ: ರಸ್ತೆ ಕೇಳಿದ್ದಕ್ಕೆ ಅವಾಚ್ಯ ಪದಗಳಿಂದ...

ಸರ್ವೇ ನಂ. 74 ಗೋಮಾಳ ಜಾಗ ಅಕ್ರಮ ಒತ್ತುವರಿ ಆರೋಪ: ರಸ್ತೆ ಕೇಳಿದ್ದಕ್ಕೆ ಅವಾಚ್ಯ ಪದಗಳಿಂದ ನಿಂದನೆ?!

Telegram Group
Join Now

ಮೂಡಿಗೆರೆ:  ತಾಲ್ಲೂಕಿನ ಗೌಡಹಳ್ಳಿ–ಹೊರಟ್ಟಿ ಗ್ರಾಮದಲ್ಲಿ ಸರ್ವೇ ನಂಬರ್ 74ರ ಸರ್ಕಾರಿ ಗೋಮಾಳ ಜಾಗ ಅಕ್ರಮವಾಗಿ ಒತ್ತುವರಿ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಹೌದು ಈ ಕುರಿತು ಹಲವು ವರ್ಷಗಳಿಂದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಗ್ರಾಮಸ್ಥ ಪ್ರದೀಪ್ ಆರೋಪಿಸಿದ್ದಾರೆ.

ಪಬ್ಲಿಕ್ ಇಂಪ್ಯಾಕ್ಟ್ ಜೊತೆ ಪ್ರತಿಕ್ರಿಯಿಸಿ ಮಾತನಾಡಿದ ಅವರು ಸರ್ಕಾರಿ ಗೋಮಾಳ ಜಾಗದಲ್ಲಿ ಅಕ್ರಮವಾಗಿ ಮಣ್ಣು ತೆಗೆಯುವುದು, ಮರಗಿಡಗಳನ್ನು ಕಡಿದು ನಾಶಪಡಿಸುವುದು ಸೇರಿದಂತೆ ವಿವಿಧ ರೀತಿಯ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಇದರಿಂದ ಸರ್ಕಾರಿ ಆಸ್ತಿಗೆ ಹಾನಿಯಾಗುತ್ತಿದ್ದು, ಪರಿಸರಕ್ಕೂ ಧಕ್ಕೆಯಾಗುತ್ತಿದೆ ಎಂದು ದೂರಿದ್ದಾರೆ.

ಇದೇ ವೇಳೆ ತೋಟಕ್ಕೆ ಹೋಗಲು ರಸ್ತೆ ಬಿಡುವಂತೆ ಕೇಳಿದ ಸಂದರ್ಭದಲ್ಲಿ ಒತ್ತುವರಿ ಆರೋಪ ಎದುರಿಸುತ್ತಿರುವ ಸುನೀಲ್ ಎಂಬ ವ್ಯಕ್ತಿ ಅವಾಚ್ಯ ಪದಗಳಿಂದ ನಿಂದನೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ವಿಷಯ ತರಲಾಗಿದ್ದ ಹಿನ್ನಲೆ ನಿನ್ನೆ ಸ್ಥಳಕ್ಕೆ ಆಗಮಿಸಿಸಿದ ಆಧಿಕಾರಿಗಳಿಗೂ ಮುಲಾಜೇ ಮಾಡದೆ ಒತ್ತುವರಿ ಭೂಮಿ ನನ್ನದು ಎಂಬುದಾಗಿ ವಾದಕ್ಕೆ ಇಳಿದಿರುವುದಾಗಿ ದೂರಿದ ಅವರು ಈತನ ಮೇಲೆ ಕಾನೂನು ಕ್ರಮ ಕೈ ಗೊಳ್ಳಬೇಕು ಎಂದು ಆಗ್ರಹಿಸಿದರು

ನನ್ನ ತಾಯಿ ಗಿರಿಜಮ್ಮ ಅವರು ಹಲವು ವರ್ಷಗಳಿಂದ ತಮ್ಮ ತೋಟಕ್ಕೆ ರಸ್ತೆ ಕಲ್ಪಿಸುವಂತೆ ಕಂದಾಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರಂತರವಾಗಿ ಮನವಿ ಸಲ್ಲಿಸುತ್ತಿದ್ದರೂ, ಇದುವರೆಗೆ ನ್ಯಾಯ ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಗೋಮಾಳ ಜಾಗದ ಅಕ್ರಮ ಒತ್ತುವರಿಯನ್ನು ತಕ್ಷಣ ತೆರವುಗೊಳಿಸಿ, ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಗ್ರಾಮಸ್ಥರ ಮಾತಿಗೆ ಬೆಲೆ ಇಲ್ಲದಂತಾಗಿದ್ದು, ಸರ್ಕಾರಿ ಭೂಮಿ ಕಬಳಿಕೆ ಆರೋಪದಡಿ ಸಂಬಂಧಪಟ್ಟ ಇಲಾಖೆ ಮತ್ತು ತಾಲೂಕು ಆಡಳಿತ ಸಮಗ್ರ ಪರಿಶೀಲನೆ ನಡೆಸಿ, ಸತ್ಯಾಸತ್ಯತೆ ಪರಿಶೀಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments