ಚಿಕ್ಕಮಗಳೂರು: ಉದ್ಯೋಗ ಹುಡುಕುತ್ತಿರುವ ನಿರುದ್ಯೋಗಿ ಯುವಕ-ಯುವತಿಯರಿಗೆ ಇಲ್ಲಿದೆ ಬಂಪರ್ ಆಫರ್. ಮುತ್ತೂಟ್ ಮನಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಖಾಲಿ ಇರುವ ಬ್ರ್ಯಾಂಚ್ ಎಕ್ಸಿಕ್ಯುಟಿವ್ (Branch Executive) ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನವನ್ನು ಆಯೋಜಿಸಲಾಗಿದೆ.
ಸೆಪ್ಟೆಂಬರ್ 3 ರಂದು ಬೆಳಿಗ್ಗೆ 10:30 ಗಂಟೆಗೆ ಖುದ್ದು ಹಾಜರಾಗಿ ಈ ಅವಕಾಶವನ್ನು ತಮ್ಮದಾಗಿಸಿಕೊಳ್ಳಬಹುದು.
ಚಿಕ್ಕಮಗಳೂರು ನಗರದ ಕೆ.ಎಂ. ರಸ್ತೆಯ ಅನ್ನಪೂರ್ಣ ಆಸ್ಪತ್ರೆ ಹತ್ತಿರವಿರುವ ಮೇಘಲ್ ಮನೆ ಆರ್ಕಡ್‍ನಲ್ಲಿರುವ ಮುತ್ತೂಟ್ ಮನಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕಚೇರಿಯಲ್ಲಿ ಈ ನೇರ ಸಂದರ್ಶನ ನಡೆಯಲಿದೆ.
ಅರ್ಜಿ ಸಲ್ಲಿಸಲು ಅಥವಾ ಸಂದರ್ಶನದಲ್ಲಿ ಪಾಲ್ಗೊಳ್ಳಲು ಇರುವ ಅರ್ಹತೆಗಳು ತುಂಬಾ ಸರಳವಾಗಿವೆ.
