Monday, September 21, 2026
Homeಜಿಲ್ಲಾಸುದ್ದಿಶೃಂಗೇರಿ ಇ.ಓ ಮೇಲೆ ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಂದ ಹಲ್ಲೆ!

ಶೃಂಗೇರಿ ಇ.ಓ ಮೇಲೆ ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಂದ ಹಲ್ಲೆ!

Telegram Group
Join Now

ಬಾಳೆಹೊನ್ನೂರು: ಶೃಂಗೇರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣ ಅಧಿಕಾರಿ ಮೇಲೆ ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು‌ ಹಲ್ಲೆ ನಡೆಸಿರುವ ಘಟನೆ ಬಾಳೆಹೊನ್ನೂರು ವ್ಯಾಪ್ತಿಯ ಹೇರೂರು ಬಳಿ ನಡೆದಿದೆ. ಈ ಹಿನ್ನೆಲೆಯಲ್ಲಿ ಬಾಳೆಹೊನ್ನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ:

ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರ್ ವ್ಯಾಪ್ತಿಯ ಹೇರೂರು ಬಳಿ ದಿ.19 ರಂದು  ಸಿಎಂ ಕಾರ್ಯಕ್ರಮ ಮುಗಿಸಿ ವಾಪಸ್ ಹಿಂದಿರುಗಿ ಹೋಗುವಾಗ ನನಗೆ ಹಸಿವಾಗಿದ್ದು ಆದ್ದರಿಂದ ನನ್ನ ಜೊತೆಯಲ್ಲಿದ್ದ ಕೊಪ್ಪ ಇ.ಓ ಆದ ನವೀನ್ ಕುಮಾರ್ ಮತ್ತು ನನ್ನ ಸಿಬ್ಬಂದಿಯಾದ ತಾಲೂಕು ಪಂಚಾಯ್ತಿ ಮಂಜು ರವರು ಮಾನ್ಯ ಶಾಸಕರ ಆಪ್ತ ಸಹಾಯಕ ರಾಜೇಂದ್ರರವರೊಂದಿಗೆ ನವರತ್ನ ಹೋಟೆಲ್ ಹೇರೂರು ಗೆ ನಮ್ಮ ಆಫೀಸ್ ಜೀಪನಲ್ಲಿ ಹೋಗಿದ್ದು, ರಾತ್ರಿ 7-30 ಗಂಟೆಯಾಗಿತ್ತು.

ಊಟ ಮುಗಿಸಿ ವಾಪಸ್ಸು ಹೊರಗಡೆ ಬರುವಾಗ ಕುಕ್ಕೂಡಿಗೆ ರವೀಂದ್ರ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯರು ಹಾಲಿ ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನನ್ನನ್ನು ಅಡ್ಡಗಟ್ಟಿ ಬೋಳಿಮಗನೇ ಶೃಂಗೇರಿಯಲ್ಲಿ ನೀನು ಹೇಗೆ ಕೆಲಸ ಮಾಡುತ್ತಿಯಾ ಎಂದು ಕೈಯಿಂದ ನನ್ನ ಮುಖಕ್ಕೆ ಗುದ್ದಿ ಹಲ್ಲೆ ನಡೆಸಿ ಕೆಳಗೆ ಬೀಳಿಸಿದ್ದು ನಂತರ ಒದ್ದು ಬಟ್ಟೆಯನ್ನು ಹರಿದು ನನ್ನ ಕೊರಳಲಿದ್ದ ಸುಮಾರು 4 ಲಕ್ಷ ಮೌಲ್ಯದ ಸರವನ್ನು ಕೈಯಿಂದ ಕಿತ್ತು ಎಸೆಯಲು ಯತ್ನಿಸಿದ್ದು ಸರ ಕಟ್ ಆಗಿರುತ್ತೆ ನಂತರ ರವೀಂದ್ರ ರವರು, ನಾನು ಆಡಳಿತ ಪಕ್ಷದ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷನಾಗಿದ್ದು ನೀನು ಈ ಕ್ಷೇತ್ರದಲ್ಲಿ ಹೇಗೆ ಕೆಲಸ ನಿರ್ವಹಿಸುತ್ತೀಯಾ ನಿನ್ನ ಸೇವೆಗೆ ರಾಜಿನಾಮೆ ಕೊಡಬೇಕು ಅಥವಾ ಇಲ್ಲಿಂದ ವರ್ಗಾವಣೆಯಾಗಬೇಕು ಎಂದು ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ತಾಲೂಕು ಪಂಚಾಯತ್ ಇಒ ಸುದೀಪ್ ದೂರು ದಾಖಲಿಸಿದ್ದಾರೆ.

ಬಾಳೆಹೊನ್ನೂರ್ ಸರ್ಕಾರಿ ಆಸ್ಪತ್ರೆಯಲ್ಲಿ ಹೇಳಿಕೆ ನೀಡಿರುತ್ತಾರೆ. ಈ ಕುರಿತು ಅಧಿಕಾರಿಗಳು ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!