Friday, July 24, 2026
Homeಕ್ರೈಮ್ಹಾಸನದಲ್ಲಿ ಒಂಟಿ ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ ಖದೀಮರು: ಕತ್ತಿ & ಲಾಂಗ್ ತೋರಿಸಿ ಬೆದರಿಕೆ!

ಹಾಸನದಲ್ಲಿ ಒಂಟಿ ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ ಖದೀಮರು: ಕತ್ತಿ & ಲಾಂಗ್ ತೋರಿಸಿ ಬೆದರಿಕೆ!

Telegram Group
Join Now

ಹಾಸನ: ಬಂಗಾರ, ದುಡ್ಡು ಇಟ್ಟಿದ್ದ ಬಾಕ್ಸ್ ಖಾಲಿ.. ಖಾಲಿ… ಮನೆಯ ಕಪಾಟು, ಬೆಡ್‌ಮೇಲೆ ವಸ್ತುಗಳು ಚೆಲ್ಲಾಪಿಲ್ಲಿ. ಆತಂಕದಲ್ಲಿ ಇರೋ ಕುಟುಂಬಸ್ಥರು.ಒಂಟಿ ಮನೆಗೆ ನುಗ್ಗಿದ ಮೂವರು ದುರ್ಷ್ಕಮಿಗಳು ಅಟ್ಟಹಾಸ ಮೆರೆದಿದ್ದಾರೆ.

ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ. ಅಷ್ಟಕ್ಕೂ,ಈ ಘಟನೆ ಹಾಸನದ ಆಲೂರು ತಾಲೂಕಿನ ಈಶ್ವರಹಳ್ಳಿ ಕೂಡಿಗೆಯ ರಾಷ್ಟ್ರೀಯ ಹೆದ್ದಾರಿ 75ರ ಸಮೀಪದ ಒಂಟಿ ಮನೆಯಲ್ಲಿ ನಡೆದಿದೆ.

ಮನೆಯ ಹಿಂದಿನ ಬಾಗಿಲಿನಿಂದ ಮಂಕಿ ಕ್ಯಾಪ್, ಮಾಸ್ಕ್ ಧರಿಸಿ,ಲಾಂಗ್ ಹಿಡಿದು ಮನೆಗೆ ನುಗ್ಗಿದ್ರು ಖದೀಮರು.ನುಗ್ಗಿದ ಕಳ್ಳರು ಮೊದಲಿಗೆ ಮನೆಯ ಮಗನ ಕೈ ಕಾಲಿಗೆ ಹಗ್ಗ ಹಾಕಿ ಕಟ್ಟಿದ್ರು.ನಂತ್ರ ಚಿನ್ನ, ಹಣ ಎಲ್ಲಿ ಇಟ್ಟಿದ್ದೀರ ಕೊಡಿ ಇಲ್ಲದಿದ್ರೆ ಸಾಯಿಸಿ ಬಿಡ್ತಿವಿ ಅಂತ ಹೆದರಿಸಿದ್ದಾರೆ.ನಂತರ,ಮನೆ ಜಾಲಡಿ ಮನೆಯಲ್ಲಿದ್ದ ಸುಮಾರು 60 ಗ್ರಾಂ ಚಿನ್ನ,50 ಗ್ರಾಂ ಬೆಳ್ಳಿ, 25 ಸಾವಿರ ನಗದು, 5-6 ಮೊಬೈಲ್, ಕೈಗಡಿಯಾರವನ್ನ ದೋಚ್ಕೊಂಡು ಹೋಗಿದ್ದಾರೆ.ಮನೆಯ ಮಹಿಳೆಯ ಕತ್ತಿನಲ್ಲಿದ್ದ ಮಂಗಳಸೂತ್ರವನ್ನೂ ಕತ್ತರಿಸಿ ಕಸಿದುಕೊಂಡಿದ್ದಾರೆ ಖದೀಮರು.

ದರೋಡೆ ವೇಳೆ ಮನೆಯವರು ಜೀವ ಉಳಿದ್ರೆ ಸಾಕು ಅಂತ ಎಲ್ಲವನ್ನೂ ಕೊಟ್ಟಿದ್ದಾ ರೆ.ಮಗನ ಮೇಲೆ ಹಲ್ಲೆ ಆಗಿದ್ದು ಗಾಯಗೊಂಡಿದ್ದಾನೆ. ದುರ್ಷ್ಕಮಿಗಳು ಕನ್ನಡದಲ್ಲೇ ಮಾತು ಆಡಿದ್ರು ಉಚ್ಚಾರಣೆ ಬೇರೆ ರೀತಿ ಇತ್ತು. ಇಲ್ಲಿಯವರು ಅಲ್ಲ ಬೇರೆ ರಾಜ್ಯದವರು ಅನ್ನೋ ಶಂಕೆಯನ್ನ ಮನೆಯವ್ರು ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ಸಿಸಿಟಿವಿ ಕ್ಯಾಮರ ಇಲ್ಲ, ಒಂಟಿ ಮನೆಯನ್ನೇ ಟಾರ್ಗೆಟ್ ಮಾಡಿಕೊಂಡು ದರೋಡೆ ಮಾಡಿದ್ದಾರೆ

ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಖದೀಮರಿಗಾಗಿ ಬಲೆ ಬೀಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments